ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಣದ ಸಾಯಿಬಾಬಾ

Last Updated 14 ಜುಲೈ 2019, 19:45 IST
ಅಕ್ಷರ ಗಾತ್ರ

ಶಾಂತಚಿತ್ತತೆಯಿಂದ ಬಂಡೆಯ ಮೇಲೆ ಕೂತಿರುವ ಸಾಯಿಬಾಬಾ ಮೂರ್ತಿಯನ್ನು ನೋಡಿದರೆ ದೇವರು ಪ್ರತಿಕ್ಷನಾದಂತೆ ಭಾಸವಾಗುತ್ತದೆ. ಆದರೆ ಇದು ಮೇಣದಿಂದ ಪ್ರತಿಷ್ಠಾಪಿಸಿದ ಮೂರ್ತಿ!

ಶಿರಡಿಗೆ ಹೋಗಲು ಸಾಧ್ಯವಾಗದನಗರದ ಭಕ್ತರಿಗಾಗಿ, 200 ಕೆ.ಜಿ ಮೇಣವನ್ನು ಬಳಸಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಾಯಿಬಾಬಾನ ಮೇಣದ ಮೂರ್ತಿ ತಯಾರಿಸಲಾಗಿದೆ. ಜೆ.ಪಿನಗರದ ಶಿರಡಿ ಸಾಯಿ ಬಾಬಾ ದೇವಸ್ಥಾನದಲ್ಲಿ ಭಕ್ತರಿಗೆ ಈ ಮೂರ್ತಿ ಹೊಸ ಅನುಭವ ನೀಡಲಿದೆ.

ವಿಶಾಖಪಟ್ಟಣದ ಕಲಾವಿದ ರವಿಚಂದ್ರ ಅವರ ಹಸ್ತದಲ್ಲಿ ಇದು ಅರಳಿದೆ. ಸುಮಾರು ಎರಡು ತಿಂಗಳಲ್ಲಿ ಅವರು ಈ ಪ್ರತಿಮೆಗೆ ರೂಪ ನೀಡಿದ್ದಾರೆ. 300ಕ್ಕೂ ಹೆಚ್ಚು ಭಕ್ತರು ಒಂದೇ ಬಾರಿಗೆ ಧ್ಯಾನ ಮಾಡಲು ಅನುಕೂಲವಾಗುವಂತೆ 900 ಅಡಿ ಅಗಲದ ಧ್ವನಿನಿರೋಧಕ ಕೊಠಡಿಯನ್ನು ನಿರ್ಮಿಸಿ ಅಲ್ಲಿ ನಾಲ್ಕೂವರೆ ಅಡಿಯ ಮೂರ್ತಿ ಯನ್ನು ಇರಿಸಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT