ಭಾನುವಾರ, ಜನವರಿ 26, 2020
20 °C

ಎಚ್‌ಎಸ್‌ಆರ್ ಲೇಔಟ್‌ನಲ್ಲಿ ‘ಮೇರಿ ಕ್ಲಾರಿ ಪ್ಯಾರಿಸ್’ ಸಲೂನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಫ್ರೆಂಚ್ ಲೈಫ್‌ಸ್ಟೈಲ್‌ ಬ್ರಾಂಡ್ ‘ಮೇರಿ ಕ್ಲಾರಿ ಪ್ಯಾರಿಸ್’ ತನ್ನ ಎರಡನೇ ಸಲೂನ್‌ ಕೇಂದ್ರವನ್ನು ನಗರದಲ್ಲಿ ಆರಂಭಿಸಿದೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಈ ಕೇಂದ್ರವನ್ನು ಖ್ಯಾತ ಚಿತ್ರನಟಿ ಸಂಜನಾ ಗುರ್ಲಾನಿ ಅವರು ಇತ್ತೀಚೆಗೆ ಉದ್ಘಾಟಿಸಿದರು.

ಇದು ಹೈದ್ರಾಬಾದ್, ಪುಣೆ ಮತ್ತು ಹೊಸದೆಹಲಿ ನಗರಗಳಲ್ಲಿಯೂ ತನ್ನ ಕೇಂದ್ರಗಳನ್ನು ಆರಂಭಿಸಿದೆ. ಬಿ2ಸಿ ನೆಟ್‌ವರ್ಕ್ ಎಲ್‌ಎಲ್‌ಪಿಯು ಮೇರಿ ಕ್ಲಾರಿ ಪ್ಯಾರಿಸ್ ಅನ್ನು ಭಾರತಕ್ಕೆ ಪರಿಚಯಿಸಿ ಮೇರಿ ಕ್ಲಾರಿ ಪ್ಯಾರಿಸ್ ಸಲೂನ್, ಸಲೂನ್ ಅಂಡ್‌ ವೆಲ್‌ನೆಸ್, ಜಸ್ಟ್ ನೇಲ್ಸ್ ಮತ್ತು ಐಐಡಬ್ಲುಎ (ಬ್ಯೂಟಿ ಅಕಾಡೆಮಿ)ಗೆ ಎಕ್ಸ್‌ಕ್ಲೂಸಿವ್‌ ಫ್ರಾಂಚೈಸಿಯನ್ನು ಪಡೆದುಕೊಂಡಿದೆ. ಬಿ2ಸಿ ನೆಟ್‌ವರ್ಕ್‌ನ ನಿರ್ದೇಶಕ ಮತ್ತು ವಕ್ತಾರ ವಂದನಾಭಾರದ್ವಾಜ್, ನಿರ್ದೇಶಕರು ಮತ್ತು ಸಿಇಒ ವಿಠಲ್ ಶೆಟ್ಟಿ ಹಾಗೂ ಎಚ್‌ಎಸ್‌ಆರ್ ಲೇಔಟ್‌ನ ಶಾಖೆಯ ಫ್ಯಾಂಚೈಸಿ ಮಾಲೀಕ ಗೌರಿ ಸೇರಿದಂತೆ ಮತ್ತಿತರ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದರು.

‘ನಗರದ ನಾಗರಿಕರಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಬ್ಯೂಟಿ ಸರ್ವೀಸ್‌ಗಳನ್ನು ನೀಡಲಾಗುತ್ತದೆ. ಭವಿಷ್ಯದಲ್ಲಿ ಇನ್ನೂ ಹೆಚ್ಚು ಶಾಖೆಗಳನ್ನು ಆರಂಭಿಸುವ ಯೋಜನೆಗಳಿವೆ’ ಎಂದು ಬಿ2ಸಿ ನೆಟ್‌ವರ್ಕ್‌ನ ನಿರ್ದೇಶಕ ಮತ್ತು ವಕ್ತಾರ ವಂದನಾಭಾರದ್ವಾಜ್ ಹೇಳಿದರು.

‘ಈ ಸಲೂನ್ ವಿನೂತನವಾದ ಬ್ಲೆಂಡ್‌ನ ಸೇವೆ ಮತ್ತು ಅನುಭವ ನೀಡುತ್ತದೆ. ಇಲ್ಲಿ ವಿಶ್ವದರ್ಜೆಯ ಹೇರ್ ಕೇರ್, ಸ್ಕಿನ್ ರಿಜುವನೇಶನ್, ಮಾಡರ್ನ್ ನೇಲ್ಸ್ ಮತ್ತು ವೆಡ್ಡಿಂಗ್ ಮೇಕಪ್ ಸೇವೆಗಳು ಲಭ್ಯ’ ಎಂದು ಖ್ಯಾತ ಚಿತ್ರನಟಿ ಸಂಜನಾ ಗುರ್ಲಾನಿ ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು