ಜಿಎಸ್‍ಟಿ ದರ ಕಡಿತದ ಘೋಷಣೆಯನ್ನು ಜಿಎಸ್‍ಟಿ ಕೌನ್ಸಿಲ್ ಆಫ್ ಇಂಡಿಯಾ ಘೋಷಿಸುತ್ತಿದ್ದಂತೆ ರಿಯಾಲ್ಟಿ ಮಾರುಕಟ್ಟೆಯಲ್ಲಿ ಉತ್ತೇಜನ ಕಂಡು ಬರುತ್ತಿದೆ. ನಿರ್ಮಾಣ ಹಂತದಲ್ಲಿರುವ ಆಸ್ತಿಗಳ ಮೇಲಿನ ಜಿಎಸ್‍ಟಿ ದರ ಶೇ 12ರಿಂದ ಶೇ 5ಕ್ಕೆ ಇಳಿಕೆಯಾಗಿದೆ. ಕೈಗೆಟುಕುವ ಮನೆಗಳ ಮೇಲಿನ ಜಿಎಸ್‍ಟಿ ಶೇ 8 ರಿಂದ ಶೇ 1ಕ್ಕೆ ಇಳಿಕೆಯಾಗಿದೆ. ಇದು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಖರೀದಿಯ ಅವಕಾಶವನ್ನು ಹೆಚ್ಚು ಮಾಡಿದೆ.

ಜಿಎಸ್‍ಟಿ ದರ ಕಡಿತದ ಪರಿಣಾಮ ವಸತಿ ಮನೆಗಳ ಮಾರಾಟ ಹಾಗೂ ಹೊಸ ಯೋಜನೆಗಳ ಆರಂಭ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ರೆಡಾಯ್ (ದಿ ಕಾನ್ಫಿಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ) ಬೆಂಗಳೂರು ವಿಭಾಗವು ವಾರ್ಷಿಕ ರಿಯಲ್ ಎಸ್ಟೇಟ್ ಎಕ್ಸ್‌ಪೋ-2019 (ಮೇಳ) ಘೋಷಿಸಿದೆ. ಈ ಮೇಳವು ಎರಡು ವಾರಾಂತ್ಯಗಳಲ್ಲಿ ನಡೆಯಲಿದೆ.

ಇದೇ 2 ಮತ್ತು 3ರಂದು ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಅಶೋಕಾ ಹೋಟೆಲ್‍ನಲ್ಲಿ ಹಾಗೂ ಇದೇ 9 ಮತ್ತು 10ರಂದು ಮಾರತ್ತಹಳ್ಳಿಯ ರ‍್ಯಾಡಿಸನ್ ಬ್ಲೂನಲ್ಲಿ (ಪಾರ್ಕ್ ಪ್ಲಾಜಾ) ಆಯೋಜಿಸಲಾಗಿದೆ.

30 ಡೆವಲಪರ್‌ಗಳು, ಬ್ಯಾಂಕ್‌ಗಳು ಮೇಳದಲ್ಲಿ ಭಾಗವಹಿಸಲಿವೆ. ಗೃಹ ಖರೀದಿದಾರರಿಗೆ ಆಸಕ್ತರಿಗೆ ಗೃಹ ಸಾಲದ ಹಾಗೂ ಅದರ ಅನುಕೂಲಗಳ ಕುರಿತು ಮಾಹಿತಿ ದೊರೆಯುತ್ತದೆ. ಆದಾಯಕ್ಕೆ ತಕ್ಕ ಸಾಲ ಯೋಜನೆಯನ್ನು ತಜ್ಞರು ವಿವರಿಸಲಿದ್ದಾರೆ.

ಮೇಳದ ಕುರಿತು ಮಾಹಿತಿ ನೀಡಿರುವ ಕ್ರೆಡಾಯ್ ಬೆಂಗಳೂರು ವಿಭಾಗದ ಅಧ್ಯಕ್ಷ ಆಶಿಶ್ ಪುರವಂಕರ, ಈ ಮೇಳ ಮನೆ ಕೊಳ್ಳಲು ಆಸಕ್ತಿ ಉಳ್ಳವರು, ಹುಡುಕುತ್ತಿರುವವರಿಗೆ ಅನುಕೂಲ ಒದಗಿಸುತ್ತದೆ. ಜತೆಗೆ ಖರೀದಿದಾರರಿಗೆ ಅವಕಾಶ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಉತ್ತಮ ವೇದಿಕೆಯಾಗಲಿದೆ ಎಂದಿದ್ದಾರೆ.

ಜಿಎಸ್‍ಟಿ ಬೆಲೆ ಕಡಿತ ಈ ಕ್ಷೇತ್ರಕ್ಕೆ ನಿರಾಳತೆ ಒದಗಿಸಿದೆ. ಬೆಲೆ ಹೆಚ್ಚಳ ಹಾಗೂ ತೆರಿಗೆ ಅಂಶಗಳಿಂದ ಬಾಧಿತರಾಗಿ ಇದುವರೆಗೂ ಆಸ್ತಿ ಖರೀದಿಸಲಾಗದ ಗ್ರಾಹಕರಿಗೆ ಇದೀಗ ಸೂಕ್ತ ನಿರ್ಧಾರ ಕೈಗೊಳ್ಳಲು ಹೊಸ ಜಿಎಸ್‍ಟಿ ದರಗಳು ಸಹಕಾರಿಯಾಗಲಿವೆ ಮತ್ತು ಕೈಗೆಟುಕುವ ಬೆಲೆಗೆ ದೊರೆಯುವಂತೆ ಮಾಡಿದೆ. ನಗರದಲ್ಲಿ ಲಭ್ಯವಿರುವ ಅತ್ಯುತ್ತಮ ಯೋಜನೆಗಳನ್ನು ಜನರಿಗೆ ಇಲ್ಲಿ ಪರಿಚಯಿಸಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ರಿಯಲ್ ಎಸ್ಟೇಟ್ ಖರೀದಿ ಮೇಲೆ ಇನ್ನಷ್ಟು ತೆರಿಗೆ ವಿನಾಯಿತಿ ಬಜೆಟ್‌ನಲ್ಲಿಯೇ ಅಧಿಕೃತವಾಗಿ ಘೋಷಿಸಲಾಗಿದೆ. ಕೊಳ್ಳುಗರು ತಮ್ಮ ಎರಡನೇ ಮನೆಯ ಖರೀದಿಗಾಗಿ ಡೆವಲಪರ್‌ಗಳನ್ನು ಸಂಪರ್ಕಿಸುತ್ತಿದ್ದಾರೆ. ಇಂಥವರಿಗೆ ರಿಯಲ್ ಎಸ್ಟೇಟ್ ಮೇಳ ಉತ್ತಮ ಅವಕಾಶ ಒದಗಿಸುತ್ತಿದೆ. ವಿಭಿನ್ನ ಮಾದರಿಯ ಆಸ್ತಿಯನ್ನು ಕೊಳ್ಳುವ ವಿಶಾಲ ಅವಕಾಶ ಒದಗಿಸುತ್ತದೆ’ ಎನ್ನುತ್ತಾರೆ ಕ್ರೆಡಾಯ್ ಬೆಂಗಳೂರು ಕಾರ್ಯದರ್ಶಿ ಮಿ. ಆಶಿಶ್ ನರಹರಿ.

‘ಬೆಂಗಳೂರು ನಗರದ ಮೂಲಭೂತ ಸೌಕರ್ಯ ಅಭಿವೃದ್ಧಿ ಕೂಡ ಉತ್ತಮವಾಗಿದೆ. ಮೆಟ್ರೊ ಸೇವೆ ಸಂಪರ್ಕ ವ್ಯವಸ್ಥೆಯನ್ನು ವಿಸ್ತರಿಸುತ್ತಲೇ ಸಾಗಿದೆ. ಈ ಎಲ್ಲಾ ಬೆಳವಣಿಗೆಗಳು ರಿಯಲ್ ಎಸ್ಟೇಟ್ ಕ್ಷೇತ್ರದ ಪ್ರಗತಿಗೆ ಪೂರಕ ವಾತಾವರಣ ಸೃಷ್ಟಿಸಿವೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದಕ್ಕೆ ಇದು ಸರಿಯಾದ ಸಮಯ. ದರ ಕೂಡ ಸ್ಥಿರವಾಗಿದೆ ಹಾಗೂ ಕೊಳ್ಳುಗರಿಗೆ ಸಾಕಷ್ಟು ಅವಕಾಶಗಳು ನಗರದ ಎಲ್ಲಾ ಭಾಗದಲ್ಲಿಯೂ ಲಭ್ಯವಿದೆ’ ಎನ್ನುತ್ತಾರೆ ಕ್ರೆಡಾಯ್ ಎಕ್ಸ್‌ಪೊ ಸಮಿತಿಯ ಅಧ್ಯಕ್ಷ ಮಿ. ಭೀಮಲ್ ಹೆಗ್ಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.