ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ‘ಮೋಹನದಾಸ- ಕನ್ನಡ ನೆಲದಲ್ಲಿ’ ನಾಟಕ

Last Updated 10 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಡಿ11,ಬುಧವಾರ ‘ನಾಟಕ ಬೆಂಗ್ಳೂರು’ ಉತ್ಸವ‌ದಲ್ಲಿ ಕಲಾಗಂಗೋತ್ರಿ ತಂಡ ‘ಮೋಹನದಾಸ- ಕನ್ನಡ ನೆಲದಲ್ಲಿ’ ನಾಟಕ ಪ್ರದರ್ಶಿಸುತ್ತಿದೆ. ರಚನೆ: ಶ್ರೀಪತಿ ಮಂಜನಬೈಲು, ನಿರ್ದೇಶನ: ಡಾ. ಬಿ.ವಿ. ರಾಜಾರಾಂ.

ಗಾಂಧೀಜಿ 1915ರಿಂದ 1935ರವರೆಗೆ ಹದಿನೆಂಟು ಬಾರಿ ಕರ್ನಾಟಕಕ್ಕೆ ಭೇಟಿ ನೀಡುತ್ತಾರೆ. ಅಸಹಕಾರ ಚಳುವಳಿ, ಬೆಳಗಾವಿ ಅಧಿವೇಶನ, ಈದ್ಗಾ ಮೈದಾನದ ಭಾಷಣ, ನಂದಿ ಗಿರಿಧಾಮದಲ್ಲಿ ವಿಶ್ರಾಂತಿ, ಶಿರಸಿ ಭೇಟಿ, ಬೆಂಗಳೂರು ಭೇಟಿ, ಬದನವಾಳು, ಡಿ.ವಿ.ಜಿ, ಪುಟ್ಟಣ್ಣ ಚೆಟ್ಟಿ, ಕೈಲಾಸಂ, ಸರ್‌ ಎಂ.ವಿ. ಗಂಗಾಧರ ದೇಶಪಾಂಡೆ, ಪಿಟೀಲು ಚೌಡಯ್ಯ ಅವರಂತಹ ಮಹನೀಯರ ಭೇಟಿ, ಹೀಗೆ ಹಲವಾರು ಪ್ರಮುಖ ಘಟನೆಗಳು ಈ ನಾಟಕವನ್ನು ಆವರಿಸಿವೆ.

ಸುಮಾರು ಐವತ್ತು ಜನ ಕಲಾವಿದರು ರಂಗದ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಕರ್ನಾಟಕ ಇತಿಹಾಸದ ಪುಟಗಳಲ್ಲಿ ಗಾಂಧೀಜಿ‌ಯ ಅಧ್ಯಾಯ‌ಗಳನ್ನು ತಿರುಗಿ ನೋಡುವ ಪ್ರಯತ್ನ ಈ ನಾಟಕದ್ದು.

lಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆಸಿ ರಸ್ತೆ. ಸಂಜೆ 7ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT