ಮ ಧ್ಯಪ್ರದೇಶದಲ್ಲಿರುವ ಸಾಂಚಿ - ನಮ್ಮ ನಾಡಿನ ಅತಿ ಪ್ರಾಚೀನ ಧಾರ್ಮಿಕ ಕ್ಷೇತ್ರಗಳಲ್ಲೊಂದು. ಭೋಪಾಲ್ನಿಂದ ಈಶಾನ್ಯಕ್ಕೆ 48 ಕಿ.ಮೀ. ದೂರದಲ್ಲಿರುವ ಈ ಸ್ಥಳ ಕ್ರಿಸ್ತಪೂರ್ವಕ್ಕೆ ನಮ್ಮನ್ನು ಕೊಂಡೊಯ್ಯುವುದೇ ಒಂದು ರೋಮಾಂಚನ. ಸಂಗ್ರಹವಾಗಿ ಹೇಳುವುದಾದರೆ, ಕ್ರಿಸ್ತಪೂರ್ವ 273 ರಿಂದ 236ರವರೆಗೆ ಆಳಿದ ಪ್ರಸಿದ್ಧ ದೊರೆ ಅಶೋಕ ಬೌದ್ಧಧರ್ಮದ ಹಿರಿಮೆಯ ಸಂಕೇತವಾದ ಈ ಸ್ತೂಪವನ್ನು ಕಟ್ಟಿಸಿದ. ಅವನು ನಿರ್ಮಿಸಿದ್ದು ಇಟ್ಟಿಗೆಗಳಿಂದ ಮಾಡಿದ ಒಂದು ಸ್ತೂಪ ಹಾಗೂ ಅಶೋಕಸ್ತಂಭವೆಂದು ಖ್ಯಾತವಾದ ಒಂದು ಕಂಬ.

ಸ್ತೂಪದ ಸುತ್ತಲಿನ ಮೆಟ್ಟಿಲು, ಹರ್ಮಿಕಾ ಎಂದು ಕರೆಯಲಾಗುವ ಮೇಲಿನ ಛತ್ರಿಯ ಆವರಣ, ಪ್ರದಕ್ಷಿಣಾಪಥ- ಇವೆಲ್ಲ ಎರಡನೇ ಶತಮಾನದ ಶುಂಗರ ಕಾಲದಲ್ಲಿ ಸೇರ್ಪಡೆಯಾದವಂತೆ. ಒಂದನೇ ಶತಮಾನದ ಶಾತವಾಹನರ ಕಾಲದಲ್ಲಿ ಇನ್ನೆರಡು ಸ್ತೂಪಗಳು, ಹಲವು ಗುಡಿಗಳು ನಿರ್ಮಿತವಾದವು. ಮಾಳ್ವ ದೊರೆಗಳಾದ ಕ್ಷತ್ರಪರ ಕಾಲದಲ್ಲಿ ಬುದ್ಧನ ಪ್ರತಿಮೆಗಳೂ ಕ್ರಿಸ್ತಶಕದ ಪ್ರಾರಂಭದಲ್ಲಿ ಗುಪ್ತರ ಕಾಲದಲ್ಲಿ ಕೆಲವು ಗುಡಿಗಳೂ ನಿರ್ಮಾಣವಾದವು. ಮುಂದಿನ ಶತಮಾನಗಳಲ್ಲಿ ಪ್ರತೀಹಾರರು, ಪರಮಾರರು ಮೊದಲಾದ ಸಂತತಿಗಳ ಅರಸರು ಇಲ್ಲಿ ಬೌದ್ಧವಿಹಾರ, ದೇಗುಲಗಳ ನಿರ್ಮಿತಿಯನ್ನು ಮುಂದುವರಿಸಿದರು. ಹೀಗೆ, ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಇಲ್ಲಿ ಧಾರ್ಮಿಕ ಚಟುವಟಿಕೆಗಳು ನಿರಂತರವಾಗಿ ಮುಂದುವರಿದುಕೊಂಡು ಬಂದುದೇ ಒಂದು ಮಹತ್ವದ ವಿಷಯ.

ಇಲ್ಲೇ ಸಮೀಪದಲ್ಲಿ ಇತಿಹಾಸ ಪ್ರಸಿದ್ಧ ವಿದಿಶಾ ನಗರ. ಅಶೋಕನ ಹೆಂಡತಿಯ ತವರೂರು. ಆಕೆ ಪ್ರೇರಣೆಯಿಂದಲೇ ಅಶೋಕ ವಿದಿಶಾಗಿರಿ ಎಂದು ಹೆಸರು ಪಡೆದಿದ್ದ ಈ ಸಾಂಚಿಯ ಬೆಟ್ಟದ ಮೇಲೆ ಸ್ತೂಪವನ್ನು ಕಟ್ಟಿದನಂತೆ. ಜಗತ್ತಿನ ಅತಿಹಳೆಯ ಶಿಲಾನಿರ್ಮಿತಿಗಳಲ್ಲಿ ಅಶೋಕಸ್ತಂಭವೂ ಒಂದು. ಸೊಗಸಾಗಿ ಪಾಲಿಶ್ ಮಾಡಿದ ಮರಳುಗಲ್ಲು. ಕಳೆದ ಶತಮಾನದಲ್ಲಿ ಯಾರೋ ಸ್ಥಳೀಯ ಜಮೀನ್ದಾರ ಈ ಕಂಬವನ್ನು ಕೆಡವಿಸಿದ್ದನಂತೆ. ಅವನು ಯಾರ ಮೇಲಿನ ಸಿಟ್ಟು ತೀರಿಸಿಕೊಳ್ಳಬೇಕಾಗಿತ್ತೋ ತಿಳಿಯದು. ಈಗ ಇದರ ಎರಡು ದೊಡ್ಡ ತುಣುಕುಗಳು ಮಾತ್ರ ಸ್ತೂಪದ ಪಕ್ಕ ಉರುಳಿಕೊಂಡಿವೆ. ಮೇಲುಭಾಗದ ನಾಲ್ಕು ಸಿಂಹಗಳಿರುವ ಭಾಗವನ್ನು ಮ್ಯೂಸಿಯಂನಲ್ಲಿ ಇಟ್ಟಿದ್ದಾರಂತೆ. ನಾವು ಹೋದ ದಿನ ಮ್ಯೂಸಿಯಂಗೆ ರಜೆ. ಆ ಕಂಬದ ಮೇಲಿನ ಅಶೋಕಚಕ್ರವನ್ನು ನೋಡಬೇಕೆಂದು ಆಸೆಯಿತ್ತು. ಅಲ್ಲೇ ಸ್ತೂಪದ ಹಿಂದೆ ಬೇರೊಂದು ಕಂಬವೊಂದರ ಮೇಲೆ ಕೆತ್ತಿದ ಅಶೋಕಚಕ್ರದ ಮಾದರಿಯನ್ನು ನೋಡಿ ಸಮಾಧಾನಪಟ್ಟುಕೊಳ್ಳಬೇಕಾಯಿತು.

ಅಶೋಕ ಕಟ್ಟಿಸಿರುವ ಇಟ್ಟಿಗೆಯ ಸ್ತೂಪಕ್ಕೆ ಹೊರಾವರಣ, ಛತ್ರಿಯುಳ್ಳ ಮೇಲು ಆವರಣ, ಪ್ರದಕ್ಷಿಣಾಪಥ, ನಾಲ್ಕು ಬದಿಗಳಲ್ಲಿ ಇರಿಸಿದ ಬುದ್ಧ ಪ್ರತಿಮೆಗಳು, ನಾಲ್ಕು ಆಕರ್ಷಕ ಕಮಾನುಗಳನ್ನು ಒಳಗೊಂಡ ಪ್ರವೇಶದ್ವಾರಗಳು- ಇವೆಲ್ಲ ನಂತರದ ಶತಮಾನಗಳಲ್ಲಿ ಸೇರಿಕೊಂಡಿವೆ. ಮುಖ್ಯ ಸ್ತೂಪದ ಸುತ್ತಳತೆ 36.6 ಮೀಟರ್ಗಳಷ್ಟಿದ್ದರೆ, ಎತ್ತರ (ಛತ್ರಿಯ ಆವರಣ ಬಿಟ್ಟು) 16.46 ಮೀಟರ್ಗಳು. ಅಶೋಕ ಕಟ್ಟಿಸಿದ ಮೂಲಸ್ತೂಪ ಒಂದನೇ ಶತಮಾನದ ಹೊತ್ತಿಗೇ ಸಾಕಷ್ಟು ಹಾಳಾಗಿತ್ತಂತೆ. ಆಗಿನಿಂದಲೂ ಈ ಸ್ತೂಪದ ನವೀಕರಣ ಒಂದಿಲ್ಲೊಂದು ಬಗೆಯಲ್ಲಿ ನಡೆಯುತ್ತಲೇ ಇದ್ದಿರಬೇಕು.

ಎಲ್ಲ ಸ್ವಾಗತ ಕಮಾನುಗಳೂ ಒಂದನೆಯ ಶತಮಾನಕ್ಕೆ ಸೇರಿವೆ. ಇವುಗಳಲ್ಲಿ ದಕ್ಷಿಣದ ಕಡೆಗಿರುವ ಕಮಾನು ಎಲ್ಲಕ್ಕಿಂತ ಹಳೆಯದೆಂದು ಅಂದಾಜುಮಾಡಿದ್ದಾರೆ. ಇಲ್ಲೇ ಸ್ತೂಪದ ಮೇಲಕ್ಕೇರುವ ಮೆಟ್ಟಿಲುಗಳಿವೆ. ಅಶೋಕನ ಸ್ತಂಭವೂ ಇಲ್ಲೇ ಎದುರಿಗಿದೆ. ಈ ಕಮಾನುಗಳ ಮೇಲಿನ ಕೆತ್ತನೆಯನ್ನು ವಿವರವಾಗಿ ನೋಡುವುದಕ್ಕೇ ಒಂದು ದಿನ ಬೇಕಾದೀತು. ಕಮಾನುಗಳ ಮೇಲಿನ ಕೆತ್ತನೆಯಲ್ಲಿ ಬೌದ್ಧ ಜಾತಕ ಕಥೆಗಳು, ಬುದ್ಧನ ಜೀವನಕ್ಕೆ ಸಂಬಂಧಿಸಿದ ಘಟನೆಗಳು, ಬೌದ್ಧಧರ್ಮದ ಮುಂದಿನ ಬೆಳೆವಣಿಗೆಯ ವಿವರಗಳು ಹಾಗೂ ಅಲಂಕಾರಿಕ ಚಿತ್ರಣಗಳು ಕಂಡುಬರುತ್ತವೆ. ನೆಲದಿಂದ 8.53 ಮೀಟರ್ ಎತ್ತರಕ್ಕೆ ಇರುವ ಎರಡು ಕಂಬಗಳ ಮೇಲೆ ಅಡ್ಡಲಾಗಿ ಮೂರು ಸಾಲಿನ ಪಟ್ಟಿಗಳ ಅಲಂಕರಣ. ಕಂಬಗಳ ಮೇಲೆ ನಾಲ್ಕೂ ದಿಕ್ಕುಗಳಲ್ಲಿ ತಲಾ 3-4 ಅಂಕಣಗಳಲ್ಲಿ ಪ್ರತ್ಯೇಕ ಕಥಾಚಿತ್ರಣ, ಕಂಬದ ಮೇಲುಭಾಗಕ್ಕೆ ನಾಲ್ಕು ದಿಕ್ಕುಗಳಿಗೆ ಮುಖಮಾಡಿನಿಂತ ಆನೆ/ಸಿಂಹಗಳು, ಮೇಲಿನ ಪಟ್ಟಿಗಳಲ್ಲೂ ಪ್ರತಿ ಎರಡು ಪಟ್ಟಿಗಳ ನಡುವಿನ ಅಂತರದಲ್ಲೂ ಕುದುರೆಸವಾರರು/ಆನೆಗಳು/ಸಿಂಹಗಳು - ಹೀಗೆ ಎಲ್ಲೂ ಒಂದಿಂಚು ಜಾಗ ಬಿಡದಂತೆ ಇಡುಕಿರಿದ ಬಗೆಯ ಚಿತ್ತಾರ.

ಬೌದ್ಧವಿಹಾರಗಳು, ದೇಗುಲಗಳು, ಸ್ತೂಪದಾಕಾರದ ಕಿರಿಯ ರಚನೆಗಳು, ದೊಡ್ಡ ನೀರಿನ ತೊಟ್ಟಿ- ಹೀಗೆ ಪ್ರಾಚ್ಯ ಸಂಶೋಧನಾ ಇಲಾಖೆಯವರ ಉತ್ಖನನದ ಫಲವಾಗಿ ಸಾಂಚಿ ಪೂರ್ವಕಾಲದ ಧಾರ್ಮಿಕ ವಾಸ್ತುದಾಖಲೆಗಳನ್ನು ಅನಾವರಣಮಾಡುತ್ತಲೇ ಹೊಸ ಪುಟಗಳನ್ನು ತೆರೆಯುತ್ತಿದೆ. ಇವೆಲ್ಲ ದೇಶದ ಪ್ರಾಚೀನ ಸಂಸ್ಕಂತಿಯ ಪ್ರತಿಬಿಂಬವಾಗಿ ಇಲ್ಲಿಯವರೆವಿಗೆ ಉಳಿದು ಬಂದಿರುವುದೇ ಒಂದು ಅಚ್ಚರಿ.

ಪ್ರಾಚ್ಯ ಸರ್ವೇಕ್ಷಣಾ ಇಲಾಖೆಯವರು ಸ್ತೂಪದ ಆವರಣದಲ್ಲಿ ಹುಲ್ಲುಹಾಸು ಬೆಳೆಸಿ ಅಚ್ಚುಕಟ್ಟಾಗಿರಿಸಿದ್ದಾರೆ. ಹಸಿರು ಹಾಸಿನ ಮೇಲೆ ಪುಟಪುಟನೆ ಓಡಾಡುತ್ತಿದ್ದ ಅಳಿಲುಗಳು ನಮ್ಮತ್ತ ಬಂದು ತಿನ್ನುವುದಕ್ಕೆ ‘ಏನಾದರೂ ಸಿಗಬಹುದೇ’ ಎಂದು ಕೈಚಾಚುತ್ತಿದ್ದುದು ಅಚ್ಚರಿಯುಂಟುಮಾಡಿತು. ಅಲ್ಲೇ ಪಕ್ಕದ ಒಂದು ಆವರಣದಲ್ಲಿ ಬಣ್ಣಬಣ್ಣದ ಮೊಲಗಳನ್ನೂ, ಬಾತುಕೋಳಿಗಳನ್ನೂ ಪೋಷಿಸಿ ಇರಿಸಿದ್ದಾರೆ.

ಈ ಹಿಂದೊಮ್ಮೆ ಇಲ್ಲಿಗೆ ಭೇಟಿಕೊಟ್ಟಿದ್ದ ಬಂಧು ವಿಶ್ವನಾಥ, ಭೋಪಾಲಿಗೆ ಹಿಂತಿರುಗುವಾಗ ಹೆದ್ದಾರಿಯ ನಡುವೆಯೆಲ್ಲೋ ಕರ್ಕಾಟಕ ಸಂಕ್ರಾಂತಿ ವೃತ್ತ ಹಾದು ಹೋಗುತ್ತದೆಂದು ನೆನಪಿಸಿಕೊಂಡರು. ನಡುದಾರಿಯಲ್ಲಿ ಆ ಗೆರೆ ಸಿಕ್ಕುವ ಹೊತ್ತಿಗೆ ಕತ್ತಲು ಆವರಿಸುತ್ತಿತ್ತು. ವಾಹನದಿಂದಿಳಿದು ಆ ಗೆರೆಯ ಫಲಕ, ಬೆಂಚು ಇದ್ದಲ್ಲಿಗೆ ಹೋಗಿ ನಮ್ಮ ಬದುಕಿನಲ್ಲಿ ಮೊದಲ ಬಾರಿಗೆ ಕರ್ಕಾಟಕ ಸಂಕ್ರಾಂತಿ ವೃತ್ತದ ಮೇಲೆ ನಿಂತು ವಿಶ್ವದಾಖಲೆ ಸ್ಥಾಪಿಸಿಕೊಂಡೆವು. ಈ ಮುನ್ನ ನಾವು ಉತ್ತರ ಭಾರತಕ್ಕೆ ಭೇಟಿಕೊಟ್ಟ ಸಂದರ್ಭಗಳಲ್ಲಿ ನಮ್ಮನ್ನು ಹೊತ್ತ ರೈಲೋ ವಿಮಾನವೋ ಅದೆಷ್ಟು ಸಲ ಈ ಗೆರೆಯನ್ನು ದಾಟಿರಬಹುದೋ, ಅವೆಲ್ಲ ಅನಧಿಕೃತ ದಾಖಲೆಗಳೇ ತಾನೇ.

ಚಿತ್ರಗಳು: ಲೇಖಕರವು

ಹೋಗುವುದು ಹೇಗೆ ?

ಬೆಂಗಳೂರು–ಭೋಪಾಲ್ ನಡುವೆ ವಿಮಾನ, ರೈಲು ಸೌಲಭ್ಯಗಳಿವೆ. ಭೋಪಾಲ್ ಕೇಂದ್ರವಾಗಿಟ್ಟುಕೊಂಡು ಸಾಂಚಿ, ಭೀಮ್ ಬೇಟ್ಕಾ, ಉದಯಗಿರಿ ಗುಹೆಗಳನ್ನು ನೋಡಬಹುದು. ಧಾರ್ಮಿಕ ಶ್ರದ್ಧೆಯುಳ್ಳವರಿಗೆ ಉಜ್ಜಯಿನಿ, ಓಂಕಾರೇಶ್ವರ ಜ್ಯೋತಿರ್ಲಿಂಗಗಳ ದರ್ಶನ ಮಾಡಬಹುದು. ವನ್ಯಜೀವಿಪ್ರಿಯರಿಗಾಗಿ ಪನ್ನಾ, ಬಾಂಧವಗಡ, ಸರಿಸ್ಕಾ ರಾಷ್ಟ್ರೀಯ ಉದ್ಯಾನಗಳಿವೆ. ಭೋಪಾಲ್ನಿಂದ ವಿದಿಶಾ ದಾರಿಯಲ್ಲಿ ಕೇವಲ 48 ಕಿಮೀ ದೂರದಲ್ಲಿ ಸಾಂಚಿ ಸಿಗುತ್ತದೆ. ಒಂದು ಗಂಟೆಯ ಪ್ರಯಾಣ. ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳೂ ಲಭ್ಯ. ಪ್ರವಾಸಯೋಗ್ಯವಾದ ಕಾಲ ಅಕ್ಟೋಬರ್ ತಿಂಗಳಿನಿಂದ ಮಾರ್ಚ್ವರೆಗೆ.

ಪುನಶ್ಚೇತನಕ್ಕೆ 200 ವರ್ಷ

ಹದಿನೈದನೇ ಶತಮಾನದ ಹೊತ್ತಿಗೆ ಬೌದ್ಧಧರ್ಮದ ಪ್ರಭಾವ ಕ್ಷೀಣಿಸತೊಡಗಿದ ಮೇಲೆ ಸಾಂಚಿಯಲ್ಲೂ ಧಾರ್ಮಿಕ ಚಟುವಟಿಕೆಗಳು ಕಡಿಮೆಯಾಗಿ ಹೋದವು. ಜನರ ಓಡಾಟ ಕಡಿಮೆಯಾದ ಮೇಲೆ ಸಾಂಚಿ ಪಾಳುಬಿದ್ದಿತು. 1818 ರಲ್ಲಿ ಬ್ರಿಟಿಷ್ ಜನರಲ್ ಟೇಲರ್ ಎಂಬಾತ ಪಾಳುಬಿದ್ದ ಸಾಂಚಿಯ ಪುನರುಜ್ಜೀವನಕ್ಕೆ ಕಾರಣನಾದ. ಅಷ್ಟುಹೊತ್ತಿಗಾಗಲೇ ನಿಧಿಶೋಧಕರೂ ಅಲೆಮಾರಿಗಳೂ ಈ ಸ್ಮಾರಕಗಳಿಗೆ ಸಾಕಷ್ಟು ಹಾನಿಯುಂಟುಮಾಡಿಬಿಟ್ಟಿದ್ದರು. ಮುಂದೆ ಬ್ರಿಟಿಷರು ಈ ತಾಣದ ಸಂರಕ್ಷಣೆಗೂ ಮುಂದಾದರು. ಹೀಗೆ ಸಾಂಚಿಯ ಪುನರುಜ್ಜೀವನ ಕಾರ್ಯಕ್ಕೆ (1818-2018) ಇನ್ನೂರು ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ಭಾರತ ಸರ್ಕಾರ ಸಾಂಚಿ ಸೂಪ್ತದ ಚಿತ್ರವಿರುವ ₹ 200 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿರುವುದು ಅರ್ಥಪೂರ್ಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.