ತಿರುವನಂತಪುರ: ಬ್ಯಾಂಕ್ ಉದ್ಯೋಗಿಯೊಬ್ಬರು, ಬೈಕ್ ಸವಾರಿಯಾಗಿ ಸಾಹಸ ಮಾಡಿದ ನಂತರ, ಇದೀಗ ಪರ್ವತಾರೋಹಿಯಾಗಿ ಜಗತ್ತಿನ ಅತಿ ಎತ್ತರದ ಗಿರಿಶಿಖರ ಮೌಂಟ್ ಎವರೆಸ್ಟ್ ಏರಿದ್ದಾರೆ. ಆ ಮೂಲಕ ಎವರೆಸ್ಟ್ ಏರಿದ ಕೇರಳದ ಮೊದಲ ಮಹಿಳೆ ಎಂಬ ಖ್ಯಾತಿಯನ್ನೂ ಇವರು ಗಳಿಸಿದ್ದಾರೆ.

ಖತಾರ್ನಲ್ಲಿ ನೆಲೆಸಿರುವ ಕೇರಳದ ಕಣ್ಣೂರಿನ ನಿವಾಸಿ ಸಫ್ರಿನಾ ಲತೀಫ್ ಸಾಹಸ ಪ್ರವೃತ್ತಿಯುಳ್ಳವರು. ಬ್ಯಾಂಕ್ನಲ್ಲಿ ಉದ್ಯೋಗದಲ್ಲಿರುವಾಗಲೇ ಬೈಕ್ ಸಾಹಸಕ್ಕೆ ಕೈಹಾಕಿದ್ದರು. ನಂತರ ಅವರ ಆಸಕ್ತಿ ಚಾರಣದತ್ತ ಹೊರಳಿತು. ‘ನನ್ನ ಜೀವನದಲ್ಲೇ ಅತ್ಯಂತ ಕಠಿಣ ಸವಾಲನ್ನು ನಾನು ಎದುರಿಸಿದ್ದು ಪರ್ವತ ಏರುವಾಗ. ಇಲ್ಲಿ ದೈಹಿಕ ಸಾಮರ್ಥ್ಯವಷ್ಟೇ ಸಾಲದು, ಮಾನಸಿಕವಾಗಿಯೂ ಸದೃಢರಾಗಿರುವುದು ಬಹಳಾ ಮುಖ್ಯ’ ಎಂದು ತಮ್ಮ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.

‘ಮೌಂಟ್ ಎವರೆಸ್ಟ್ ಏರುವ ಹಾದಿಯಲ್ಲಿ ಹಲವು ಕನಸಿಟ್ಟುಕೊಂಡು ಏರುತ್ತಿದ್ದವರಲ್ಲಿ ಕೆಲವರ ಶವಗಳು ಎದುರಾಗುತ್ತವೆ. ಮುಂದಿನ ಸರದಿ ನನ್ನದೇ ಎಂಬ ಭಯ ಆವರಿಸುತ್ತದೆ. ಆದರೆ ಶಿಖರದ ತುದಿ ತಲುಪುವ ಛಲವೊಂದೇ ಅಲ್ಲಿಗೆ ಕರೆದೊಯ್ಯುತ್ತದೆ’ ಎಂದ ಸಫ್ರಿನಾ, ಏ. 28ರಂದು ಮೌಂಟ್ ಎವರೆಸ್ಟ್ ಏರಲು ಆರಂಭಿಸಿದರು. ಎಂಟು ಸಾವಿರ ಮೀಟರ್ ತಲುಪಿದ್ದು ಮೇ 12ರಂದು. ಅಲ್ಲಿಂದ ಎವರೆಸ್ಟ್ನ ತುದಿ ತಲುಪಲು ಬರೋಬ್ಬರಿ ಆರು ದಿನ ತೆಗೆದುಕೊಂಡರು. ಮೇ 18ರಂದು ಸಫ್ರಿನಾ ತಮ್ಮ ಗುರಿಯನ್ನು ತಲುಪಿದರು.
.ಮೌಂಟ್ ಎವರೆಸ್ಟ್ ಆರೋಹಣ: 40ನೇ ವರ್ಷದ ಸಂಭ್ರಮದಲ್ಲಿ ಬಚೇಂದ್ರಿ ಪಾಲ್ .ಮೌಂಟ್ ಎವರೆಸ್ಟ್ ಏರಿ 70ನೇ ವರ್ಷ; 2023ರಲ್ಲಿ ಶಿಖರವೇರಿದ 478 ಸಾಹಸಿಗಳು.
ಎವರೆಸ್ಟ್ ಏರುವ ಹಾದಿಯಲ್ಲಿನ ಹಲವು ಸವಾಲುಗಳು...

‘ಎವರೆಸ್ಟ್ ಏರುವ ಹಾದಿಯಲ್ಲಿ ಹಿಮಪಾತಗಳಾಗುತ್ತಿರುತ್ತವೆ. ಕಲ್ಲು ಬಂಡೆಗಳು ಬೀಳುತ್ತಿರುತ್ತವೆ, ನಮ್ಮಂತೆಯೇ ಪರ್ವತ ಏರುತ್ತಿದ್ದವರು ಶವವಾಗಿ ಬಿದ್ದಿರುತ್ತಾರೆ. ಆದರೆ ಈ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು, ಶಿಖರದ ತುತ್ತತುದಿಯಿಂದ ಜಗತ್ತನ್ನು ನೋಡುವ ಸುಖವೇ ಬೇರೆ. ಅದು ಆವರೆಗೆ ಎದುರಿಸಿದ ಎಲ್ಲಾ ಸವಾಲುಗಳನ್ನೂ ಮಂಜಿನಂತೆ ಕರಗಿಸುತ್ತದೆ’ ಎಂದು ತಮ್ಮ ಅನುಭವವನ್ನು 30 ವರ್ಷದ ಸಫ್ರಿನಾ ಹಂಚಿಕೊಂಡಿದ್ದಾರೆ.

‘ನೇಪಾಳ ಮಾರ್ಗದಿಂದ ಹತ್ತಲಾರಂಭಿಸಿದ ನನಗೆ ಶಿಖರದ ಮೇಲೆ ನಿಂತು ಜಗತ್ತನ್ನು ಬರಿಗಣ್ಣಿನಿಂದ ನೋಡುವ ನನ್ನ ಹಂಬಲ ದುಬಾರಿಯಾಗಿ ಪರಿಣಮಿಸಿತು. ತಂಪು ಕನ್ನಡಕ ತೆಗೆಯುತ್ತಿದ್ದಂತೆ ಕೊರೆಯುವ ಹಿಮದಿಂದಾಗಿ ದೃಷ್ಟಿ ಮಂದವಾಯಿತು. ಕೆಲಕಾಲ ಆಸ್ಪತ್ರೆಗೆ ದಾಖಲಾದೆ. ಪರ್ವತ ಏರುವಾಗ ನನಗೆ ಎತ್ತರದ ಅರಿವಾಗಲಿಲ್ಲ. ಆದರೆ ಇಳಿಯುವಾಗ ಸಾಗಿದ ಹಾದಿಯು ಎಷ್ಟು ಕಠಿಣವಾಗಿತ್ತು ಎಂಬುದು ಅರಿವಿಗೆ ಬಂತು’ ಎಂದರು.

'ಕೋವಿಡ್ 19ರ ನಂತರ ನಾನು ಮತ್ತು ಪತಿ ಶಸ್ತ್ರಚಿಕಿತ್ಸಕ ಡಾ. ಶಮೀಲ್ ಮುಸ್ತಾಫಾ ಇಬ್ಬರೂ ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಿಸುವ ಮಹತ್ವವನ್ನು ಅರಿತೆವು. ಜಿಮ್ಗೆ ಸೇರಿದೆವು. ನಡಿಗೆ, ಓಟ ಆರಂಭಿಸಿದೆವು. ಆದರೆ ಚಾರಣ ಹೋಗಬೇಕೆಂಬುದು ನನ್ನ ಬಹುವರ್ಷಗಳ ಕನಸಾಗಿತ್ತು. ತಾಂಜೇನಿಯಾದಲ್ಲಿರುವ 5,895 ಮೀಟರ್ ಎತ್ತರದ ಮೌಂಟ್ ಕಿಲಿಮಂಜಾರೊವನ್ನು ಸ್ನೇಹಿತರ ಜತೆಗೂಡಿ ಏರಿದೆ. ಇದಾದ ನಂತರ 8,849 ಮೀಟರ್ ಎತ್ತರ ಇರುವ ಮೌಂಟ್ ಎವರೆಸ್ಟ್ ಏರಬೇಕು ಎಂಬ ಮಹದಾಸೆ ಚಿಗುರೊಡೆಯಿತು’ ಎಂದು ಸಫ್ರಿನಾ ಲತೀಫ್ ತಮ್ಮ ಚಾರಣದ ಹಾದಿಯನ್ನು ವಿವರಿಸಿದರು.
.ಐದನೇ ಅತಿ ಎತ್ತರದ ಪರ್ವತ ಮೌಂಟ್ ಮಾಕಾಲು ಏರಿದ ITBP ಯೋಧರು: 150KG ಕಸ ಸಂಗ್ರಹ.ಚಾರಣ: ದೂರದ ಹಿಮಾಲಯ ನುಣ್ಣಗೆ.. ತಣ್ಣಗೆ.. ಆದರೆ..?.
ಎವರೆಸ್ಟ್ ಏರಲು ನಾಲ್ಕು ವರ್ಷಗಳ ತಯಾರಿ...

‘ಮೌಂಟ್ ಎವರೆಸ್ಟ್ಗಾಗಿಯೆ ಕಳೆದ ನಾಲ್ಕು ವರ್ಷಗಳಿಂದ ತರಬೇತಿ ಪಡೆದೆ. ಕಳೆದ ವರ್ಷ ಪರ್ವತ ಏರಲು ಸಿದ್ಧತೆ ನಡೆಸಿದರೂ, ತರಬೇತಿ ವೇಳೆ ಪತಿ ಗಾಯಗೊಂಡಿದ್ದರಿಂದ ಮುಂದಕ್ಕೆ ಹಾಕಲಾಯಿತು. ಆದರೆ ಈವರ್ಷವೂ ಅವರು ಗಾಯಗೊಂಡರು. ಹೀಗಾಗಿ ನಾನೊಬ್ಬಳೇ ಎವರೆಸ್ಟ್ ಏರಲು ನಿರ್ಧರಿಸಿದೆ. ಆದರೆ ನನ್ನ ಪತಿಯೊಡನೆ ಮತ್ತೊಮ್ಮೆ ಈ ಶಿಖರ ಏರುವ ಯೋಜನೆಯಂತೂ ಇದೆ’ ಎಂದಿದ್ದಾರೆ.

‘ತರಬೇತಿಯ ಭಾಗವಾಗಿ ಅರ್ಜೆಂಟಿನಾದಲ್ಲಿರುವ ಮೌಂಟ್ ಅಕೊಂಕಗುವಾವನ್ನು ನಾವಿಬ್ಬರೂ ಏರಿದ್ದೇವೆ. ಬಂಡೆಗಳಿಂದಲೇ ತುಂಬಿರುವ ಇದು ಏಳು ಸಾವಿರ ಮೀಟರ್ ಎತ್ತರವಿದೆ. ಆದರೆ ಹಿಮವನ್ನೇ ಹೊದ್ದಿರುವ ಮೌಂಟ್ ಎವರೆಸ್ಟ್ ಅರ್ಥ ಮಾಡಿಕೊಳ್ಳಲು ರಷ್ಯಾದಲ್ಲಿರುವ 5,642 ಮೀಟರ್ ಎತ್ತರ ಇರುವ ಮೌಂಟ್ ಎಲ್ಬ್ರಸ್ ಏರಿದೆವು. ಮೌಂಟ್ ಎವರೆಸ್ಟ್ ಏರಲು ಸೂಕ್ತ ಉಡುಪು ಅಗತ್ಯ. ದೈಹಿಕ ಮತ್ತು ಮಾನಸಿಕ ಸದೃಢತೆ ಅತ್ಯಗತ್ಯ’ ಎಂದು ತಮ್ಮ ಸಾಹಸಯಾತ್ರೆಯನ್ನು ವಿವರಿಸಿದ್ದಾರೆ.

‘ಇಷ್ಟೊಂದು ಹಣ ಮತ್ತು ದೈಹಿಕವಾಗಿ ದಂಡಿಸಿಕೊಳ್ಳುವ ಈ ಹುಚ್ಚು ಸಾಹಸವೇಕೆ ಎಂದು ಬಹಳಷ್ಟು ಬಾರಿ ಅನಿಸುತ್ತಿತ್ತು. ಆದರೆ ನಮ್ಮ ಗುರಿಯತ್ತ ಸಾಗಬೇಕೆಂಬ ಏಕೈಕ ಉದ್ದೇಶ ಅದು ನಮ್ಮನ್ನು ತುತ್ತತುದಿಯತ್ತ ಕೊಂಡೊಯ್ಯುತ್ತದೆ. ಎವರೆಸ್ಟ್ ಏರಿ ಜೀವಂತವಾಗಿ ಮರಳಿದ್ದೇನೆ. ನಮ್ಮ ಆತ್ಮ ಸಂತೋಷಕ್ಕೆ ಇನ್ನೊಬ್ಬರ ಮೇಲೆ ಎಂದಿಗೂ ಅವಲಂಬಿಸಬಾರದು. ನಮ್ಮ ಸಂತೋಷವನ್ನು ನಾವೇ ಕಂಡುಕೊಳ್ಳಬೇಕು’ ಎಂದು ಸಫ್ರಿನಾ ಲತೀಫ್ ಹೇಳಿದ್ದಾರೆ.
.ವಿದೇಶಿಯರಿಗಿಲ್ಲ ಹಾರ್ವರ್ಡ್: US ನಿರ್ಧಾರದಿಂದ ಭಾರತ, ಚೀನಾ ವಿದ್ಯಾರ್ಥಿಗಳ ಪರದಾಟ.ಆಳ–ಅಗಲ: ಹಿಮಾಲಯ ತಪ್ಪಲಿನ ಜೋಶಿಮಠ ಪಟ್ಟಣಕ್ಕೆ ಕುಸಿತದ ಭೀತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.