ಭಾನುವಾರ, ಜನವರಿ 19, 2020
19 °C

ಕನ್ನಡತಿ ಮಮತಾಗೆ ‘ಜಿಯೋ ಕ್ವೀನ್‌’ ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಚೆಗೆ ದುಬೈನಲ್ಲಿ ನಡೆದ 2019ನೇ ಜಿಯೋ ಕಿಂಗ್‌ ಆ್ಯಂಡ್‌ ಕ್ವೀನ್‌ ಬ್ಯೂಟಿ ಸೌಂದರ್ಯ ಸ್ಪರ್ಧೆಯಲ್ಲಿ ‘ಮಿಸೆಸ್‌ ಕಾನ್ಫಿಡೆಂಟ್‌’ ಹಾಗೂ ‘ಮಿಸೆಸ್‌ ಮೋಸ್ಟ್‌ ಪಾಪ್ಯುಲರ್‌ ಇನ್‌ ಸೋಷಿಯಲ್‌ ಮೀಡಿಯಾ’ ಕಿರೀಟವನ್ನು ಕನ್ನಡತಿ, ಬಸವನಗುಡಿಯ ಮಮತಾ ಚಿಮ್ಕೋಡ್‌ ಅವರು ಮುಡಿಗೇರಿಸಿಕೊಂಡಿದ್ದಾರೆ. 

ಈ ಸ್ಪರ್ಧೆಯ ತೀರ್ಪುಗಾರರಾಗಿ ಬಾಲಿವುಡ್‌ನ ಖ್ಯಾತ ನಿರ್ದೇಶಕ ಅರ್ಬಾಸ್‌ ಖಾನ್‌, ಐಸಿಎನ್‌ಸಿಎಲ್‌ ನಿರ್ದೇಶಕ ಸುರೇಶ್‌ ಸೆತಿಯಾ, ಡಿಸೈನರ್‌ ತಾರಾ ಬುಯಾನ್, ಡಿಸೈನರ್‌ ಆಯುಷ್‌ ಮೆಹರಾ, ಶಾಸ್ತ್ರೀಯ ಸಂಗೀತಗಾರ್ತಿ ಪಿ.ಟಿ ದೆಬೋಜ್ಯೋತಿ ಬೋಸ್‌ ಭಾಗವಹಿಸಿದ್ದರು. ಫಿನಾಲೆಯಲ್ಲಿ ಒಟ್ಟು ಮೂರು ಸುತ್ತುಗಳಿದ್ದವು. ಇದಕ್ಕೂ ಮುನ್ನ ಕೋಲ್ಕತ್ತದಲ್ಲಿ ಸೆಮಿ ಫಿನಾಲೆ ಸುತ್ತುಗಳು ಕೂಡ ನಡೆದಿತ್ತು.

ಈ ಸ್ಪರ್ಧೆಯ ಸೆಮಿ ಫಿನಾಲೆ ಕೋಲ್ಕತ್ತದಲ್ಲಿ ನಡೆದಿತ್ತು. ಇದು ದುಬೈ, ಮಸ್ಕತ್‌ ಮತ್ತು ಭಾರತದ ನಡುವೆ ಏರ್ಪಡಿಸಲಾಗಿದ್ದ ಸ್ಪರ್ಧೆಯಾಗಿದೆ. ಜಿಯೋ ಕಿಂಗ್‌ ಆ್ಯಂಡ್‌ ಕ್ವೀನ್‌ನ ಮೊದಲ ಆವೃತ್ತಿಯಾಗಿದ್ದು, ಇದು ಮಿಸ್‌, ಮಿೆಸ್‌ ಮತ್ತು ಮಿಸ್ಟರ್‌ ವಿಭಾಗದಲ್ಲಿ ನಡೆದಿತ್ತು.

ಜಯನಗರದ ನಿವಾಸಿ ಮಮತಾ ಅವರಿಗೆ ಮದುವೆಗಿಂತ ಮುನ್ನವೇ ಮಾಡಲಿಂಗ್‌ನಲ್ಲಿ ಬಹಳ ಆಸಕ್ತಿಯಿತ್ತು. ಆದರೆ ಮನೆಯ ಅವರ ಬೆಂಬಲವಿಲ್ಲದೇ ಇದ್ದಿದ್ದರಿಂದ ಆಸೆಯನ್ನು ಕೈ ಬಿಟ್ಟಿದ್ದರು. ಆದರೆ ಪತಿ ಪ್ರವೀಣ್‌ ಅವರ ಪ್ರೋತ್ಸಾಹದೊಂದಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಿದರು. ಸದ್ಯ ಎಂಎನ್‌ಸಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)