ದಕ್ಷಿಣ ಅಮೆರಿಕದ ಪೆರುವಿನ ಆಂಡಿಸ್ ಪರ್ವತ ಶ್ರೇಣಿಯಲ್ಲಿರುವ ಇಂಕಾ ಸಾಮ್ರಾಜ್ಯದ ಅವಶೇಷ ನೋಡುಗರನ್ನು ಬೆರಗಾಗಿಸುತ್ತದೆ. ಕಡಿದಾದ ಬೆಟ್ಟದ ತುದಿಯಲ್ಲಿ ಬಂಡೆಕಲ್ಲುಗಳನ್ನು ಬಳಸಿ 14ನೇ ಶತಮಾನದಲ್ಲಿ ಇಂಕಾ ದೊರೆಗಳು ನಿರ್ಮಿಸಿದ ಈ ನಗರ ಅತ್ಯಂತ ರಮಣೀಯ ತಾಣ. ಇಲ್ಲಿ ಕಲ್ಲಿನಲ್ಲಿ ಅಚ್ಚುಕಟ್ಟಾದ ಕಟ್ಟಡಗಳನ್ನು ಕಟ್ಟಿದ ರೀತಿ ಮನಸ್ಸಿನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ...