ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದ ಸುಂದರ ಕ್ಯೂನ್‌ ಜಲಪಾತ

Last Updated 23 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಕ್ಯೂನ್‌ ಜಲಪಾತವು ಭಾರತದ ಎತ್ತರದ ಜಲಪಾತಗಳಲ್ಲಿ 14ನೇ ಸ್ಥಾನ ಪಡೆದಿದೆ. ಇದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೊನಾವದಲ್ಲಿದೆ. 660 ಅಡಿ ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯೋಣ.

* ಶ್ರಖಂಡಲಾ–ಲೊನವಾ ಕಣಿವೆಯಲ್ಲಿರುವ ಅತ್ಯಂತ ಸುಂದರ ಜಲಪಾತವಾಗಿದ್ದು, ಮಳೆಗಾಲದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡುವುದು ಅತ್ಯಂತ ಖುಷಿ ನೀಡುವ ಸಂಗತಿ.

*ಸುತ್ತ ಹಸರಿನ ನಯನಮನೋಹರ ದೃಶ್ಯಗಳೇ ಇರುವುದರಿಂದ ಈ ಜಲಪಾತಕ್ಕ ಪ್ರವಾಸಕ್ಕೆ ಬರುವವರ ಸಂಖ್ಯೆ ಹೆಚ್ಚು. ಮಳೆಗಾಲದ ಮಧ್ಯಭಾಗದಲ್ಲಿ ಈ ಜಲಪಾತಕ್ಕೆ ಭೇಟಿ ನೀಡುವುದು ಸೂಕ್ತ

* ಬೆಳಿಗ್ಗೆ 8ರಿಂದ ಸಂಜೆ 6ರ ಅವಧಿಯಲ್ಲಿ ಜಲಪಾತ ವೀಕ್ಷಣೆಗೆ ಸಮಯ ನಿಗದಿಪಡಿಸಲಾಗಿದೆ.

* ಈ ಪ್ರದೇಶವು ಮಾವಿನಹಣ್ಣಿಗೂ ಬಹಳ ಪ್ರಸಿದ್ಧಿಯಾಗಿದ್ದು, ಅಲ್ಫಾನ್ಸೊ ತಳಿಯ ಮಾವಿನಹಣ್ಣುಗಳು
ಹೇರಳವಾಗಿ ಸಿಗುತ್ತವೆ.

* ಇಲ್ಲಿಗೆ ಬರುವ ಬಹುತೇಕ ಪ್ರವಾಸಿಗರು ಈಜುವುದು, ಜಾರಾಟದಲ್ಲಿ ತೊಡಗಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT