ಟೆಲಿವಿಷನ್ ನಮ್ಮ ದೈನಂದಿನ ಜೀವನದ ಒಂದು ವಿಭಾಗ. ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ವಿದ್ಯಮಾನ, ಮನರಂಜನೆ, ಜ್ಞಾನ ಹೆಚ್ಚಿಸಿಕೊಳ್ಳಲು ಸೇರಿದಂತೆ ಹಲವು ಕಾರಣಗಳಿಗಾಗಿ ಅದು ಪ್ರಾಮುಖ್ಯ ಪಡೆದಿದೆ. ಕಳೆದ ಕೆಲವು ದಶಕಗಳಲ್ಲಿ ಅದು ಬೆಳೆದ ಬಗೆ ನಿಜಕ್ಕೂ ಬೆರಗುಗೊಳಿಸುತ್ತದೆ.

೧೯೭೫–೭೬ರಲ್ಲಿ ಕಲಬುರ್ಗಿ ಜಿಲ್ಲೆಯ ಹಳ್ಳಿಗಳಿಗೆ ‘ಸೈಟ್’ (SITE) ಕಾರ್ಯಕ್ರಮದ ಅಡಿ ಸಮುದಾಯ ಟಿ.ವಿ ಸೆಟ್ಗಳು ಬಂದಿದ್ದವು. ಈ ಮೂಲಕ ಕರ್ನಾಟಕ ರಾಜ್ಯಕ್ಕೆ ಟೆಲಿವಿಷನ್ ಪ್ರವೇಶವಾಯಿತು. ಆ ಕಾರ್ಯಕ್ರಮ ನಿಂತುಹೋದ ಮೇಲೆ ಕಲಬುರ್ಗಿಯಲ್ಲೇ ೧೯೭೭ರ ನವೆಂಬರ್ ೩ರಂದು ಟಿ.ವಿ. ಟ್ರಾನ್ಸ್ಮೀಟರ್ ಸ್ಥಾಪನೆಗೊಂಡಿತು. ಇದಾದ ಮೇಲೆ ೧೯೮೧ರ ನವೆಂಬರ್ ಒಂದರಂದು ರಾಜ್ಯೋತ್ಸವದ ದಿನ ರಾಜಧಾನಿ ಬೆಂಗಳೂರಿನಲ್ಲಿ ಒಂದು ಕಿಲೋವ್ಯಾಟ್ ಸಾಮರ್ಥ್ಯದ ಮರುಪ್ರಸಾರ ಕೇಂದ್ರ ಅಸ್ತಿತ್ವಕ್ಕೆ ಬಂತು. ಪ್ರಾರಂಭದಲ್ಲಿ ಈ ಕೇಂದ್ರವು ಚೆನ್ನೈ, ಮುಂಬೈ ಹಾಗೂ ವಾರಕ್ಕೊಮ್ಮೆ ದೆಹಲಿ ಕೇಂದ್ರಗಳ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿತ್ತು.

೧೯೮೨ರ ಆಗಸ್ಟ್ ೧೫ರಂದು ದೂರದರ್ಶನವು ‘ಬಣ್ಣದ ಕಾರ್ಯಕ್ರಮ‘ಗಳನ್ನು ಶುರುಮಾಡಿತು. ಏಷ್ಯನ್ ಕ್ರೀಡೆಗಳ ಕಾರಣದಿಂದ ದೂರದರ್ಶನದ ಜಾಲ ವ್ಯಾಪಕವಾಗಿ ವಿಸ್ತರಿಸಿತು. ಬಳಿಕ ಅದು ರಾಷ್ಟ್ರೀಯ ಪ್ರಸಾರ ಸೇವೆಯಾಯಿತು. ೧೯೯೧ರಲ್ಲಿ ವಿದೇಶಿ ಉಪಗ್ರಹ ಚಾನೆಲ್ಗಳು ದೇಶದಲ್ಲಿ ಪ್ರಸಾರ ಆರಂಭಿಸುವವರೆಗೆ ದೂರದರ್ಶನದ್ದೇ ಪಾರುಪತ್ಯ ಇತ್ತು. ಇಂದಿಗೂ ಜನಸಾಮಾನ್ಯರು ಎಲ್ಲ ಚಾನೆಲ್ಗಳನ್ನು ದೂರದರ್ಶನದ ಹೆಸರಿನಿಂದಲೇ ಕರೆಯುತ್ತಾರೆ.

೧೯೮೩ರಲ್ಲಿ ಬೆಂಗಳೂರು ದೂರದರ್ಶನವು ಎರಡು ಗಂಟೆಗಳ ಕನ್ನಡ ಕಾರ್ಯಕ್ರಮ ಪ್ರಸಾರ ಮಾಡಲು ಶುರು ಮಾಡಿತು. ನಮ್ಮ ನೆಲದಲ್ಲಿ ಕನ್ನಡ ಕಾರ್ಯಕ್ರಮಗಳನ್ನು ರೂಪಿಸಿ, ಬಿತ್ತರಿಸುವ ಕೆಲಸ ಪ್ರಾರಂಭವಾಯಿತು. ವಿಧಾನಸೌಧದಿಂದ ಸ್ವಲ್ಪ ದೂರದಲ್ಲಿರುವ ವಿಶ್ವೇಶ್ವರಯ್ಯ ಗಗನಚುಂಬಿ ಕಟ್ಟಡದ ೨೪ನೇ ಮಹಡಿಯಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಸ್ಟುಡಿಯೋ ೧೦ ನಿಮಿಷಗಳ ಕನ್ನಡ ವಾರ್ತೆ ಸೇರಿದಂತೆ ೪೫ ನಿಮಿಷಗಳ ಕಾರ್ಯಕ್ರಮ ಸಿದ್ಧಪಡಿಸಿ ಪ್ರಸಾರ ಆರಂಭಿಸಿತು. ಬಳಿಕ ಇತರ ಭಾಷೆಗಳ ಕಾರ್ಯಕ್ರಮ ಕಡಿಮೆಯಾದವು.

ಕನ್ನಡ ಕಾರ್ಯಕ್ರಮಗಳು ಜಾಸ್ತಿಯಾದವು. ಒಂದು ಕಿಲೋವ್ಯಾಟ್ ಸಾಮರ್ಥ್ಯದ ಬದಲಿಗೆ ೧೦ ಕೆ.ವಿ. ಟ್ರಾನ್ಸ್ಮೀಟರ್ ಮಾರ್ಚ್ ಒಂದು ೧೯೮೫ರಂದು ಕಾರ್ಯಾರಂಭ ಮಾಡಿತು. ಜಿ.ವಿ. ಅಯ್ಯರ್ ನಿರ್ದೇಶನದ ತ.ರಾ.ಸು. ಅವರ ‘ಹಂಸಗೀತೆ’ ಕನ್ನಡ ಚಲನಚಿತ್ರ ಮಾಲೆಯ ಮೊಟ್ಟಮೊದಲ ಚಿತ್ರವಾಗಿ ದೂರದರ್ಶನದಲ್ಲಿ ಪ್ರಸಾರ ಕಂಡಿತು. ಅದೇ ವರ್ಷ ‘ಸಿಹಿಕಹಿ’ ಕೌಟುಂಬಿಕ ಧಾರಾವಾಹಿ ಸಹ ಮೂಡಿಬಂತು. ಹಲವು ಕಲಾವಿದರಿಗೆ ದೂರದರ್ಶನ ವೇದಿಕೆ ಒದಗಿಸಿತು. ಬಳಿಕ ದೂರದರ್ಶನವು ಮನೆ ಮಾತಾಯಿತು. ಅದರ ಜನಾಕರ್ಷಣೆ ಹೆಚ್ಚಿದಂತೆ ಜಾಹೀರಾತಿನ ವರಮಾನವೂ ಹೆಚ್ಚಾಯಿತು. ೧೯೮೮ರಲ್ಲಿ ಕನ್ನಡ ವಾರ್ತೆಗಳ ಅವಧಿ ೧೫ ನಿಮಿಷಕ್ಕೇರಿತು.

ಸ್ವಂತ ಕಟ್ಟಡ
೧೯೮೮ರ ಜನವರಿ ೧೬ರಂದು ಜೆ.ಸಿ. ನಗರದಲ್ಲಿರುವ ಅರಮನೆ ಆವರಣ ಎದುರಿನ ಮುನಿರೆಡ್ಡಿಪಾಳ್ಯದಲ್ಲಿ ಅತ್ಯಾಧುನಿಕ ವಾಸ್ತುಶಿಲ್ಪದ ಸಕಲ ಸೌಕರ್ಯ ಹೊಂದಿರುವ ದೂರದರ್ಶನ ಕೇಂದ್ರ ತಲೆ ಎತ್ತಿತು. ಸುಮಾರು ಏಳು ಎಕರೆ ವಿಸ್ತೀರ್ಣದಲ್ಲಿ ಸುಸಜ್ಜಿತ ಕಟ್ಟಡ, ಪರಿಸರ ಹಾಗೂ ಅತ್ಯುತ್ತಮ ಸ್ಟುಡಿಯೋಗಳನ್ನು ಇದು ಒಳಗೊಂಡಿದೆ. ಇಂದು ಈ ಸ್ಥಳವನ್ನು ಟಿ.ವಿ. ಟವರ್ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ೧೯೯೦ರ ಮಾರ್ಚ್ನಲ್ಲಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಇದ್ದ ಎಲ್.ಪಿ.ಟಿ.ಗಳನ್ನು ಒಂದುಗೂಡಿಸಿ ಅವುಗಳ ಮೂಲಕ ಕನ್ನಡ ಕಾರ್ಯಕ್ರಮಗಳನ್ನು ನಾಡಿನ ಉದ್ದಗಲಕ್ಕೂ ಬಿತ್ತರಿಸಲಾಯಿತು.

ಉರ್ದು ವಾರ್ತೆಗೆ ವಿರೋಧ
೧೯೯೪ರಲ್ಲಿ ಉರ್ದು ವಾರ್ತೆ ಪ್ರಸಾರಕ್ಕೆ ತೀವ್ರ ಸಾರ್ವಜನಿಕ ವಿರೋಧ, ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿತ್ತು. ಇದರಿಂದ ಒಂದು ವಾರದೊಳಗೆ ಅದನ್ನು ನಿಲ್ಲಿಸಬೇಕಾಯಿತು. ದೂರದರ್ಶನದ ಇತಿಹಾಸದಲ್ಲಿ ಈ ಘಟನೆ ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿದೆ.
ವಾರ್ತೆಗೆ ಪ್ರತ್ಯೇಕ ಚಾನೆಲ್ಗಳು

೧೯೯೩ರ ಅಕ್ಟೋಬರ್ ಒಂದು ರಾಜ್ಯದ ದೂರದರ್ಶನದಲ್ಲಿ ಮಹತ್ವದ ಕಾಲ. ಈ ವರ್ಷ ಉಪಗ್ರಹದ ಮೂಲಕ ದೇಶದೆಲ್ಲೆಡೆ ಹತ್ತು ಪ್ರಾದೇಶಿಕ ಭಾಷೆಗಳ ಪ್ರಸಾರ ಆರಂಭವಾಯಿತು. ೨೦೦೦ನೇ ಇಸ್ವಿಯಿಂದ ಡಿ.ಡಿ ೯ ಹೆಸರಿನಲ್ಲಿ ಕನ್ನಡ ವಾಹಿನಿ ಶುರು ಆಯಿತು. ಈಗ ಅದು ಚಂದನ ಹೆಸರಿನಲ್ಲಿ ಮೂಡಿಬರುತ್ತಿದೆ. ೯೦ರ ದಶಕದಲ್ಲಿ ಭಾರತದಲ್ಲಿ ಖಾಸಗಿ ಚಾನೆಲ್ಗಳು ದಾಪುಗಾಲು ಇಟ್ಟ ನಂತರ ಮಹತ್ತರ ಬದಲಾವಣೆ ಆಯಿತು.

೧೯೯೨ರಲ್ಲಿ ‘ಝೀ’ ಟಿ.ವಿ ಆರಂಭಗೊಂಡಿತು. ಬಳಿಕ ತಮಿಳಿನ ‘ಸನ್ ಟಿ.ವಿ’, ಅದರ ಮುಂದಿನ ವರ್ಷ ಕನ್ನಡದಲ್ಲಿ ‘ಉದಯ’ ಚಾನೆಲ್ ಮೂಡಿಬಂತು. ನಿಧಾನವಾಗಿ ಒಂದೊಂದೇ ಚಾನೆಲ್ಗಳು ಹುಟ್ಟಿಕೊಂಡವು. ಇದರಲ್ಲಿ ಪ್ರಮುಖವಾದ ಚಾನೆಲ್ಗಳೆಂದರೆ ‘ಈ ಟಿ.ವಿ. ಕನ್ನಡ’, ‘ಕಾವೇರಿ’, ‘ಸುಪ್ರಭಾತ’. ಕೆಲ ವರ್ಷಗಳ ಬಳಿಕ ‘ಸುಪ್ರಭಾತ’, ಕಾವೇರಿ ಪ್ರಸಾರ ಸ್ಥಗಿತಗೊಳಿಸಿದವು. ಬಳಿಕ ದಿನದ ೨೪ ಗಂಟೆಯ ನ್ಯೂಸ್ ಚಾನೆಲ್ಗಳು ಹುಟ್ಟಿಕೊಂಡವು. ಅವುಗಳಲ್ಲಿ ಟಿ.ವಿ.೯, ಸುವರ್ಣ, ಉದಯ ನ್ಯೂಸ್, ಕಸ್ತೂರಿ, ಸಮಯ ನ್ಯೂಸ್, ಈಟಿವಿ ಕನ್ನಡ, ಪಬ್ಲಿಕ್ ನ್ಯೂಸ್, ರಾಜ್ ಟಿ.ವಿ ಸೇರಿವೆ.

ಚಾನೆಲ್ಗಳ ಪ್ರಮಾಣ ದೊಡ್ಡದಾದಂತೆ ಕೇಬಲ್ ಜಾಲವೂ ಬೆಳೆಯಿತು. ಇತ್ತೀಚಿನ ಕೆಲ ವರ್ಷಗಳಿಂದ ಖಾಸಗಿಯವರು ಡಿಟಿಎಚ್ ಸೇವೆ ಕೂಡ ಒದಗಿಸುತ್ತಿದ್ದಾರೆ. ಇಂದು ದೇಶದಲ್ಲಿ ನೂರಾರು ಚಾನೆಲ್ಗಳು ಆಗಿವೆ. ಆದರೆ, ಇಂದಿಗೂ ದೂರದರ್ಶನ ಹೊಸತನಕ್ಕೆ ತೆರೆದುಕೊಂಡು ತನ್ನ ಅಸ್ತಿತ್ವ ಉಳಿಸಿಕೊಂಡಿರುವುದು ಅದರ ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.