ಲಿವರ್ಪೂಲ್: ಭಾರತದ ಜಾಸ್ಮಿನ್ ಲಂಬೋರಿಯಾ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ನ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು.

ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತೆಯಾಗಿರುವ ಜಾಸ್ಮಿನ್, ಪ್ರಿ ಕ್ವಾರ್ಟರ್ ಫೈನಲ್ನಲ್ಲಿ 5–0 ಯಿಂದ ಎರಡು ಬಾರಿ ಒಲಿಂಪಿಯನ್ ಬ್ರೆಜಿಲ್ನ ಜುಸಿಯೆಲೆನ್ ಸೆರ್ಕ್ವೇರಾ ರೊಮಿಯು ಅವರನ್ನು ಸದೆಬಡಿದರು.

ಈ ಹಿಂದೆ ಅಸ್ತಾನಾದಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಕಪ್ನ ಚಿನ್ನದ ಪದಕದ ಸುತ್ತಿನಲ್ಲೂ ಜಾಸ್ಮಿನ್ ಮತ್ತು ರೊಮಿಯು ಮುಖಾಮುಖಿಯಾಗಿದ್ದರು. ಅಲ್ಲೂ ಭಾರತದ ಬಾಕ್ಸರ್ ಮೇಲುಗೈ ಸಾಧಿಸಿದ್ದರು.

ಜಾಸ್ಮಿನ್ ಮುಂದಿನ ಸುತ್ತಿನಲ್ಲಿ ಏಷ್ಯನ್ 22 ವರ್ಷದೊಳಗಿನವರ ಚಾಂಪಿಯನ್ ಖುಮೊರಬೊನು ಮಮಜೊನೊವಾ (ಉಜ್ಬೇಕಿಸ್ತಾನ) ಅವರನ್ನು ಎದುರಿಸಲಿದ್ದಾರೆ. ಈ ಸವಾಲನ್ನು ಗೆದ್ದರೆ ಭಾರತದ ಬಾಕ್ಸರ್ಗೆ ಕನಿಷ್ಠ ಕಂಚಿನ ಪದಕ ಖಚಿತವಾಗಲಿದೆ.

ಪುರುಷರ 65 ಕೆಜಿ ವಿಭಾಗದಲ್ಲಿ ಅಭಿನಾಶ್ ಜಮ್ವಾಲ್ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಅವರು ಮೊದಲ ಸುತ್ತಿನಲ್ಲಿ 5–0 ಅಂತರದಿಂದ ಮೆಕ್ಸಿಕೋದ ಹ್ಯೂಗೋ ಬ್ಯಾರನ್ ಅವರನ್ನು ಮಣಿಸಿದರು.

ಆದರೆ, ಮಹಿಳೆಯರ 75 ಕೆಜಿ ವಿಭಾಗದಲ್ಲಿ ಸನಮಾಚಾ ಚಾನು ಮತ್ತು 54 ಕೆಜಿ ವಿಭಾಗದಲ್ಲಿ ಸಾಕ್ಷಿ ಚೌಧರಿ ನಿರಾಸೆ ಮೂಡಿದರು. ಅವರು ಪ್ರಿ ಕ್ವಾರ್ಟರ್ ಫೈನಲ್ ಹಂತದಲ್ಲಿ ಹೊರಬಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.