ದೋಚು ಲಾ ಪಾಸ್ - ಇದು ಸಮುದ್ರ ಮಟ್ಟದಿಂದ 3,100 ಮೀಟರ್ ಎತ್ತರದಲ್ಲಿದ್ದು, ಹಿಮಾಲಯ ಪರ್ವತ ಶ್ರೇಣಿಗಳ ಅದ್ಭುತ ವಿಹಂಗಮ ನೋಟಗಳಿಗೆ ಹೆಸರುವಾಸಿ. ಈ ಪಾಸ್ ಭೂತಾನ್ನಲ್ಲಿ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ.

ಹಿಮಾಲಯದ ಹೃದಯಭಾಗದಲ್ಲಿರುವ ಈ ಪರ್ವತ ಮಾರ್ಗವಿದೆ. ಇದು ಭೂತಾನ್ನ ಒಂದು ಮಹತ್ವದ ರಸ್ತೆಯಾಗಿದೆ. ರಾಜಧಾನಿ ಥಿಂಪುವನ್ನು ಪ್ರಾಚೀನ ಪಟ್ಟಣವಾದ ಪುನಾಖಾದೊಂದಿಗೆ ಇದು ಸಂಪರ್ಕಿಸುತ್ತದೆ. ದೇಶದ ಅತಿ ಎತ್ತರದ ಪರ್ವತ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೋಚು ಲಾ ಪಾಸ್, ಪೂರ್ವ ಹಿಮಾಲಯದ ಹಿಮದಿಂದ ಆವೃತವಾದ ಶಿಖರಗಳ ಮೋಡಿ ಮಾಡುವ ದೃಶ್ಯಾವಳಿಗಳಿಂದ ಗಮನಸೆಳೆಯುತ್ತದೆ.

2003 ರ ಮಿಲಿಟರಿ ಕಾರ್ಯಾಚರಣೆಯಲ್ಲಿ ಹೋರಾಡಿದ ಭೂತಾನಿನ ಸೈನಿಕರ ಗೌರವಾರ್ಥವಾಗಿ ನಿರ್ಮಿಸಲಾದ ಐತಿಹಾಸಿಕ 108 ಸ್ಮಾರಕ ಚೋರ್ಟೆನ್ಗಳೊಂದಿಗೆ ಈ ಪಾಸ್ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ಶೌರ್ಯದ ಹೃದಯಸ್ಪರ್ಶಿ ಸಂಕೇತವಾಗಿದೆ. ಭೂತಾನಿನ ಈ ಸ್ಥಳವು ಬೆರಗುಗೊಳಿಸುವ ಹೆಗ್ಗುರುತಿನ ಐತಿಹಾಸಿಕ ಸಾಂಸ್ಕೃತಿಕ ಮತ್ತು ನೈಸರ್ಗಿಕ ಮಹತ್ವವನ್ನು ಹೊಂದಿದೆ.

ದೋಚು ಲಾ ಪಾಸ್ನ ಡ್ರುಕ್ ವಾಂಗ್ಯಾಲ್ ಚೋರ್ಟೆನ್ಸ್ ಎಂದು ಕರೆಯಲ್ಪಡುವ 108 ಸ್ಮಾರಕ ಸ್ತೂಪಗಳ ನಿರ್ಮಾಣವು ಭೂತಾನ್ನಲ್ಲಿನ ಮಿಲಿಟರಿ ಸಂಘರ್ಷಗಳಿಗೆ ನಿಕಟ ಸಂಬಂಧ ಹೊಂದಿದೆ. 2003 ರಲ್ಲಿ ಭಾರತೀಯ ದಂಗೆಕೋರರ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಪ್ರಾಣ ಕಳೆದುಕೊಂಡ ಭೂತಾನ್ ಸೈನಿಕರ ಗೌರವಾರ್ಥವಾಗಿ ಡ್ರುಕ್ ವಾಂಗ್ಯಾಲ್
ಚೋರ್ಟೆನ್ಗಳನ್ನು ನಿರ್ಮಿಸಲಾಯಿತು. ಈ ಮಿಲಿಟರಿ ಕಾರ್ಯಾಚರಣೆಯು ದಕ್ಷಿಣ ಭೂತಾನ್ನಲ್ಲಿ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ ಮತ್ತು ಇತರ ಭಾರತೀಯ ದಂಗೆಕೋರ ಗುಂಪುಗಳಿಂದ ನಡೆದ ದಂಗೆಯಲ್ಲಿ ಮಡಿದವರ ಗೌರವಾರ್ಥವಾಗಿ ಕಟ್ಟಲಾಗಿದೆ.

108 ಚೋರ್ಟೆನ್ಗಳನ್ನು ಭೂತಾನ್ನ ಹಿರಿಯ ರಾಣಿ ಆಶಿ ದೋರ್ಜಿ ವಾಂಗ್ಮೋ ವಾಂಗ್ಚುಕ್ ಅವರು ಕಟ್ಟಿಸಿದ್ದಾರೆ. 108 ಸಂಖ್ಯೆ ಟಿಬೆಟಿಯನ್ ಬೌದ್ಧ ಧರ್ಮದಲ್ಲಿ ಪವಿತ್ರ ಸಂಖ್ಯೆಯಾಗಿದ್ದು, ಈ ಚೋರ್ಟೆನ್ಗಳನ್ನು ಮೂರು ವಿಭಿನ್ನ ಗಾತ್ರಗಳಲ್ಲಿ ನಿರ್ಮಿಸಲಾಗಿದ್ದು ಸೈನಿಕರ ವಿವಿಧ ಶ್ರೇಣಿಗಳನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ಚೋರ್ಟೆನ್ ಅನ್ನು ಸುಂದರವಾಗಿ ಅಲಂಕರಿಸಿರುವುದು ಈ ದೋಚು ಲಾ ಪಾಸ್ನ ರಮಣೀಯ ಸೌಂದರ್ಯವನ್ನು ಹೆಚ್ಚಿಸಿದೆ.

ಐತಿಹಾಸಿಕ ಮಹತ್ವದ ಜೊತೆಗೆ ದೋಚು ಲಾ ಪಾಸ್ನಲ್ಲಿ 2008 ರಲ್ಲಿ ಮಹಾರಾಣಿ ಆಶಿ ದೋರ್ಜಿ ವಾಂಗ್ಮೋ ವಾಂಗ್ಚುಕ್ ನಿರ್ಮಿಸಿದ ಡ್ರುಕ್ ವಾಂಗ್ಯಾಲ್ ದೇವಾಲಯ ಇರುವುದರಿಂದ ಇದು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಈ ದೇವಾಲಯವು ನಾಲ್ಕನೇ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ಗೆ ಮತ್ತು ದೇಶ ಹಾಗೂ ಅದರ ಜನರ ಯೋಗಕ್ಷೇಮಕ್ಕಾಗಿ ಸಮರ್ಪಿತವಾಗಿದೆ.

ದೋಚು ಲಾ ಪಾಸ್ಗೆ ಕಾಲಿಡುತ್ತಿದ್ದಂತೆ ಉಷ್ಣಾಂಶದ ಇಳಿಕೆ ಪರಿಣಾಮವಾಗಿ ನಾವು ಚಳಿಯಿಂದ ನಡುಗುವಂತಾಯಿತು. ಆಗಾಗ್ಗೆ ಬೀಸುವ ತಂಗಾಳಿಯು ನಮಗೆ ಚಳಿಯ ತೀವ್ರತೆಯನ್ನು ಹೆಚ್ಚಿಸಿತು. ಆದರೂ ಆ 108 ಸ್ತೂಪಗಳ ಭವ್ಯ ನೋಟ ಮತ್ತು ಪ್ರಾಕೃತಿಕ ಸೌಂದರ್ಯವು ನಮ್ಮ ಚಳಿಯನ್ನು ದೂರ ಮಾಡಿ ಮನಕ್ಕೆ ಮುದ ನೀಡಿತು. ನೀವು ಭೂತಾನ್ಗೆ ಪ್ರವಾಸ ಕೈಗೊಂಡರೆ ಬೇಸಿಗೆ ಕಾಲದಲ್ಲಿ ಥಿಂಪು ಬಳಿಯ ದೋಚು ಲಾ ಪಾಸ್ ನಿಮಗೆ ಖಂಡಿತವಾಗಿ ಇಷ್ಟವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.