ಹೊಸದುರ್ಗ ಪಟ್ಟಣದಿಂದ ಸುಮಾರು 30ಕಿ.ಮೀ ದೂರದಲ್ಲಿರುವ ಗುಡ್ಡದ ನೇರಲಕೆರೆಯ ‘ದಶರಥ ರಾಮೇಶ್ವರ ವಜ್ರ’ ಅತ್ಯಂತ ಪ್ರಾಚೀನ ಕ್ಷೇತ್ರ. ವೃದ್ಧ ತಂದೆತಾಯಿಗಳನ್ನು ಹೆಗಲ ಮೇಲೆ ಹೊತ್ತು ಅವರಿಗೆ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸಿದ ಶ್ರವಣ ಕುಮಾರನ ಪ್ರಸಂಗ ‘ರಾಮಾಯಣ’ದಲ್ಲಿ ಉಲ್ಲೇಖವಾಗಿದೆ. ಮಾತಾ ಪಿತೃಗಳ ಸೇವೆಗೆ ಹೆಸರಾದವನು ಶ್ರವಣ ಕುಮಾರ. ಅಂಧರಾದ ತಂದೆ ತಾಯಿಗೆ (ತಂದೆ ತಾಂಡವಮುನಿ) ಪುಣ್ಯಕ್ಷೇತ್ರಗಳ ದರ್ಶನ ಮಾಡಿಸುವ ಸಂದರ್ಭದಲ್ಲಿ ಗುಡ್ಡದ ನೇರಲಕೆರೆ ಪ್ರದೇಶಕ್ಕೆ ಬರುತ್ತಾನೆ. ಬಾಯಾರಿದ್ದ ತಂದೆ ತಾಯಿಯರನ್ನು ಒಂದು ಮರದ ಕೆಳಗೆ ಕುಳ್ಳಿರಿಸಿ ನೀರು ತರಲು ಸಮೀಪದ ಕೊಳದ ಬಳಿಗೆ ಹೋಗುತ್ತಾನೆ. ಇದೇ ಸಮಯದಲ್ಲಿ ಅಲ್ಲಿ ದಶರಥ ಮಹಾರಾಜ ಶಬ್ಧವೇಧಿ ಬಾಣ ಪ್ರಯೋಗದಲ್ಲಿ ನಿರತನಾಗಿರುತ್ತಾನೆ. ಕೊಳದಲ್ಲಿ ನೀರಿನ ಶಬ್ದ ಕೇಳುತ್ತದೆ. ಯಾವುದೋ ಕಾಡು ಪ್ರಾಣಿ ನೀರು ಕುಡಿಯುತ್ತಿದೆ ಎಂದು ಭಾವಿಸಿದ ದಶರಥ ಶಬ್ದ ಬಂದ ದಿಕ್ಕಿಗೆ ಬಾಣ ಪ್ರಯೋಗಿಸುತ್ತಾನೆ. ಅದು ಶ್ರವಣನಿಗೆ ತಗುಲುತ್ತದೆ. ನೋವಿನಿಂದ ಶ್ರವಣ ಕೂಗಿಕೊಳ್ಳುತ್ತಾನೆ. ಅದನ್ನು ಕೇಳಿಸಿಕೊಂಡ ದಶರಥ ಅಲ್ಲಿಗೆ ಬರುತ್ತಾನೆ. ಬಾಯಾರಿದ ತನ್ನ ತಂದೆ ತಾಯಿಗಳಿಗೆ ನೀರು ಒಯ್ಯಲು ಬಂದುದಾಗಿ ಶ್ರವಣ ದಶರಥನಿಗೆ ತಿಳಿಸಿ ಅಲ್ಲೇ ಪ್ರಾಣ ಬಿಡುತ್ತಾನೆ.

ನಂತರ ದಶರಥನೇ ಶ್ರವಣ ಕುಮಾರನ ತಂದೆ ತಾಯಿಗಳ ಬಳಿ ಹೋಗಿ ಅವರಿಗೆ ನೀರು ಕೊಡುತ್ತಾನೆ. ತನ್ನಿಂದ ಆದ ಅಚಾತುರ್ಯವನ್ನು ತಿಳಿಸಿ ನಿಮ್ಮ ಮಗ ಮೃತಪಟ್ಟನೆಂದು ಹೇಳುತ್ತಾನೆ. ಮಗ ಹತನಾದ ಸಂಗತಿ ತಿಳಿದು ಕೋಪಗೊಂಡ ಶ್ರವಣನ ತಂದೆ ತಾಯಿ ದಶರಥನಿಗೆ ಶಾಪ ಕೊಡುತ್ತಾರೆ. ಮಗನ ಅಗಲಿಕೆ ನೋವು ತಾಳಲಾರದೆ ಪ್ರಾಣ ಬಿಡುತ್ತಾರೆ. ದಶರಥ ಶಾಪ ವಿಮೋಚನೆಗಾಗಿ ಮಗ ಶ್ರೀರಾಮನೊಂದಿಗೆ ಸಮೀಪದ ಗವಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಾನೆ. ದಶರಥ ಮತ್ತು ರಾಮ ಇಬ್ಬರೂ ಸೇರಿ ಪೂಜಿಸಿದ ಲಿಂಗಕ್ಕೆ ದಶರಥ ರಾಮೇಶ್ವರ ಎಂಬ ಹೆಸರು ಬಂತು ಎಂಬ ಐತಿಹ್ಯವಿದೆ.

ಪುರಾಣ ಕಾಲದಿಂದ ಈ ಕ್ಷೇತ್ರಕ್ಕೆ ‘ದಶರಥ ರಾಮೇಶ್ವರ ವಜ್ರ’ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದೆ. ಇಲ್ಲಿ ಶ್ರವಣಕುಮಾರ ಮತ್ತು ಅವನ ತಂದೆ ಹಾಗೂ ತಾಯಿಯರ ಸಮಾಧಿಗಳಿವೆ. ಕ್ಷೇತ್ರದ ಸುತ್ತ ಬೆಟ್ಟಗಳಿವೆ. ಕುರುಚಲು ಕಾಡಿದೆ. ಇಲ್ಲಿನ ಬೆಟ್ಟಗಳನ್ನು ಉತ್ತರೆ ಬೆಟ್ಟ ಸಾಲುಗಳೆಂದು ಕರೆಯುತ್ತಾರೆ.

ಶ್ರಾವಣ ಮಾಸದಲ್ಲಿ ದಶರಥ ರಾಮೇಶ್ವರ ಕ್ಷೇತ್ರದಲ್ಲಿ ನಿತ್ಯ ರುದ್ರಾಭಿಷೇಕ ನಡೆಯುತ್ತದೆ. ಇಲ್ಲಿ ಕೋತಿಗಳು ಹಿಂಡು ಹಿಂಡಾಗಿ ವಾಸಿಸುತ್ತವೆ. ಇಲ್ಲಿಗೆ ಬರುವ ಭಕ್ತರು ಕೋತಿಗಳಿಗೆ ಎಡೆ ಹಾಗೂ ಹಣ್ಣುಗಳನ್ನು ನೀಡುತ್ತಾರೆ. ದಶರಥ ವಜ್ರದ ಸಮೀಪ ಕಂಚೀ ವರದರಾಜಸ್ವಾಮಿ ಬೆಟ್ಟ, ಗಿಳಿ ವಜ್ರ, ರಂಗನಾಥಸ್ವಾಮಿ ವಜ್ರ ಹೆಸರಿನ ಕ್ಷೇತ್ರಗಳಿವೆ.

ಪ್ರತಿ ವರ್ಷ ಶಿವರಾತ್ರಿ ನಂತರದ ಹನ್ನೊಂದನೆ ದಿನ ದಶರಥ ರಾಮೇಶ್ವರ ರಥೋತ್ಸವ ನಡೆಯುತ್ತದೆ. ಗುಡ್ಡದ ನೇರಲಕೆರೆಯಲ್ಲಿ ದಶರಥ ರಾಮೇಶ್ವರ ಉತ್ಸವ ಮೂರ್ತಿಯ ದೇವಸ್ಥಾನವಿದೆ. ಅದನ್ನೇ ರಥದಲ್ಲಿ ಪ್ರತಿಷ್ಠಾಪಿಸಿ ಉತ್ಸವ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಕಂಚೀಪುರದ ಶ್ರೀ ಕಂಚೀವರದರಾಜ ಸ್ವಾಮಿ, ದಸೂಡಿಯ ಆಂಜನೇಯ ದೇವರುಗಳ ಸಂಗಮವಾಗುತ್ತವೆ.

ಈ ಕ್ಷೇತ್ರಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಬರುತ್ತಾರೆ. ಸರಳ ವಿವಾಹಗಳಿಗೂ ಇಲ್ಲಿ ಅವಕಾಶವಿದೆ. ಅದಕ್ಕಾಗಿ ಸಮುದಾಯ ಭವನವಿದೆ. ಉಳಿದುಕೊಳ್ಳಲು ಸಮೀಪದ ಹೊಸದುರ್ಗ ಅಥವಾ ಹಿರಿಯೂರಿನಲ್ಲಿ ಲಾಡ್ಜ್ಗಳಿವೆ. ನೇರಲಕೆರೆ ಗ್ರಾಮದಲ್ಲಿ ಕಾರ್ತಿಕ ಮಾಸದಲ್ಲಿ ಲಕ್ಷ ದೀಪೋತ್ಸವ, ದಸರಾ ಸಂದರ್ಭದಲ್ಲಿ ದಸರಾ ಉತ್ಸವ ವಿಜೃಂಭಣೆಯಿಂದ ನಡೆಯುತ್ತವೆ.

ಕ್ಷೇತ್ರದ ದಾರಿ: ದಶರಥ ರಾಮೇಶ್ವರಕ್ಕೆ ಬರುವವರು ಚಿತ್ರದುರ್ಗದಿಂದ ಹೊಸದುರ್ಗಕ್ಕೆ ಬಂದು ಅಲ್ಲಿಂದ ನೇರಲಕೆರೆಗೆ ಹೋಗಬಹುದು. ಖಾಸಗಿ ಬಸ್ಗಳ ಸೌಲಭ್ಯವಿದೆ. ಬೆಂಗಳೂರಿನಿಂದ ಬರುವವರು ತುಮಕೂರು-ಚಿಕ್ಕನಾಯ್ಕನಹಳ್ಳಿ ಮಾರ್ಗವಾಗಿ ಹುಳಿಯಾರಿಗೆ ಬಂದು ಅಲ್ಲಿಂದ ನೇರಲಕೆರೆಗೆ ಹೋಗಬಹುದು.

ಹೆಚ್ಚಿನ ಮಾಹಿತಿಗೆ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಎಂ. ರಮೇಶ ಅವರನ್ನು ಸಂಪರ್ಕಿಸಬಹುದು. ಅವರ ದೂರವಾಣಿ ನಂಬರ್: 08199-200779.

ಸೇವಾ ವಿವರ
* ವಿಶೇಷ ರುದ್ರಾಭಿಷೇಕ
* ಪಂಚಾಮೃತಾಭಿಷೇಕ
*  ಬಿಲ್ವಾರ್ಚನೆ
* ಶಿವ ಸಹಸ್ರನಾಮ
* ಹೋಳಿಗೆ ತುಪ್ಪದ ಆರಾಧನೆ ಈ ಕ್ಷೇತ್ರದ ವಿಶೇಷ. ಭಕ್ತರು ಹೋಳಿಗೆ, ತುಪ್ಪ ತಂದು ಆರಾಧನೆ ಮಾಡಿಸಬೇಕು. ಉಳಿದ ಸೇವೆಗಳು ಉಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.