ಇಟಲಿಯ ಉತ್ತರದಲ್ಲಿರುವ ಮಿಲಾನ್ ಪಟ್ಟಣದಿಂದ 70 ಕಿ.ಮಿ. ದೂರದಲ್ಲಿದೆ ಕೋಮೊ ಸರೋವರ. ಅದರ ದಡದಲ್ಲಿ ಬೆಲ್ಲಾಜಿಯೊ ಎಂಬ ಚಿಕ್ಕ ಪಟ್ಟಣವಿದೆ. ರೋಮನ್ ಸಾಮ್ರಾಜ್ಯದ ಕಾಲದಿಂದಲೂ ಪಾಕೃತಿಕ ಸೊಬಗಿಗೆ ಹೆಸರುವಾಸಿಯಾಗಿರುವ ಬೆಲ್ಲಾಜಿಯೊವನ್ನು ‘ಕೋಮೊ ಸರೋವರದ ರತ್ನ’ ಎಂದು ಕರೆಯುತ್ತಾರೆ. ಪ್ರಖ್ಯಾತ ಆಲ್ಫ್ಸ್ ಪರ್ವತದ ದಡದಲ್ಲಿರುವ ಈ ಪಟ್ಟಣ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಸ್ಥಾನ ಪಡೆದಿದ್ದು, ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ.

ಯೂರೋಪ್ನಲ್ಲಿದ್ದರೂ ಚಳಿಗಾಲದಲ್ಲಿ ಇಲ್ಲಿ ಹಿಮ ಸುರಿಯುವುದಿಲ್ಲ. ಇಟಲಿಯ ಇತರೆ ಸ್ಥಳಗಳ ಹಾಗೆ ಬೇಸಿಗೆಯಲ್ಲಿ ಅಂಥ ಸೆಕೆಯೂ ಆಗುವುದಿಲ್ಲ. ಸಂಜೆ ಸರೋವರದ ಮೇಲೆ ಬೀಸುವ ತಣ್ಣನೆಯ ಗಾಳಿ, ಮುದ ನೀಡುವ ವಾತಾವರಣವನ್ನು ಸೃಷ್ಟಿಸುತ್ತದೆ. ಇಂಥ ಅಪರೂಪದ ವಾತಾವರಣವೇ ಪ್ರವಾಸಿಗರನ್ನು ಸದಾಕಾಲ ಆಕರ್ಷಿಸಲು ಕಾರಣವಾಗಿದೆ.

ಹಾಲಿವುಡ್ ತಾರೆಯರ ತಾಣ

ನೀಲಿ ಬಣ್ಣದ ಕೋಮೊ ಸರೋವರದ ನೀರು, ದೂರದಲ್ಲಿ ಕಾಣುವ ಬೃಹತ್ ಪರ್ವತಶ್ರೇಣಿ, ಹಳೆಯ ಕಾಲದ ಹೆಂಚಿನ ಮನೆಗಳು, ಅದಕ್ಕೆ ಹೊಂದಿಕೊಂಡಿರುವ ಸುಂದರ ಉದ್ಯಾನ, ಅದರಲ್ಲಿ ಕಂಗೊಳಿಸುವ ವಿವಿಧ ಬಣ್ಣದ ಹೂವುಗಳು, ಅಬ್ಬಾ! ಸುಂದರ ಜಗತ್ತೇ ನಮ್ಮೆದುರು ತೆರೆದುಕೊಳ್ಳುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಆಗರ್ಭ ಶ್ರೀಮಂತರನ್ನು, ಅದರಲ್ಲಿಯೂ ಖ್ಯಾತ ಹಾಲಿವುಡ್ ತಾರೆಯರು ಇಲ್ಲಿ ಉಳಿಯಲು ಹಳೆಯ ಹವೇಲಿಗಳನ್ನು ಖರೀದಿಸಿದ್ದಾರೆ. ಅವುಗಳ ಸೊಬಗನ್ನು ನಾವು ಹೊರಗಿನಿಂದ ನೋಡಬಹುದು. ಅಂದ ಹಾಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ – ರಣವೀರ್ ಸಿಂಗ್ ವಿವಾಹ ನಡೆದಿದ್ದು ಇದೇ ಸರೋವರದ ದಂಡೆಯಲ್ಲಿ.

ಬೆಲ್ಲಾಜಿಯೊ ಪಟ್ಟಣ ಎನ್ನುವುದರಕ್ಕಿಂತ ಒಂದು ಚಿಕ್ಕ ಹಳ್ಳಿ ಎನ್ನಬಹುದು. ಎಲ್ಲ ಕಡೆಗೂ ನಡೆದುಕೊಂಡೇ ಹೋಗಬಹುದು. ವಾಹನದ ದಟ್ಟಣೆ ಇಲ್ಲದ, ಚಿಕ್ಕ ಮತ್ತು ಪುರಾತನಕಾಲದ ರಸ್ತೆಗಳಲ್ಲಿ ನಡೆಯುತ್ತಾ ಇಕ್ಕೆಲಗಳಲ್ಲಿ ಹೂವು, ಹಸಿರು ಬಳ್ಳಿಗಳಿಂದ ಅಲಂಕೃತವಾದ ಕಟ್ಟಡಗಳ ಸೌಂದರ್ಯವನ್ನು ಆಸ್ವಾದಿಸಬಹುದು. ಈ ಊರನ್ನು ಸುತ್ತಾಡುವುದೇ ಒಂದು ವಿಶಿಷ್ಟ ಪ್ರವಾಸದ ಅನುಭವ ನೀಡುತ್ತದೆ. ಅಲ್ಲಿರುವ ರೆಸ್ಟೊರೆಂಟ್ಗಳಲ್ಲಿ ಕುಳಿತು ಇಟಾಲಿಯನ್ ಕೆಪೆಚಿನೊ ಕಾಫಿ ಸವಿಯುತ್ತಾ, ವಿವಿಧ ದೇಶಗಳಿಂದ ಬರುವ ಪ್ರವಾಸಿಗರನ್ನು ನೋಡುತ್ತಾ ಕುಳಿತರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ.

ಕೋಮೊ ಸರೋವರ

ಕೋಮೊ ಸರೋವರದಲ್ಲಿ ಪ್ರವಾಸಿಗರನ್ನು ಕೊಂಡೊಯ್ಯಲು ಬೋಟ್ ಟ್ಯಾಕ್ಸಿಗಳು ಸದಾ ಸಿದ್ಧವಾಗಿರುತ್ತವೆ. ಈ ಚಿಕ್ಕ ಬೋಟ್ನಲ್ಲಿ ಪಯಣಿಸುತ್ತಾ ಬೆಲ್ಲಾಜಿಯೊವನ್ನು ವೀಕ್ಷಿಸುವುದೇ ಒಂದು ವಿಶಿಷ್ಟ ಅನುಭವ.

ಸರೋವರದ ಮಧ್ಯೆ ಇರುವ ಸಣ್ಣ ದ್ವೀಪಗಳನ್ನು, ಅವುಗಳ ದಡದಲ್ಲಿರುವ ಸುಂದರ ಹೆಂಚಿನ ವಿಲ್ಲಾಗಳನ್ನು ನೋಡುತ್ತಿದ್ದರೆ ನಾವು ಯಾವುದೋ ಮಾಯಾನಗರಿಯಲ್ಲಿ ಇದ್ದೇವೆ ಎನ್ನಿಸುತ್ತದೆ. ನಡೆದು ನಡೆದು ಸುಸ್ತಾದರೆ, ಸಮೀಪದಲ್ಲೇ ಬಾಡಿಗೆಗೆ ಸೈಕಲ್ಗಳು ಸಿಗುತ್ತವೆ. ಅವುಗಳನ್ನು ಏರಿ, ಅಲ್ಲಿನ ಉದ್ಯಾನಗಳನ್ನು ಸುತ್ತಾಡಬಹುದು. ನೀರಿನಲ್ಲಿ ಆಟವಾಡುವ ಆಸಕ್ತಿ ಇದ್ದರೆ, ಜಲಕ್ರೀಡೆ ಆಡಲು ಸಾಕಷ್ಟು ಜಲತಾಣಗಳಿವೆ. ಪ್ರವಾಸಿಗರಿಗೆ ಬೇಕಾದ ಸಕಲ ಸೌಲಭ್ಯಗಳೂ ಬೆಲ್ಲಾಜಿಯೊದಲ್ಲಿವೆ.

ಈ ಚಿಕ್ಕ ಊರಿನ ಪ್ರತಿಯೊಂದು ಜಾಗದಲ್ಲೂ ಇತಿಹಾಸದ ಹೆಜ್ಜೆ ಗುರುತುಗಳಿವೆ. ಪುರಾತನ ಚರ್ಚ್, ಹಳೆಯ ಮನೆಗಳೇ ಅದಕ್ಕೆ ಸಾಕ್ಷಿ. ರೋಮನ್ ದೊರೆಗಳು ಇಲ್ಲಿ ತಮ್ಮ ಸೇನಾ ನೆಲೆಯನ್ನು ಮಾಡಿಕೊಂಡಿದ್ದರು ಎಂಬುದಕ್ಕೆ ಕುರುಹುಗಳಿವೆ. ಜೂಲಿಯಸ್ ಸೀಸರ್ ಮತ್ತು ಗ್ರೀಕ್ ಸಮುದಾಯದವರೂ ಇಲ್ಲಿ ವಾಸವಾಗಿದ್ದರು ಎಂಬುದಕ್ಕೆ ದಾಖಲೆಗಳಿವೆ. ಅಲ್ಲಲ್ಲೇ ಒಲಿವ್ ಗಿಡಗಳ ತೋಟಗಳು ಕಾಣುತ್ತವೆ. ಜತೆಗೆ ಚೆಸ್ನಟ್ ಗಿಡಗಳ ತೋಟಗಳನ್ನೂ ನೋಡಬಹುದು. ಹಾಗೆಯೇ ಮಧ್ಯ ಯುಗದ ಸುಂದರ ಚರ್ಚ್ಗಳು ಗಮನ ಸೆಳೆಯುತ್ತವೆ.

ಪಾರಂಪರಿಕ ಸೌಂದರ್ಯ ರಕ್ಷಣೆ

ಎಂಬತ್ತರ ದಶಕದಲ್ಲಿ ಬೆಂಗಳೂರಿನ ಗಾಂಧಿಬಜಾರ್ನಲ್ಲಿ ಸಾಕಷ್ಟು ಹೆಂಚಿನ ಮನೆಗಳಿದ್ದವು. ಆದರೆ ನಗರ ಬೆಳೆಯುತ್ತಿದ್ದಂತೆಯೇ ಆ ಹೆಂಚಿನ ಮನೆಗಳು ಮಾಯವಾಗಿ ಕಾಂಕ್ರೀಟ್ ಕಟ್ಟಡ ತಲೆ ಎತ್ತಿದವು. ಆದರೆ ಬೆಲ್ಲಾಜಿಯೊದಲ್ಲಿ ಹೆಂಚಿನ ಮನೆಗಳನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಅದೇ ಆ ಊರಿಗೆ ವಿಶೇಷ ಸೊಬಗನ್ನು ನೀಡುತ್ತಿದೆ. ಇವುಗಳನ್ನು ಕೆಡವಿ ಬೃಹತ್ ಕಟ್ಟಡಗಳನ್ನು ಕಟ್ಟುವ ಕೆಲಸ ಮಾಡದಿರುವುದರಿಂದ ಬೆಲ್ಲಾಜಿಯೊದ ಸೌಂದರ್ಯ ಹೆಚ್ಚಿದೆ. ಆದರೆ ನಮಗೆ ಹಿಂದಿನದ್ದನ್ನು ಹೊಸಕಿ ಹಾಕಿ ಹೊಸದನ್ನು ಸೃಷ್ಟಿಸುವ ಧಾವಂತ. ಬಾಹ್ಯ ಸೌಂದರ್ಯವನ್ನು ಅರಿತು ಅದರೊಟ್ಟಿಗೆ, ಅದಕ್ಕೆ ಹೊಂದುವಂತಹ ಕಟ್ಟಡಗಳ ವಿನ್ಯಾಸವನ್ನು ಮಾಡುವ ಕಲೆಯನ್ನು ನಾವು ಕಳೆದುಕೊಂಡ ಹಾಗಿದೆ.

ಬೆಲ್ಲಾಜಿಯೊ ಶ್ರೀಮಂತ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ಇಲ್ಲಿರುವ ಹೋಟೆಲ್ ಮತ್ತು ರೆಸ್ಟೊರೆಂಟ್ಗಳು ಬಲು ದುಬಾರಿ. ಇದೇ ಕಾರಣಕ್ಕಾಗಿ ಇಲ್ಲಿಗೆ ಬೆಳಿಗ್ಗೆ ಬಂದು ಸಂಜೆ ಮರಳಿ ಹೋಗುವ ಪ್ರವಾಸಿಗರ ಸಂಖ್ಯೆಯೇ ಹೆಚ್ಚು. ಅದರೆ ನನ್ನ ಸುಯೋಗ, ಅಲ್ಲಿರುವ ರಾಕ್ಫೆಲರ್ ಕೇಂದ್ರದಲ್ಲಿ ನಡೆದ ಕಾರ್ಯಾಗಾರದಲ್ಲಿ ಭಾಗವಹಿಸಲು ಆಮಂತ್ರಣ ಬಂದಿದ್ದರಿಂದ, ಅಲ್ಲಿ ಎರಡು ದಿನ ಉಳಿಯುವ, ಅವಕಾಶ ಒದಗಿ ಬಂದಿತ್ತು. ಶಿರಸಿಯ ಈ ಬಡಪಾಯಿಗೂ ಶ್ರೀಮಂತರ ಪ್ರವಾಸಿ ಸ್ಥಳವನ್ನು ನೋಡುವ, ಅಲ್ಲಿನ ಸೊಬಗನ್ನು ಸವಿಯುವ ಅವಕಾಶ ಒದಗಿ ಬಂತು.ಬಾಕ್ಸ್

ಹೋಗುವುದು ಹೇಗೆ?

ಮಿಲಾನ್ಗೆ ಭಾರತದ ಮುಂಬೈ, ದೆಹಲಿಯಿಂದ ನೇರವಾಗಿ ವಿಮಾನಗಳಿವೆ. ಅಲ್ಲಿನ ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯಲ್ಲಿ ನೇರವಾಗಿ ಬೆಲ್ಲಾಜಿಯೊ ತಲುಪಬಹುದು. ರೈಲಿನಲ್ಲಿ ಹೋಗುವವರು, ಕೋಮೊ ಸರೋವರ ತಲುಪಬೇಕು. ಅಲ್ಲಿಂದ ಬೆಲ್ಲಾಜಿಯೊಕ್ಕೆ ತೆರಳಲು ನಿರಂತರವಾಗಿ ಬೋಟ್ ಸೌಲಭ್ಯವಿದೆ. ನಮ್ಮಲ್ಲಿ ಬಸ್ ಇರುವ ಹಾಗೆ ಪ್ರತಿ ಅರ್ಧ ಗಂಟೆಗೆ ಬೋಟ್ ಸರ್ವೀಸ್ ಇದೆ.

ಊಟ– ವಸತಿ

ಬೆಲ್ಲಾಜಿಯೊದಲ್ಲಿ ಹೋಟೆಲ್ ಮತ್ತು ರೆಸ್ಟೊರೆಂಟ್ಗಳು ತುಸು ದುಬಾರಿ. ಹೀಗಾಗಿ ಮಿಲಾನ್ನಲ್ಲೇ ಉಳಿಯ ಬಹುದು. ಈ ಪ್ರವಾಸಿ ತಾಣಕ್ಕೆ ಬರುವವರಲ್ಲಿ ಹೊರ ದೇಶದವರೇ ಹೆಚ್ಚು. ಹಾಗಾಗಿ ಇಲ್ಲಿ ಇಟಾಲಿಯನ್ ತಿನಿಸುಗಳ ಜತೆಗೆ, ಚೈನಾ, ಥಾಯ್ಲೆಂಡ್, ಜಪಾನ್, ಗ್ರೀಕ್ ಸೇರಿದಂತೆ ಹಲವು ರಾಷ್ಟ್ರಗಳ ಅಡುಗೆಯ ವೈವಿಧ್ಯವನ್ನು ಹೋಟೆಲ್ಗಳಲ್ಲಿ ಸವಿಯಬಹುದು.

ಚಿತ್ರಗಳು: ಲೇಖಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.