ವಾಷಿಂಗ್ಟನ್: ಸುಂಕದ ಸಮರದ ನಂತರ ಇದೀಗ ಅಮೆರಿಕವು ತನ್ನ ನೆಲದಲ್ಲಿ ಶಿಕ್ಷಣ ಪಡೆಯುವ ವಿದೇಶಿ ವಿದ್ಯಾರ್ಥಿಗಳಿಗೆ ನಿರ್ಬಂಧ ಹೇರುವ ಮೂಲಕ ಪರೋಕ್ಷವಾಗಿ ಇತರ ರಾಷ್ಟ್ರಗಳ ಮೇಲೆ ಒತ್ತಡ ಹೇರಿದೆ. ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ವಿದೇಶಿ ವಿದ್ಯಾರ್ಥಿಗಳ ದಾಖಲಾತಿಯನ್ನು ಅಮೆರಿಕ ಸ್ಥಗಿತಗೊಳಿಸಿದ್ದು ಇದಕ್ಕೊಂದು ಇತ್ತೀಚಿನ ಉದಾಹರಣೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಅಧಿಕಾರಕ್ಕೆ ಬಂದ ದಿನದಿಂದ ಅಚ್ಚರಿ ಮೇಲೆ ಅಚ್ಚರಿ, ಆಘಾತದ ಮೇಲೆ ಆಘಾತ ನೀಡುತ್ತಲೇ ಇದೆ. ಭಾರತ ಮತ್ತು ಚೀನಾದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ನಿರ್ಬಂಧ ಹೇರಿರುವುದರಿಂದ ಅಮೆರಿಕದಲ್ಲಿ ಉಳಿಯುವ ತಮ್ಮ ಕಾನೂನಾತ್ಮಕ ಅವಕಾಶವನ್ನು ಈ ವಿದ್ಯಾರ್ಥಿಗಳು ಹುಡುಕಲಾರಂಭಿಸಿದ್ದಾರೆ.

ಮತ್ತೊಂದೆಡೆ ಸರ್ಕಾರದ ಈ ನಿರ್ಧಾರವು ‘ಕಾನೂನು ವಿರೋಧಿ’ ಎಂದು ಹಾರ್ವರ್ಡ್ ಹೇಳಿದೆ. ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಕೇಂಬ್ರಿಜ್ನ ಇವಿ ಲೀಗ್ ವಿಶ್ವವಿದ್ಯಾಲಯ, ಮೆಸ್ಸಚುಸಾಟ್ಸ್ ವಿಶ್ವವಿದ್ಯಾಲಯಗಳೂ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿವೆ.

ಹಾರ್ವರ್ಡ್ನಲ್ಲಿ ಜಗತ್ತಿನ ಬಹುತೇಕ ದೇಶಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇವರಲ್ಲಿ ಭಾರತದ 788 ಹಾಗೂ ಚೀನಾದ 1,378 ವಿದ್ಯಾರ್ಥಿಗಳು ಸದ್ಯ ಕಲಿಯುತ್ತಿದ್ದಾರೆ ಎಂದು ಹಾರ್ವರ್ಡ್ ತನ್ನ ಅಂತರ್ಜಾಲ ಪುಟದಲ್ಲಿ ಹೇಳಿಕೊಂಡಿದೆ. ಹೀಗಾಗಿ ಚೀನಾವನ್ನೇ ಗುರಿಯಾಗಿಸಿ ಅಮೆರಿಕ ಈ ಕ್ರಮ ಕೈಗೊಂಡಿದೆ ಎಂದೇ ಹೇಳಲಾಗುತ್ತಿದೆ.

ಹಾರ್ವರ್ಡ್ನ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಭೌತವಿಜ್ಞಾನದ ಸಂಶೋಧನಾ ವಿದ್ಯಾರ್ಥಿ ಚೀನಾದ ಝಾಂಗ್, ‘ಇತರ ರಾಷ್ಟ್ರದವರಿಗೆ ಹೋಲಿಸಿದರೆ ಚೀನಾದವರೇ ಗುರಿಯಾಗಿದ್ದು ಹೆಚ್ಚು. ಸದ್ಯ ನಾನು ಇರುವ ಸ್ಥಳದಿಂದ ಬೇರೆಡೆ ಹೋಗುವಂತೆ ಸ್ನೇಹಿತರು ಸಲಹೆ ನೀಡಿದ್ದಾರೆ. ಒಂದೊಮ್ಮೆ ಅಲ್ಲೇ ಇದ್ದರೆ, ಅಧಿಕಾರಿಗಳು ನಮ್ಮನ್ನು ವಶಕ್ಕೆ ಪಡೆದು ಗಡೀಪಾರು ಮಾಡುವ ಸಾಧ್ಯತೆ ಇದೆ’ ಎಂದು ಅವರು ಹೇಳಿದ್ದಾರೆ.

ಅಮೆರಿಕದ ಈ ಕ್ರಮದಿಂದ ತಮ್ಮ ವೀಸಾ ಏನಾಗಲಿದೆ ಎಂಬ ಆತಂಕದಲ್ಲಿ ವಿದೇಶಿ ವಿದ್ಯಾರ್ಥಿಗಳು ಇದ್ದಾರೆ. ಮತ್ತೊಂದೆಡೆ ಸರ್ಕಾರದ ಕ್ರಮದ ವಿರುದ್ಧ ವಿಶ್ವವಿದ್ಯಾಲಯ ನ್ಯಾಯಾಂಗ ಹೋರಾಟ ಮಾಡಿ ಗೆದ್ದಲ್ಲಿ, ಶೈಕ್ಷಣಿಕ ಬದುಕು ಮುಂದುವರಿಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

‘ತರಗತಿಗಳು ಎಂದಿನಂತೆಯೇ ನಡೆಯಲಿವೆ. ಮುಂದಿನ 72 ಗಂಟೆಗಳಲ್ಲಿ ಸರ್ಕಾರದೊಂದಿಗೆ ಮಾತುಕತೆ ನಡೆಯುವ ವಿಶ್ವಾಸವಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ಸಾಧ್ಯತೆಗಳಿವೆ ಎಂದು ನಮ್ಮ ಪ್ರಾಧ್ಯಾಪಕರು ನಮಗೆ ಇಮೇಲ್ ಕಳುಹಿಸಿದ್ದಾರೆ’ ಎಂದು ಹಾರ್ವರ್ಡ್ನ ಕೆನಡಿ ಶಾಲೆಯ ವಿದ್ಯಾರ್ಥಿಗಳು ಹೇಳಿದ್ದಾರೆ.

ಹಾರ್ವರ್ಡ್ ರೆಫ್ಯುಜಿ (ನಿರಾಶ್ರಿತರು) ಎಂಬ ವೇದಿಕೆಯೊಂದನ್ನು ಇನ್ಸ್ಟಾಗ್ರಾಂನಲ್ಲಿ ವಿದ್ಯಾರ್ಥಿಗಳು ರಚಿಸಿಕೊಂಡಿದ್ದು, ತಮ್ಮ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.

‘ಅಮೆರಿಕದ ಈ ಕ್ರಮವು ತನ್ನದೇ ವರ್ಚಸ್ಸಿಗೆ ಧಕ್ಕೆಯನ್ನುಂಟು ಮಾಡಲಿದೆ ಮತ್ತು ಅದು ತನ್ನ ಅಂತರರಾಷ್ಟ್ರೀಯ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಲಿದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ.

ಪ್ರಯಾಣ ರದ್ದುಗೊಳಿಸಿದ ವಿದ್ಯಾರ್ಥಿಗಳು

‘ಹಾರ್ವರ್ಡ್ ವಿವಿಯು ವಿದೇಶಿ ವಿದ್ಯಾರ್ಥಿಗಳ ನೋಂದಣಿ ಮಾಡುವಂತಿಲ್ಲ ಎಂದು ಅಮೆರಿಕ ಘೋಷಣೆ ಮಾಡಿದ ನಂತರ, ಸ್ವದೇಶಕ್ಕೆ ಹೋಗಿಬರುವ ಬಹಳಷ್ಟು ವಿದ್ಯಾರ್ಥಿಗಳು ತಮ್ಮ ವಿಮಾನ ಟಿಕೆಟ್ ರದ್ದುಗೊಳಿಸಿದ್ದಾರೆ. ‘ಆರಂಭದಲ್ಲಿ ಇದು ಸುಳ್ಳು ಸುದ್ದಿ ಎಂದುಕೊಂಡಿದ್ದೆವು. ಈಗ ಇದು ಸತ್ಯ ಎಂದು ಗೊತ್ತಾಗಿದೆ. ನಿಜಕ್ಕೂ ಬೇಸರವಾಗುತ್ತಿದೆ. ಸಂಶೋಧನಾ ಸಹಾಯಕರಾಗಿ ದುಡಿಯುವುದು ನಮ್ಮ ವಿಸಾದ ಸ್ಥಿತಿಗೆ ಜೋಡಣೆಯಾಗಿದೆ. ಜತೆಗೆ ನಮ್ಮ ಪಿಚ್.ಡಿ. ಮೇಲೂ ಮಂಕು ಕವಿದಂತಾಗಿದೆ’ ಎಂದು ಸಂಶೋಧನಾ ವಿದ್ಯಾರ್ಥಿಗಳು ಹೇಳಿದ್ದಾರೆ.

ತಮ್ಮ ವಲಸೆ ಸ್ಥಿತಿಗಳ ಕುರಿತು ಮುಕ್ತವಾಗಿ ಹಂಚಿಕೊಳ್ಳಲು ವಾಟ್ಸ್ಆ್ಯಪ್ ಗ್ರೂಪ್ ರಚಿಸಲಾಗಿದೆ. ಬಹಳಷ್ಟು ವಿದ್ಯಾರ್ಥಿಗಳು ತಮಗೆ ಗೊತ್ತಿರುವ ಕಾನೂನು ಸಲಹೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದಾರೆ. ದೇಶವನ್ನು ತೊರೆಯದಂತೆ ಮತ್ತು ದೇಶದೊಳಗೂ ವಿಮಾನಗಳಲ್ಲಿ ಸಂಚರಿಸದಂತೆ ವಕೀಲರೊಬ್ಬರು ಸಲಹೆ ನೀಡಿದ್ದಾರೆ. ವಿಶ್ವವಿದ್ಯಾಲಯದಿಂದ ಅಧಿಕೃತ ಹೇಳಿಕೆ ಹೊರಬೀಳುವವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆಯೂ ಅವರು ಹೇಳಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿರುವುದು ವರದಿಯಾಗಿದೆ.

ವಿದ್ಯಾರ್ಥಿಗಳ ಮುಂದಿನ ನಡೆ..?

‘ಕಲಿಕಾ ವಿಸಾ ಆಧಾರದಲ್ಲಿ ವಿಶ್ವವಿದ್ಯಾಲಯದಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ಪಟ್ಟಿ ಕಳುಹಿಸುವಂತೆ ಸರ್ಕಾರ ಕೇಳಿತ್ತು. ಅದನ್ನು ನಿರಾಕರಿಸಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಒಂದೊಮ್ಮೆ ತನ್ನ ನಿರ್ಧಾರವನ್ನು ಬದಲಸಿಕೊಳ್ಳದಿದ್ದರೆ ವಿಶ್ವವಿದ್ಯಾಲಯ ಪಶ್ಚಾತ್ತಾಪ ಪಡಲಿದೆ’ ಎಂದು ಟ್ರಂಪ್ ಸರ್ಕಾರ ಹೇಳಿತ್ತು.

ಚೀನಾವನ್ನೇ ಪ್ರಮುಖವಾಗಿ ಗುರಿಯಾಗಿಸಿ ಅಮೆರಿಕ ತೆಗೆದುಕೊಳ್ಳುತ್ತಿರುವ ಕ್ರಮದಿಂದ ಚೀನಿಯರ ಹಲವು ಕುಟುಂಬಗಳು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾತನಾಡುವ ಇತರ ದೇಶಗಳನ್ನು ಆಯ್ಕೆ ಮಾಡಿಕೊಳ್ಳುತ್ತಿವೆ. ಇದರಲ್ಲಿ ಮುಖ್ಯವಾಗಿ ಆಸ್ಟ್ರೇಲಿಯಾ ಮತ್ತು ಸಿಂಗಪುರಗಳತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಿದ್ದಾರೆ ಎಂದು ಹಲವು ಕನ್ಸಲ್ಟೆಂಟ್ಗಳು ಹೇಳಿದ್ದಾರೆ.

ಅಮೆರಿಕದ ಹಾರ್ವರ್ಡ್ನ ಈ ಬೆಳವಣಿಗೆಯ ಬೆನ್ನಲ್ಲೇ ಹಾಂಗ್ಕಾಂಗ್ನ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯಗಳು ಷರತ್ತು ರಹಿತ ದಾಖಲಾತಿಗೆ ನೆರವಾಗುವುದಾಗಿ ಹೇಳಿದೆ. ಎಲ್ಲಾ ರೀತಿಯ ಶೈಕ್ಷಣಿಕ ಬೆಂಬಲ ನೀಡುವುದಾಗಿಯೂ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.