ಕೇರಳದ ಕೊಚ್ಚಿಯಲ್ಲಿ ಪೆರಿಯಾರ್ ನದಿಯ ಹಿನ್ನೀರು ಹೊಂಬೆಳಕಿನಿಂದ ಪ್ರತಿಫಲಿಸುತ್ತಿತ್ತು. ಮುಸ್ಸಂಜೆ ವೇಳೆಗೆ ವಾಟರ್ ಮೆಟ್ರೊದಲ್ಲಿ ಕುಳಿತು ಸಾಗುತ್ತಿದ್ದಂತೆ ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದ್ದ ವಾಣಿಜ್ಯ ನಗರಿಯ ರಮ್ಯನೋಟ ದೂರದಿಂದಲೇ ಸೆಳೆಯುತ್ತಿತ್ತು. ಮುಂದೆ ಹೋದಂತೆಲ್ಲ ಮೀನು ಹಿಡಿಯಲು ಹಾಕಿದ್ದ ಚೀನಾ ಮಾದರಿಯ ಮೀನಿನ ಬೃಹತ್ ಬಲೆಗಳು ಕಿನಾರೆಯುದ್ದಕ್ಕೂ ಸ್ವಾಗತಿಸುತ್ತಿದ್ದವು.

ಪೋರ್ಟ್ ಕೊಚ್ಚಿ ನಿಲ್ದಾಣದಿಂದ ವಾಟರ್ ಮೆಟ್ರೊದಲ್ಲಿ ಕುಳಿತು ಜಲ ವಿಹಾರ ಆರಂಭಿಸಿದಾಗ, ದ್ವೀಪಗಳ ನಿವಾಸಿಗಳು ನಗರದೊಂದಿಗೆ ಸಂಪರ್ಕ ಸಾಧಿಸಲು ಕೇರಳ ಸರ್ಕಾರ ಆರಂಭಿಸಿರುವ ಜಲ ಸಾರಿಗೆ ವಾಟರ್ ಮೆಟ್ರೊದಲ್ಲಿ ದೇಶ–ವಿದೇಶಗಳ ಪ್ರವಾಸಿಗರೂ ಸುತ್ತಾಡಿ ಆನಂದಿಸುತ್ತಿದ್ದರು.

ರಸ್ತೆ ಮಾರ್ಗಕ್ಕೆ ಪರ್ಯಾಯವಾಗಿ ದ್ವೀಪಗಳ ನಡುವೆ ಸಂಪರ್ಕ ಸಾಧಿಸಲು ಕೇರಳ ಸರ್ಕಾರ ಆರಂಭಿಸಿದ ಕೊಚ್ಚಿ ವಾಟರ್ ಮೆಟ್ರೊ ಜಲ ಸಾರಿಗೆ ಸೇವೆಗೆ 2023ರ ಏಪ್ರಿಲ್ 25ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ವಾಟರ್ ಮೆಟ್ರೊವನ್ನು ದೇಶದಲ್ಲಿ ಮೊದಲು ಆರಂಭಿಸಿದ ರಾಜ್ಯ ಎಂಬ ಕೀರ್ತಿಗೆ ಕೇರಳ ಪಾತ್ರವಾಗಿದೆ. ಕೇವಲ ಎರಡು ವರ್ಷಗಳ ಅವಧಿಯಲ್ಲಿ ವಾಟರ್ ಮೆಟ್ರೊದಲ್ಲಿ 4.05 ಕೋಟಿ ಜನ ಪ್ರಯಾಣ ಮಾಡಿರುವುದು ಇದರ ಗರಿಮೆಯಾಗಿದೆ. ಪ್ರತಿ ದಿನ ನಾಲ್ಕೈದು ಸಾವಿರ ಜನ ಸಂಚರಿಸುತ್ತಾರೆ. ವಾರಾಂತ್ಯ ಹಾಗೂ ಬೇಸಿಗೆ ರಜೆಯಲ್ಲಿ ದಿನಕ್ಕೆ ಹತ್ತು ಸಾವಿರದವರೆಗೂ ಜನ ಪ್ರಯಾಣಿಸುತ್ತಾರೆ.

ಕೊಚ್ಚಿ ಸುತ್ತಲಿನ ಹತ್ತು ದ್ವೀಪಗಳ ನಿವಾಸಿಗಳು ಜಲ ಸಾರಿಗೆ ಮೂಲಕ ನಗರದೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸುವಂತಾಗಬೇಕು. ಆ ಮೂಲಕ ದ್ವೀಪದ ಜನರಿಗೆ ಬದುಕು ಕಟ್ಟಿಕೊಳ್ಳಲು, ವ್ಯಾಪಾರ–ವಹಿವಾಟು, ಉದ್ಯೋಗ ಮಾಡಲು ಅನುಕೂಲ ಕಲ್ಪಿಸಿಕೊಡಬೇಕು. ಜೊತೆಗೆ ಈ ಜಲ ಸಾರಿಗೆ ಯೋಜನೆಯ ಮೂಲಕ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಬೇಕು ಎಂಬ ಮಹತ್ವಾಕಾಂಕ್ಷೆಯಿಂದ ವಾಟರ್ ಮೆಟ್ರೊ ಸೇವೆ ಆರಂಭಿಸಲಾಗಿದೆ.

ವಾಟರ್ ಮೆಟ್ರೊ ಪ್ರಯಾಣಿಕರನ್ನು ನೀರಿನ ಮೇಲೆ ಕರೆದುಕೊಂಡು ಹೋಗುತ್ತದೆ ಎಂಬುದನ್ನು ಹೊರತುಪಡಿಸಿದರೆ, ನಿಲ್ದಾಣದೊಳಗಿನ ನಿರ್ವಹಣೆಯ ವ್ಯವಸ್ಥೆಯು ಬಹುತೇಕ ಮೆಟ್ರೊ ರೈಲಿನ ಮಾದರಿಯಲ್ಲೇ ನಡೆಯುತ್ತದೆ. ‘ಕೊಚ್ಚಿ ಮೆಟ್ರೊ ರೈಲ್ ಲಿಮಿಟೆಡ್’ ಕಂಪನಿ ಮೂಲಕ ಜಲ ಸಾರಿಗೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಅಂದಾಜು ₹1,136 ಕೋಟಿ ಮೊತ್ತದ ಯೋಜನೆ ಇದಾಗಿದೆ. ಕೊಚ್ಚಿ ವಾಟರ್ ಮೆಟ್ರೊ ಲಿಮಿಟೆಡ್ ಕಂಪನಿಯು ಜಲ ಸಾರಿಗೆಯನ್ನು ನಿರ್ವಹಣೆ ಮಾಡುತ್ತಿದೆ.

ಹವಾನಿಯಂತ್ರಿತ ಸ್ವದೇಶಿ ಮೆಟ್ರೊ

ಹವಾನಿಯಂತ್ರಿತ ವಾಟರ್ ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದಾಗ, ಕೊಚ್ಚಿ ಬಂದರಿಗೆ ಬಂದ ಬೃಹತ್ ಹಡಗು ಪಕ್ಕದಲ್ಲೇ ನಿಂತಿತ್ತು. ಹಡಗು, ಬೋಟ್ಗಳು ಹಾಗೂ ದಾರಿಯುದ್ದಕ್ಕೂ ಕಂಡುಬರುತ್ತಿದ್ದ ಚೈನಿಸ್ ಫಿಶಿಂಗ್ ನೆಟ್ಗಳ ಫೋಟೊ ಕ್ಲಿಕ್ಕಿಸಲು ಪ್ರಯಾಣಿಕರು ಪೈಪೋಟಿಗೆ ಇಳಿದಿದ್ದರು.

ವಾಟರ್ ಮೆಟ್ರೊದಲ್ಲಿ 48 ಜನ ಕುಳಿತು ಅಷ್ಟೇ ಜನ ನಿಂತುಕೊಂಡು ಹೋಗಲು ಅವಕಾಶವಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಪ್ರತಿ ಸೀಟಿನ ಕೆಳಗಡೆ ಜೀವರಕ್ಷಕ ಜಾಕೆಟ್ ಇಡಲಾಗಿದೆ. ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇದೆ. ಶಿಶುವಿಗೆ ಎದೆಹಾಲು ಉಣಿಸಲು ಪ್ರತ್ಯೇಕ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಮೊಬೈಲ್ ಚಾರ್ಚಿಂಗ್ ಪಾಯಿಂಟ್ ಇದೆ. ಅಂಗವಿಕಲರು ಗಾಲಿ ಕುರ್ಚಿಯ ಮೂಲಕ ಸುಲಭವಾಗಿ ಒಳಗೆ ಬರಬಹುದು. ಈ ಅತ್ಯಾಧುನಿಕ ಮೆಟ್ರೊವನ್ನು ಕೇರಳದ ಕೊಚ್ಚಿ ಶಿಪ್ ಯಾರ್ಡ್ ಲಿಮಿಟೆಡ್ ಕಂಪನಿಯೇ ನಿರ್ಮಿಸಿದ್ದು, ‘ಮೇಕ್ ಇನ್ ಇಂಡಿಯಾ’ ಲಾಂಛನ ರಾರಾಜಿಸುತ್ತಿದೆ.

‘ಸದ್ಯ ಎಂಟು ಕಡೆ ನಿಲ್ದಾಣ (ಟರ್ಮಿನಲ್)ಗಳನ್ನು ನಿರ್ಮಿಸಲಾಗಿದೆ. 2035ರ ವೇಳೆಗೆ 70 ನಿಲ್ದಾಣಗಳಿಗೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ. ಆ ವೇಳೆಗೆ ಪ್ರತಿದಿನ 1.50 ಲಕ್ಷ ಜನ ವಾಟರ್ ಮೆಟ್ರೊದಲ್ಲಿ ಸಂಚರಿಸುವಂತಾಗಬೇಕು ಎಂಬ ಗುರಿ ಹೊಂದಿದೆ. ದ್ವೀಪದಲ್ಲಿ ವಾಸಿಸುವ ಜನ ಜನದಟ್ಟಣೆ ಸಮಯದಲ್ಲಿ ರಸ್ತೆಯ ಮೂಲಕ ನಗರಕ್ಕೆ ಬರಲು ಒಂದೂವರೆ ಗಂಟೆಯಾಗುತ್ತದೆ. ಅದರ ಬದಲು ವಾಟರ್ ಮೆಟ್ರೊದಲ್ಲಿ ಬಂದರೆ 20–30 ನಿಮಿಷಗಳಲ್ಲಿ ತಲುಪುತ್ತಾರೆ. ಜಲ ಮಾರ್ಗದ ಮೂಲಕ ಸಂಚರಿಸುವುದರಿಂದ ದ್ವೀಪದ ನಿವಾಸಿಗಳಿಗೆ ಸಮಯ ಹಾಗೂ ಹಣ ಉಳಿಯುತ್ತಿದೆ. ದೇಶ–ವಿದೇಶಗಳ ಪ್ರವಾಸಿಗರು ವಾಟರ್ ಮೆಟ್ರೊದಲ್ಲಿ ಕುಳಿತು ಹಿನ್ನೀರಿನಲ್ಲಿ ವಿಹರಿಸಿ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದಾರೆ’ ಎಂದು ನಮ್ಮ ಜೊತೆಗಿದ್ದ ಎರ್ನಾಕುಲಂ ಡಿಸ್ಟ್ರಿಕ್ಟ್ ಟೂರಿಸಂ ಪ್ರೊಮೋಷನ್ ಕೌನ್ಸಿಲ್ನ ಕಾರ್ಯದರ್ಶಿ ಲಿಜೊ ಜೋಸೆಫ್ ಮಾಹಿತಿ ನೀಡಿದರು.

ವಾಟರ್ ಮೆಟ್ರೊಗೆ ಸುಮಾರು 75 ಕಿ.ಮೀ ಜಲಮಾರ್ಗವನ್ನು ನಿಗದಿಪಡಿಸಲಾಗಿದೆ. 15 ರೂಟ್ಗಳನ್ನು ರೂಪಿಸಲಾಗಿದ್ದು, 75 ಇ–ಬೋಟ್ಗಳು(ವಿದ್ಯುತ್ ಚಾಲಿತ) ಪ್ರಯಾಣಿಕರನ್ನು ಸಾಗಿಸುತ್ತಿವೆ. ದೂರದ ಆಧಾರ ಮೇಲೆ ನಿಲ್ದಾಣಗಳ ನಡುವಿನ ಪ್ರಯಾಣ 20 ರಿಂದ 30 ನಿಮಿಷಗಳವರೆಗೆ ಆಗಲಿದೆ. ವಾಟರ್ ಮೆಟ್ರೊದ ಪ್ರಯಾಣ ದರವು ಕನಿಷ್ಠ ₹20 ರಿಂದ ಗರಿಷ್ಠ ₹40 ವರೆಗೆ ಇದೆ. ಅರಬ್ಬಿ ಸಮುದ್ರದ ರಾಷ್ಟ್ರೀಯ ಜಲಮಾರ್ಗ (ಎನ್ಡಬ್ಲ್ಯು–3), ಕೊಚ್ಚಿ ಪೋರ್ಟ್ ಟ್ರಸ್ಟ್ನ ಜಲಮಾರ್ಗ, ಪೆರಿಯಾರ್ ಮತ್ತು ಮುವಟ್ಟುಪೂಝಾ ನದಿಗಳ ಹಿನ್ನೀರಿನಲ್ಲಿ ವಾಟರ್ ಮೆಟ್ರೊಗಳು ಸಾಗುತ್ತವೆ.

ತುರ್ತು ಸೇವೆಗೆ ಸಜ್ಜು

ಕೊಚ್ಚಿ ವಾಟರ್ ಮೆಟ್ರೊಕ್ಕೆ ಇದೀಗ ತುರ್ತು ಸಂದರ್ಭಗಳಲ್ಲಿ ಸ್ಪಂದಿಸುವ ಅತ್ಯಾಧುನಿಕ ಬೋಟ್ ಕೂಡಾ ಸೇರ್ಪಡೆಯಾಗಿದೆ. ಅಪಘಾತ, ಅಗ್ನಿ ಅವಘಡ, ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ತಕ್ಷಣಕ್ಕೆ ಜಲಮಾರ್ಗದ ಮೂಲಕ ಸ್ಥಳಕ್ಕೆ ತೆರಳಿ ಸ್ಪಂದಿಸುವ ಸಾಮರ್ಥ್ಯವನ್ನು ಈ ಅತ್ಯಾಧುನಿಕ ಬೋಟ್ ಹೊಂದಿದೆ. ಜೀವರಕ್ಷಕ ಉಪಕರಣಗಳು ಹಾಗೂ ತರಬೇತಿ ಪಡೆದ ಸಿಬ್ಬಂದಿ ಇರುವ ಈ ಬೋಟ್, ತುರ್ತು ಸಂದರ್ಭಗಳಲ್ಲಿ ಕೊಚ್ಚಿಯ ಸುತ್ತಲಿನ ಜಲಮಾರ್ಗದಲ್ಲಿ ಸಂಚರಿಸಿ ನೆರವಿಗೆ ಧಾವಿಸಲಿದೆ.

ವಾಟರ್ ಮೆಟ್ರೊದಲ್ಲಿ ಸಾಗುತ್ತಿದ್ದಾಗ ಪ್ರಯಾಣಿಕರನ್ನು ಹೊತ್ತ ಖಾಸಗಿ ಬೋಟ್ಗಳೂ ನಮ್ಮನ್ನು ಎದುರುಗೊಳ್ಳುತ್ತಿದ್ದವು. ಕೊಚ್ಚಿ ಹೈಕೋರ್ಟ್ ನಿಲ್ದಾಣಕ್ಕೆ ಬಂದಿಳಿದಾಗ, ಕೇರಳ ಸರ್ಕಾರ ಜಲ ಸಾರಿಗೆಯನ್ನು ಪ್ರವಾಸೋದ್ಯಮಕ್ಕೆ ಹೇಗೆ ಸದ್ಬಳಕೆ ಮಾಡಿಕೊಂಡಿದೆ ಎಂಬುದು ಗೊತ್ತಾಯಿತು.

ಮೆಟ್ರೊ ರೈಲಿನಿಂದ ವಾಟರ್ ಮೆಟ್ರೊವರೆಗೆ...

ಕೊಚ್ಚಿಯಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ಹಾಗೂ ಸಾರ್ವಜನಿಕ ಸಾರಿಗೆಗೆ ಒತ್ತು ನೀಡಲು ಮೆಟ್ರೊ ರೈಲು ಆರಂಭಿಸಲು ಕೇರಳ ಸರ್ಕಾರ 1999ರಲ್ಲೇ ಮುಂದಾಗಿತ್ತು. ಆದರೆ ಯೋಜನೆಯ ಕಾರ್ಯಸಾಧ್ಯತೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ವಿಶ್ವಾಸ ಮೂಡದ ಪರಿಣಾಮ ಹಸಿರು ನಿಶಾನೆ ಸಿಗದೆ ನನೆಗುದಿಗೆ ಬಿದ್ದಿತ್ತು.

2011ರಲ್ಲಿ ಕೇರಳ ಸರ್ಕಾರವು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಮೆಟ್ರೊ ರೈಲು ಆರಂಭಿಸಲು ಪುನಃ ಯೋಜನೆ ರೂಪಿಸಿತು. 2013ರಲ್ಲಿ ಮೆಟ್ರೊ ರೈಲು ನಿರ್ಮಾಣ ಕಾಮಗಾರಿಯೂ ಆರಂಭಗೊಂಡಿತು. ಮೆಟ್ರೊ ರೈಲಿಗಾಗಿ ಕೊಚ್ಚಿ ನಗರದಲ್ಲಿ ಹಳಿ ನಿರ್ಮಾಣ ಕಾರ್ಯ ಆರಂಭಿಸಿದಾಗ ಟ್ರಾಫಿಕ್ ಸಮಸ್ಯೆ ಇನ್ನಷ್ಟು ಹೆಚ್ಚಾಯಿತು. ಆಗ ಕೇರಳ ರಾಜ್ಯ ಜಲ ಸಾರಿಗೆ ಇಲಾಖೆಯು ವಿಟ್ಟಿಲಾ ಹಾಗೂ ಕಕ್ಕನಾಡ ನಡುವೆ 2013ರಲ್ಲಿ ಬೋಟ್ ಸೇವೆ ಆರಂಭಿಸಿತು. 9 ಕಿಲೋಮೀಟರ್ ದೂರವನ್ನು 25 ನಿಮಿಷಗಳಲ್ಲಿ ಬೋಟ್ ಮೂಲಕ ಕ್ರಮಿಸಲಾಗುತ್ತಿತ್ತು.

ಸಾರ್ವಜನಿಕ ಜಲ ಸಾರಿಗೆಯಿಂದಾದ ಅನುಕೂಲತೆಗಳನ್ನು ಮನಗಂಡ ಕೊಚ್ಚಿ ಮೆಟ್ರೊ ರೈಲಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಇಲಿಯಾಸ್ ಜಾರ್ಜ್ ಅವರು ದ್ವೀಪಗಳ ನಿವಾಸಿಗಳಿಗೆ ನಗರಕ್ಕೆ ಬರಲು ಮೆಟ್ರೊ ಮಾದರಿಯಲ್ಲೇ ಜಲ ಸಾರಿಗೆ ಆರಂಭಿಸುವ ಬಗ್ಗೆ ಚಿಂತನೆ ನಡೆಸಿ, ಯೋಜನೆ ರೂಪಿಸಿದರು. ನಂತರ 2017ರಲ್ಲಿ ಕೇರಳ ಸರ್ಕಾರವು ಕೊಚ್ಚಿ ವಾಟರ್ ಮೆಟ್ರೊ ಜಲ ಸಾರಿಗೆ ಆರಂಭಿಸುವುದಾಗಿ ಘೋಷಿಸಿತು. 2023ರಲ್ಲಿ ವಾಟರ್ ಮೆಟ್ರೊ ಸೇವೆ ಸಾರ್ವಜನಿಕರಿಗೆ ಮುಕ್ತವಾಯಿತು.

(ಲೇಖಕರು ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಆಹ್ವಾನದ ಮೇರೆಗೆ ತೆರಳಿದ್ದರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.