ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಕ್‌ನಲ್ಲಿ ಅರಳಿದ ಕೆಂಪುಕೋಟೆ

Last Updated 13 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಕ್ರಿಸ್‌ಮಸ್‌ ಎಂದಾಕ್ಷಣ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರಿಗೂ ನೆನಪಾಗುವುದು ಕೇಕ್‌.

ನಗರದ ಜನರಿಗೆ ಕೇಕ್‌ ಷೋ ಎಂದರೆ ಆಳೆತ್ತರದ, ವಿಭಿನ್ನ ಕೇಕ್‌ಗಳನ್ನು ನೋಡುವುದು, ಅವುಗಳನ್ನು ತಿಂದು ಸವಿಯುವುದು. ಡಿಸೆಂಬರ್‌ ಅಂತ್ಯದಲ್ಲಿ ಪ್ರತಿವರ್ಷ ನಡೆಯುವ ಷೋ ಈಗ ಮತ್ತೆ ಆರಂಭವಾಗಿದೆ.

ಡಿಸೆಂಬರ್‌ 14ರಿಂದ ಜನವರಿ 1ರವರೆಗೆ ಸೇಂಟ್ ಜೋಸೆಫ್ಸ್‌ ಇಂಡಿಯನ್‌ ಹೈಸ್ಕೂಲ್‌ ಅಂಗಳದಲ್ಲಿ ನಡೆಯಲಿದೆ. ಪ್ರವೇಶ ಶುಲ್ಕ ₹70.

ಈ ಬಾರಿ ಕೇಕ್‌ ಷೋನಲ್ಲಿ ನಮ್ಮ ದೇಶದ ಪಾರಂಪರಿಕ ಕಟ್ಟಡಗಳು, ಚೀನಾ ಸೇರಿದಂತೆ ವಿದೇಶದ ಕಟ್ಟಡಗಳು, ಅಲ್ಲಿಯ ಸಂಸ್ಕೃತಿಯನ್ನು ಬಿಂಬಿಸುವ ಕೇಕ್‌ಗಳು ಎದ್ದು ಕಾಣುತ್ತವೆ.

ಮಕ್ಕಳನ್ನು ಆಕರ್ಷಿಸಲು ವಿವಿಧ ಮಾದರಿಯ ಗೊಂಬೆಗಳನ್ನು ಕೇಕ್‌ ರೂಪದಲ್ಲಿ ತಯಾರಿಸಿ ಇಡಲಾಗಿದೆ.

ಕೆಂಪುಕೋಟೆ: ನಮ್ಮ ದೇಶದ ಹೆಮ್ಮೆ ಕೆಂಪುಕೋಟೆಯನ್ನು ಕಲಾವಿದರ ಕುಸರಿ ಕೆಲಸದ ಮೂಲಕ ಅರಳಿಸಲಾಗಿದೆ. ಸಣ್ಣ ಸಣ್ಣ ಕೆತ್ತನೆಗಳಂತೆ ಕಾಣುವ ಈ ಕೋಟೆಯನ್ನು ಕೇಕ್‌ ರೂಪದಲ್ಲಿ ಮಾಡುವುದು ಅಷ್ಟು ಸುಲಭದ ಕೆಲಸ ಅಲ್ಲ. ಆದರೆ ಕಲಾವಿದರಾದ ಮಹೇಶ್‌, ಪ್ರಹ್ಲಾದ್‌, ಚುನ್ನು, ಅರುಣ್‌, ರಾಹುಲ್‌ ಅವರು ಈ ಕೇಕ್‌ ತಯಾರಿಸಿ ಸೈ ಅನಿಸಿಕೊಂಡಿದೆ.

ಮಕ್ಕಳು ಈ ಕೇಕ್‌ ನೋಡಿ ಮಂತ್ರಮುಗ್ದರಾಗಬಹುದು.ಖಚಿತ. ಮೊಘಲ್‌ ವಾಸ್ತುಶಿಲ್ಪದ ಈ ಕಟ್ಟಡ ನೋಡುಗರಿಗೆ ಕಣ್ಮನ ತಣಿಸಲಿದೆ. ಕೆಂಪು ಬಣ್ಣದ ಕಲ್ಲುಗಳನ್ನ ಬಳಸಿ ಕೆಂಪುಕೋಟೆ ಕಟ್ಟಲಾಗಿದೆ. ಅದೇ ಬಣ್ಣವನ್ನು ಬಳಸಿ ಕೇಕ್‌ನಲ್ಲಿ ಹೊಸತನ ಕಂಡುಕೊಳ್ಳಲಾಗಿದೆ. ಪ್ರತ್ಯೇಕ ಸಕ್ಕರೆ ಅಚ್ಚುಗಳನ್ನು ಬಳಸಿ ಕೆಂಪುಕೋಟೆಗೆ ಅಡಿಪಾಯ ಹಾಕಲಾಗಿದೆ. 1.6 ಟನ್‌ ತೂಕದ ಸಕ್ಕರೆ ಬಳಸಲಾಗಿದೆ. ಎರಡು ತಿಂಗಳಿನಿಂದ ಇದಕ್ಕಾಗಿ ಆರು ಮಂದಿ ಕಲಾವಿದರು ಕೆಲಸ ಮಾಡಿದ್ದಾರೆ.ಒಟ್ಟು ಈ ಕೇಕ್‌ 1600 ಕೆ.ಜಿ ಒಳಗೊಂಡಿದೆ.

ಹಿಮಗುಡ್ಡೆ ಮೇಲಿನ ಪೆಂಗ್ವಿನ್‌: ಅರ್ಧ ಆಯಸ್ಸನ್ನು ಭೂಮಿಯ ಮೇಲೂ, ಇನ್ನರ್ಧ ಆಯಸ್ಸನ್ನೂ ನೀರಿನಲ್ಲಿ ಕಳೆಯುವ ಪೆಂಗ್ವಿನ್‌ಗಳನ್ನು ಕಲಾವಿದರು ಕೇಕ್‌ ರೂಪಕ್ಕಿಳಿಸಿದ್ದಾರೆ. ಆಹಾರದ ಬಣ್ಣ ಹಾಗೂ ಅಕ್ಕಿಯನ್ನು ಬಳಸಿ ಪೆಂಗ್ವಿನ್‌ಗಳನ್ನು ಮಾಡಲಾಗಿದೆ.

ಜೀನಿ: ಕಾಲ್ಪನಿಕ ಕಥೆಗಳಲ್ಲಿ ದೀಪವನ್ನು ಉಜ್ಜಿದಾಗ ಬರುವ ದೆವ್ವವೇ ಜೀನಿ. ಚಿನ್ನ ಧರಿಸಿರುವ ದೆವ್ವವನ್ನು ಅದೇ ರೂಪದಲ್ಲಿ ಕಲಾವಿದರು ನಿರ್ಮಿಸಿದ್ದಾರೆ. ಮಕ್ಕಳಿಗೆ ಪೌರಾಣಿಕ ಕಥೆಗಳನ್ನು ಸವಿಯುವ ಅವಕಾಶ ಇದಾಗಿದೆ. 140 ಕೆ.ಜಿ ತೂಕವನ್ನು ಈ ಕೇಕ್‌ ಒಳಗೊಂಡಿದೆ.

ಸಕ್ಕರೆಯ ಹಿಟ್ಟನ್ನು ಬಳಸಿ ವಿವಾಹದ ನಿರ್ವಾತ ಕೇಕ್‌ ತಯಾರಿಸಲಾಗಿದೆ. ಸಕ್ಕರೆಯಿಂದ ಅಲ್ಲಲ್ಲಿ ಕೆಂಪು ಹೂಗಳನ್ನು ನಿರ್ಮಿಸಿ ಜೋಡಿಸಲಾಗಿದೆ. ಇದು ಕೇಕ್‌ನ ಅಂದವನ್ನು ಹೆಚ್ಚಿಸಿದೆ.

ಚೈನೀಸ್ ಪಗೋಡಾ: ಅರುಣ್‌, ಆಶಾ, ರಾಶಿಯಾ ಈ ಮೂವರು ಕಲಾವಿದರು ಚೀನಾದ ಪಾರಂಪರಿಕ ಕಟ್ಟಡ ಚೈನೀಸ್‌ ಪಗೋಡಾವನ್ನು ನಿರ್ಮಿಸಿದ್ದಾರೆ. ಇದು ಬೌದ್ಧಧರ್ಮದ ಪ್ರಸಿದ್ಧಿಯ ದ್ಯೋತಕವಾಗಿದೆ. ಭಾರತದಲ್ಲೂ ಈ ರೀತಿಯ ಕಟ್ಟಡಗಳನ್ನು ಕಟ್ಟಲಾಗಿದೆ. ಈ ಕೇಕ್‌ 65ಕೆ.ಜಿ ತೂಕವನ್ನು ಹೊಂದಿದೆ.

ಯಕ್ಷಿಣಿ ಚಿಟ್ಟೆ ಗೊಂಬೆ: ಯಕ್ಷಿಣಿಗಳು ಎಂದರೆ ಹಗುರವಾದ, ಚಿಕ್ಕದಾದ ಕಾಲ್ಪನಿಕ ಗೊಂಬೆಯಾಗಿದೆ. ಸಕ್ಕರೆಯ ಹಾಳೆಗಳಿಂದ ಈ ಗೊಂಬೆಗಳ ರೆಕ್ಕೆಗಳನ್ನು ಅಂದವಾಗಿ ನಿರ್ಮಿಸಲಾಗಿದೆ. 70 ಕೆ.ಜಿ ಇರುವ ಈ ಕೇಕ್‌ ಅನ್ನು ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ.

ಹೊಲಿಗೆ ಯಂತ್ರ: ಹೊಲಿಗೆ ಕೆಲಸದ ನಿಪುಣರನ್ನು ಬಳಸಿಕೊಂಡು ಈ ಕೇಕ್‌ ತಯಾರಿಸಲಾಗಿದೆ. ಸಕ್ಕರೆಯ ಹಿಟ್ಟು ಹಾಗೂ ಅಕ್ಕಿಯನ್ನು ಈ ಕೇಕ್‌ಗೆ ಬಳಸಿಕೊಳ್ಳಲಾಗಿದೆ. 120 ಕೆ.ಜಿ ಇರುವ ಈ ಕೇಕ್‌ ಅನ್ನು 35 ದಿನಗಳಲ್ಲಿ ತಯಾರಿಸಲಾಗಿದೆ. ಸೂಜಿ, ದಾರದಂತಹ ಸೂಕ್ಷ್ಮ ಕುಸುರಿ ಕೆಲಸವನ್ನು ಕಲಾವಿದರು ಶ್ರದ್ಧೆಯಿಂದ ಮಾಡಿದ್ದಾರೆ.

ಪಿಯೋನಿ ಮದುವೆಯ ಕೇಕ್‌: ಪಿಯೋನಿ ಹೂವುಗಳನ್ನೇ ಬಳಸಿ ನೀಲಿ ಹಾಗೂ ಹಸಿರು ಬಣ್ಣವನ್ನು ಸೇರಿಸಿ ಈ ಕೇಕ್‌ ತಯಾರಾಗಿದೆ. ಸಕ್ಕರೆಯ ಹೂವುಗಳಿಂದ ಕೇಕ್‌ ಅನ್ನು ಸಿಂಗರಿಸಲಾಗಿದೆ. 20 ದಿನಗಳಲ್ಲಿ 140ಕೆ.ಜಿಯ ಕೇಕ್‌ ತಯಾರಿಸಲಾಗಿದೆ.

ಚೇಳು: ಪ್ರಾಕೃತಿಕ ವಿಕೋಪವನ್ನು ಕೇಕ್‌ ರೂಪದಲ್ಲಿ ತಯಾರಿಸಿರುವುದು ಗಮನ ಸೆಳೆಯುತ್ತದೆ. ಇನ್ನೊಂದು ಕುತೂಹಲಕಾರಿ ಕೇಕ್‌ ಎಂದರೆ ಅದು ಚೇಳು. ಕಲಾವಿದರು ಚೇಳಿನ ಹೊರಮೈಯನ್ನು ತಯಾರಿಸಲು ಸಾಕಷ್ಟು ಭಿನ್ನವಾದ ಯೋಜನೆ ರೂಪಿಸಿದ್ದಾರೆ. ಚೇಳು ಕಡಿದರೆ ಎಷ್ಟು ನೋವಾಗುತ್ತದೋ ಹಾಗೆಯೇ ಅದರ ಹೊರಮೈ ಕೂಡ ಅಷ್ಟೇ ಕಠಿಣವಾಗಿದೆ. ಬಿಸ್ಕತ್‌ನ ಮೇಲೆ ಚೇಳನ್ನು ಕೂರಿಸಲಾಗಿದೆ. ಸಕ್ಕರೆಯನ್ನು ಬಳಸಿ ತಯಾರಿಸಲಾಗಿದೆ. 23 ದಿನಗಳಲ್ಲಿ 50 ಕೆ.ಜಿ ಚೇಳನ್ನು ರೂಪಿಸಲಾಗಿದೆ.‌

ಕ್ರಿಸ್‌ಮಸ್‌ ಎಂದರೆ ಅಲ್ಲಿ ಜೋಕರ್ ಇರದಿರಲು ಸಾಧ್ಯವಿಲ್ಲ. ಕೆಂಪು, ಹಳದಿ ಬಣ್ಣದ ಜೋಕರ್ ಕೂಡ ಸಿದ್ಧವಾಗಿದೆ. ಕ್ರಿಸ್‌ಮಸ್‌ ಹಿಮದ ಮನುಷ್ಯ, ಅಲೆಗಳ ಮೇಲೆ ಮೋನಾ, ಚಾಕೋಲೆಟ್ ಈಸ್ಟರ್‌ ಎಗ್‌, ಇಷ್ಟಾರ್ಥ ಸಿದ್ಧಿ ಬಾವಿ, ಬುದ್ಧ ಮತ್ತು ಸಮೃದ್ಧ ತೋಟ, ಕ್ರಿಸ್ತ ದ ರಿಡೀಮರ್‌, ಕ್ರಿಸ್‌ಮಸ್‌ ಆಚರಣೆಯ ಕಲಾಕೃತಿ, ಲಿಲ್ಲಿ ಕ್ಯೂಬ್‌ಗಳು ಆಕರ್ಷಣೀಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT