ವೈಯಾಲಿಕಾವಲ್‌ನಲ್ಲಿ ಇರುವ ತಿರುಮಲ ತಿರುಪತಿ ದೇವಸ್ಥಾನಂನ (ಟಿಟಿಡಿ) ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಇದೇ 18ರಂದು ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ. ದೇವರನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗುತ್ತದೆ. ದೇವರ ದರ್ಶನಕ್ಕೆ ಬೆಳಿಗ್ಗೆ 5 ಗಂಟೆಯಿಂದಲೇ ಅವಕಾಶ ಸಿಗಲಿದೆ.

ಬೆಳಿಗ್ಗೆ 6 ಗಂಟೆಗೆ ಕಿರಣ್ ಶರ್ಮ ಮತ್ತು ಸತೀಶ್ ಶರ್ಮ ಅವರಿಂದ ವೇದಪಾರಾಯಣ. 6.30ಕ್ಕೆ ಮುರಳಿ ಮತ್ತು ಗೋಪಿನಾಥ್ ಅವರಿಂದ ನಾದಸ್ವರಂ, 7ಕ್ಕೆ ಉಮಾ ಗೋವಿಂದ ರಾಜುಲು ಮತ್ತು ತಂಡದಿಂದ ಗೀತಪಾರಾಯಣ, 8ಕ್ಕೆ ಭೂಮಿಕಾ ಲಕ್ಷ್ಮಿ ಮಧುಸೂಧನ ಅವರಿಂದ ಸಂಗೀತ ಕಾರ್ಯಕ್ರಮ. ಬೆಳಿಗ್ಗೆ 9 ಕ್ಕೆ ವಿಷ್ಣುವೆಂಕಟೇಶ ಅವರಿಂದ ಮ್ಯಾಂಡೊಲಿನ್ ವಾದ್ಯಗೋಷ್ಠಿ ನಡೆಯಲಿದೆ.

11 ಗಂಟೆಗೆ ಕುಮಾರಿ ದಿಯಾ ಉದಯ್ ಅವರಿಂದ ಭರತನಾಟ್ಯ, ಮಧ್ಯಾಹ್ನ 12ಕ್ಕೆ ಬಂಗಾರಪೇಟೆಯ ಆರ್ಯವೈಶ್ಯ ವನಿತ ಸಂಘದಿಂದ ಭಜನೆ, 1 ಗಂಟೆಗೆ ವಿದ್ವಾನ್ ಎನ್.ಕೆ.ಮೋಹನ್ ಕುಮಾರ್ ಅವರಿಂದ ಹರಿಕಥೆ, 2ಕ್ಕೆ ಸಪ್ತಗಿತಿ ಮಹಿಳಾ ಭಜನ ಮಂಡಳಿ ಅವರಿಂದ ಭಜನೆ, 3ಕ್ಕೆ ಪದ್ಮಾವತಿ ಕಲಾನಿಕೇತನ್ ಮತ್ತು ಕಲಾವಿದರಿಂದ ಭರತನಾಟ್ಯ, ಸಂಜೆ 5 ಗಂಟೆಗೆ ವಿದ್ವಾನ್ ಸುಮತಿ ಮತ್ತು ತಂಡದಿಂದ ಪಿಟೀಲು ಹಾಗೂ ಸಂಜೆ 6.30ಕ್ಕೆ ವಿದ್ವಾನ್ ಬಿ. ಹರಿಪ್ರಸಾದ್ ಮತ್ತು ತಂಡದಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.