ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರೆಗಳ ಹೊಸ ಟ್ರೆಂಡ್‌

Last Updated 26 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಪಾಶ್ಚಾತ್ಯ ಮತ್ತು ಆಧುನಿಕ ಉಡುಗೆಗಳ ಆಕರ್ಷಣೆಯ ನಡುವೆಯೂ ಬೆಂಗಳೂರು ಮಹಿಳೆಯರಿಗೆ ಇಂದಿಗೂ ಸೀರೆಗಳೇ ಅತ್ಯಂತ ಅಚ್ಚುಮೆಚ್ಚಿನ ಉಡುಗೆಯಾಗಿವೆ.

ಪಾಶ್ಚಾತ್ಯ ಉಡುಗೆಗಳಿಗಿಂತ ಸೀರೆಯಲ್ಲಿಯೇ ಮಹಿಳೆ ಪರಿಪೂರ್ಣಳಾಗಿ ಕಾಣುತ್ತಾಳೆ.ಸೀರೆ ಭಾರತೀಯ ನಾರಿಯ ಸಂಕೇತ ಎನ್ನುವುದು ಇದಕ್ಕೆ ಕಾರಣ.

ಮಹಿಳೆ ಸೌಂದರ್ಯವನ್ನು ಸೀರೆಗಳು ಅನಾವರಣಗೊಳಿಸಿದಷ್ಟು ಪರಿಣಾಮಕಾರಿಯಾಗಿ ಬೇರೆ ಯಾವ ಉಡುಪುಗಳಿಂದಲೂ ಸಾಧ್ಯವಿಲ್ಲ. ಮೇಲಾಗಿ ಸೀರೆಗಳಲ್ಲಿ ದೊರೆಯುವ ವಿನ್ಯಾಸ, ವೈವಿಧ್ಯತೆಗಳು ಬೇರೆ ಯಾವ ಉಡುಪಿನಲ್ಲಿಯೂ ಸಿಗಲು ಸಾಧ್ಯವಿಲ್ಲ ಎನ್ನುತ್ತಾರೆ ಬೆಂಗಳೂರು ಮಹಿಳೆಯರು.

ಸೀರೆಗಳು ಭಾರತೀಯ ಸಂಸ್ಕೃತಿ, ಸಂಪ್ರದಾಯ ಬಿಂಬಿಸುವ ಸುಂದರವಾದ ಉಡುಗೆ. ಭಾರತೀಯ ಮಹಿಳೆಯರ ಹೆಗ್ಗುರುತು. ದೈನಂದಿನ ಉಡುಗೆಗಿಂತ ಮದುವೆ, ಜನ್ಮದಿನ, ಹಬ್ಬ, ಪಾರ್ಟಿಗಳಂತಹ ವಿಶೇಷ ಸಂದರ್ಭದಲ್ಲಿ ಸೀರೆ ಉಡುವುದು ಯುವತಿಯರಿಗೆ ಹೆಚ್ಚು ಇಷ್ಟ.

ಗೃಹಿಣಿಯರಿಗೆ ಮತ್ತು ಕೆಲಸ ಮಾಡುವ ಮಹಿಳೆಯರು ಇಂದಿಗೂ ತಮ್ಮ ಅಚ್ಚುಮೆಚ್ಚಿನ ದೈನಂದಿನ ಉಡುಪನ್ನಾಗಿ ಆಯ್ಕೆ ಮಾಡಿಕೊಳ್ಳುವುದು ಸೀರೆಯನ್ನೇಎನ್ನುವ ಕುತೂಹಲಕಾರಿ ಸಂಗತಿ ಆನ್‌ಲೈನ್‌ ಸಾರಿ ಶಾಪಿಂಗ್‌ ತಾಣ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.

ಕಾಂಜಿವರಂ, ಬನಾರಸಿ, ಬಾಂದನಿ, ಚಾಂದೇರಿ, ಕಲಾಂಕರಿ, ಕಲ್ಕತ್ತಾ ಮತ್ತು ಆಂಧ್ರದ ಕಾಟನ್‌ ಸೀರೆಗಳಿಗೆ ಹೋಲಿಸಿದರೆ ಕರ್ನಾಟಕದ ಮೈಸೂರು ಸಿಲ್ಕ್‌, ಇಳಕಲ್‌,ಮೊಳಕಾಲ್ಮೂರು,ಶಹಾಪುರ, ಭಾಗ್ಯನಗರ, ಕುದೂರು ಸೀರೆಗಳು ಏನೂ ಕಡಿಮೆಯಲ್ಲ. ಅವುಗಳ ಜನಪ್ರಿಯತೆ ರಾಜ್ಯ, ರಾಷ್ಟ್ರದ ಗಡಿ ದಾಟಿದೆ.

ಬಾಲಿವುಡ್‌ ಅಥವಾ ಇನ್ನಾವುದೇ ಸಿನಿಮಾದಲ್ಲಿ ನಾಯಕರಿಯರು ತೊಡುವ ಸೀರೆಗಳು ಪ್ರಸಿದ್ಧವಾದರೆ ಮುಗಿಯಿತು ಮರುದಿನ ಆ ಸಿನಿಮಾ ಹೆಸರು ಹೊತ್ತ ಹೊಸ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಇತ್ತೀಚಿನ ಹೊಸ ಟ್ರೆಂಡ್‌ ಎಂದರೆ, ಅಂಗಡಿಗಳಲ್ಲಷ್ಟೇ ಅಲ್ಲ, ಆನ್‌ಲೈನ್‌ಗಳಲ್ಲೂ ಸೀರೆಗಳ ವ್ಯಾಪಾರ, ವಹಿವಾಟು ಭರ್ಜರಿಯಾಗಿ ನಡೆಯುತ್ತಿದೆ.

ಆನ್‌ಲೈನ್‌ ಶಾಪಿಂಗ್‌ ತಾಣವಾದ ಫ್ಲಿಪ್‌ಕಾರ್ಟ್‌ ಸೀರೆ ವಿಭಾಗ 2016ರಿಂದ ಈಚೆಗೆ ಶೇ 76ರಷ್ಟು ಪ್ರಗತಿ ಸಾಧಿಸಿದೆ. ಪ್ರತಿವರ್ಷ ಮಾರಾಟ ದ್ವಿಗುಣವಾಗುತ್ತಿದೆ. ಸೀರೆಗಳು ಇಂದಿಗೂ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿವೆ ಎನ್ನಲು ಇದು ನಿದರ್ಶನ. ನಮ್ಮ ವೇದಿಕೆಯಲ್ಲಿ ಎರಡು ಲಕ್ಷಕ್ಕೂ ಹೆಚ್ಚಿನ ಸೀರೆಗಳ ವಿನ್ಯಾಗಳು ಮಾರಾಟಕ್ಕಿವೆ ಎನ್ನುತ್ತಾರೆ ಫ್ಲಿಪ್‌ಕಾರ್ಟ್‌ ಉಪಾಧ್ಯಕ್ಷ ದೇವ್ ಅಯ್ಯರ್‌.

ದಿನ ಉಡುವ ಸೀರೆಗಳು, ಮದುವೆ, ಹಬ್ಬದಂತಹ ಶುಭ ಸಮಾರಂಭಗಳಿಗೆ ತೊಡುವ ಸೀರೆಗಳು, ಕಚೇರಿ, ಪಾರ್ಟಿ ವೇರ್‌, ವೀಕೆಂಡ್‌ಗಳಿಗಾಗಿ ತೊಡುವ ಸೀರೆಗಳು ತುಂಬಾ ಜನಪ್ರಿಯ ಎನ್ನುವುದು ಅವರ ಅನುಭವದ ಮಾತು.

ಈ ಸೀರೆಯ ಖ್ಯಾತಿ ಹೇಗಿದೆಯೆಂದರೆ #SareeNotSorry ಮತ್ತು #100SareePact ಎಂಬ ಅಭಿಯಾನಗಳು ನಡೆದಿವೆ.

ಆನ್‌ಲೈನ್‌ ಟ್ರೆಂಡ್‌ ಸೀರೆಗಳು

*ಕಚೇರಿ ಸೀರೆ: ಪ್ರಿಂಟೆಡ್ಕಾಟನ್ ಸೀರೆಗಳು ಕಚೇರಿ ಕೆಲಸ ಮಾಡುವ ಮಹಿಳೆಯರು ಉಡಲು ಹೇಳಿ ಮಾಡಿಸಿದಂತಿರುತ್ತವೆ. ಆರಾಮದಾಯಕವಾಗಿದ್ದು, ಸಾದಾ ಕಾಟನ್‌ ಸೀರೆಗಳನ್ನು ದಿನವೂ ಉಡಬಹುದಾಗಿದೆ.

*ಹಾಫ್ ಅಂಡ್ ಹಾಫ್ ಸ್ಟೈಲ್:ಹಾಫ್ ಅಂಡ್ ಹಾಫ್ ಸ್ಟೈಲ್ ವಿನ್ಯಾಸದ ಸೀರೆಗಳು ಇತ್ತೀಚಿನ ಟ್ರೆಂಡ್ ಆಗಿವೆ. ಸುಂದರವಾಗಿ ಕಾಣಿಸುವ ಈ ಸೀರೆಗಳು ಪಾಲಿಜಿಯೋರ್ಗೆಟ್‍ನಿಂದ ಕೂಡಿರುತ್ತವೆ.

*ಕಾಕ್‍ಟೈಲ್ ಪಾರ್ಟಿ ಸೀರೆ: ಪಿಂಕ್ ಪಾಲಿಕ್ರೀಪ್ ರಫೆಲ್ ಸೀರೆ. ಈ ಸೀರೆ ಅಲ್ಟ್ರಾ-ಚಿಕ್ ಪ್ಯಾಟರ್ನ್‍ನಿಂದ ಕೂಡಿದ್ದು, ಸ್ಟೈಲಿಶ್‌ ಫಾಲ್‌ ಹೊಂದಿದೆ. ಹಗುರಾದ ಮತ್ತು ಆರಾಮದಾಯಕ ಸೀರೆಗಳು ವೀಕೆಂಡ್ ಕಾಕ್‍ಟೈಲ್ ಪಾರ್ಟಿಗೆ ಹೇಳಿ ಮಾಡಿಸಿದಂತಿದೆ.

*ಮದುವೆ ಸೀರೆ:ಗ್ಲಾಮರಸ್ ಲುಕ್‌ ಹೊಂದಿರುವಬನಾರಸಿ ಸಿಲ್ಕ್ ಸೀರೆಗಳು ಮದುವೆ ಸಮಾರಂಭಗಳಿಗೆ ಹೇಳಿ ಮಾಡಿಸಿದಂತಿವೆ. ತುಂಬಾ ಆಕರ್ಷಕವಾಗಿ ಕಾಣುವ ಈ ಸೀರೆಗಳನ್ನು ಉತ್ಕೃಷ್ಟ ಬಟ್ಟೆಯಿಂದ ತಯಾರಿಸಲಾಗಿದ್ದು, ಮೃದುವಾಗಿರುತ್ತವೆ.

*ಚಾರ್ಮಿಂಗ್ ಸ್ಟೈಲ್:ಮೆರೂನ್ ರಾ ಸಿಲ್ಕ್ ಸೀರೆಗಳು ಪಾರ್ಟಿ ಲುಕ್‌ ನೀಡುತ್ತವೆ. ಕಾಂಟ್ರಾಸ್ಟಿಂಗ್ ಬ್ಲೌಸ್‍ನೊಂದಿಗೆ ಅಂದವಾಗಿ ಕಾಣುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT