ಲಯ-ಲಾಸ್ಯ

ಕಲೆಯನ್ನು ಹವ್ಯಾಸವನ್ನಾಗಿಟ್ಟುಕೊಂಡರೂ ನಿರಂತರ ಅಭ್ಯಾಸ ಮತ್ತು ಅದರ ಶುದ್ಧತೆಯನ್ನು ಕಾಪಾಡಿಕೊಂಡು ಮುಂದುವರೆಯುವುದು ಮುಖ್ಯ. ಪ್ರತಿ ಶುಕ್ರವಾರ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ಸಲ ಭರತನಾಟ್ಯ ಪ್ರದರ್ಶನವನ್ನು ನೀಡಿದ ಶರ್ಮಿಳಾ ಗುಪ್ತಾ ಈ ಗುಣವನ್ನು ಅಳವಡಿಸಿಕೊಂಡವರು.

ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಶರ್ಮಿಳಾ ಗುಪ್ತಾ ಭರತನಾಟ್ಯದ ಸೂಕ್ಷ್ಮತೆಗಳ ಅರಿವು ಮತ್ತು ಅವುಗಳ ಸೊಗಸಾದ ಪ್ರಕಟಣೆಗಳಿಂದ ನೋಡುಗರ ಮನ್ನಣೆಗೆ ಪಾತ್ರರಾದರು. ಕುಳ್ಳಗಿನ ತೆಳ್ಳಗಿನ ದೇಹ, ಲಗುಬಗೆಯ ಚಲನವಲನಗಳು, ಭಾವ ಸ್ಫುರಿಸುವ ಹಸನ್ಮುಖ ಮತ್ತು ಅಭಿನಯ ಚಾತುರ್ಯ ರಂಜಿಸಿದವು.

ಹಿರಿಯ ನೃತ್ಯ ಗುರು ಪದ್ಮಿನಿ ರಾಮಚಂದ್ರನ್ ಶಿಷ್ಯೆಯಾಗಿರುವ ಶರ್ಮಿಳಾ `ವಾತಾಪಿ ಗಣಪತಿಂ~ (ಹಂಸಧ್ವನಿ) ರಚನೆಯ ಸಾಹಿತ್ಯವನ್ನು ಬಳಸಿಕೊಂಡು ಗಣೇಶ ವಂದನೆ ಸಲ್ಲಿಸಿದರು. ಗಣೇಶ ಜನನ ಮತ್ತು ಆತನ ಕೆಲವು ಲೀಲೆಗಳನ್ನು ನರ್ತಕಿಯು ನಿರಾಡಂಬರವಾಗಿ ಚಿತ್ರಿಸಿದರು.

ಸಂಸ್ಕೃತ ಶ್ಲೋಕದ ಹಿನ್ನೆಲೆಯೊಂದಿಗೆ ಅವರು ನಿರ್ವಹಿಸಿದ ಪುಷ್ಪಾಂಜಲಿ ನೃತ್ಯಾನಂದಕ್ಕೆ ಸೂಕ್ತವಾದ ವಾತಾವರಣವನ್ನು ನಿರ್ಮಿಸಿತು. ಮುರುಘನನ್ನು ಕುರಿತಾದ ಪೂರ್ವಿಕಲ್ಯಾಣಿ ರಾಗದ `ವೇಲನೈ ವರಚೊಲ್ಲಡಿ~ ನೃತ್ಯ ಕ್ಷೇತ್ರದಲ್ಲಿ ಚಿರಪರಿಚಿತ ಬಂಧ.

ನಾಯಕಿಯು ತನ್ನನ್ನು ಸುಬ್ರಹ್ಮಣ್ಯನ ಜೊತೆಗಿರುವ ವಲ್ಲಿ ದೇವಿಯೆಂದು ಭಾವಿಸಿಕೊಂಡು ಆನಂದವನ್ನು ಪಡೆಯುವ ಹಾಗೂ ನಾಯಕಿಯು ತನ್ನ ನಾಯಕನನ್ನು ಕರೆತರುವಂತೆ ಸಖಿಯನ್ನು ಕೇಳಿಕೊಳ್ಳುವ ಸನ್ನಿವೇಶಗಳು ಇದರಲ್ಲಿ ವರ್ಣಿತವಾಗಿವೆ. ಅಂತಯೇ ಶರ್ಮಿಳಾ ಅವುಗಳ ಸರಸ ಪ್ರತಿಪಾದನೆಯಲ್ಲಿ ರಸಿಕರು ತಲೆದೂಗುವಂತೆ ಮಾಡಿದರು.

ಯವನಿಕಾ ವೇದಿಕೆಯನ್ನು ಸಂಪೂರ್ಣವಾಗಿ ಜಾಮಿತಿಯ ವಿವಿಧ ಮಾದರಿಗಳಲ್ಲಿ ಬಳಸಿಕೊಂಡು ತಮ್ಮ ನೃತ್ಯ ವೈಶಿಷ್ಟ್ಯ ತೋರಿದರು. ಹಾಗೆಯೇ ವೈವಿಧ್ಯದ ಅಡುವುಗಳು, ಕೆಲವು ಸಂಕೀರ್ಣ ಜತಿಗಳು ಮತ್ತು ಭಂಗಿಗಳನ್ನೊಳಗೊಂಡಿದ್ದ ಅವರ ನೃತ್ತವೂ ಗಂಭೀರವಾಗಿತ್ತು. ಅವರ ಅಭಿನಯವು ಪಕ್ವತೆಯಿಂದ ಸಾರ್ಥಕವೆನಿಸಿತು.

ಬಾಲಕಷ್ಣನ ಬಗ್ಗೆ ವಿಶೇಷ ಕಾಳಜಿಯನ್ನು ಅಭಿವ್ಯಕ್ತಿಸುವ ಪುರಂದರದಾಸರ `ಪೋಗದಿರಲೋ ರಂಗ~ ಮತ್ತೊಮ್ಮೆ ಕಲಾವಿದೆಯ ಅಭಿನಯ ನಿಪುಣತೆಯನ್ನು ಸ್ಪಷ್ಟಪಡಿಸಿತು. ಎಂದಿನಂತೆ ಗುರು ಪದ್ಮಿನಿ ರಾಮಚಂದ್ರನ್ ಅವರ ನಟುವಾಂಗ ಚೈತನ್ಯಪೂರ್ಣವಾಗಿತ್ತು. ವಸುಧಾ ಬಾಲಕೃಷ್ಣ (ಗಾಯನ), ನಟರಾಜಮೂರ್ತಿ (ಪಿಟೀಲು) ಮತ್ತು ಎಸ್.ವಿ.ಬಾಲಕೃಷ್ಣ (ಮದಂಗ) ಪೋಷಕವಾಗಿ, ಪೂರಕವಾಗಿ ಸ್ಪಂದಿಸಿದರು.

ಮಿಶ್ರಫಲದ ಭರತನಾಟ್ಯ
ಎಡಿಎ ರಂಗಮಂದಿರದಲ್ಲಿ ಶನಿವಾರ ನಡೆದ ಪ್ರೀತಿಕಾ ರಾಜೇಶ್ವರನ್ ಅವರ ಭರತನಾಟ್ಯ ಮಿಶ್ರ ಫಲಗಳನ್ನು ನೀಡಿತು. ನೃತ್ಯಗಾರ್ತಿಗೆ ಅವಶ್ಯಕವಾದ ಉತ್ತಮ ಲಕ್ಷಣಗಳನ್ನು ಹೊಂದಿರುವ ಪ್ರೀತಿಕಾ ತನ್ನ ಆಂಗಿಕಾಭಿನಯ ಹಾಗೂ ಮೂಲ ಅರ್ಧಮಂಡಳಿಗಳನ್ನು ಖಚಿತಗೊಳಿಸಿಕೊಳ್ಳಬೇಕೆನಿಸಿತು. ತನ್ನ ಗುರು ಕಲಾಕ್ಷೇತ್ರದ ಶ್ರೀವಿದ್ಯಾ ಆನಂದ್ (ನಟುವಾಂಗ), ಡಾ.ಪ್ರಿಯಶ್ರೀ ರಾವ್ (ಗಾಯನ), ನರಸಿಂಹಮೂರ್ತಿ (ಕೊಳಲು), ನಟರಾಜಮೂರ್ತಿ (ಪಿಟೀಲು) ಮತ್ತು ಶ್ರೀಹರಿ (ಮೃದಂಗ) ವಾದ್ಯಗಳ ಸಮರ್ಪಕ ಸಹಕಾರದೊಂದಿಗೆ ಕಾರ್ಯಕ್ರಮವನ್ನು ನೀಡಿದ ಪ್ರೀತಿಕಾ ಶ್ಲೋಕ, ಅಲರಿಪ್ಪು ಮತ್ತು ಜತಿಸ್ವರ (ಆರಭಿ) ರಚನೆಗಳನ್ನು ಉತ್ಸಾಹದಿಂದ ನಿರೂಪಿಸಿದರು.

ಸುಮಾರು ಮೂವತ್ತೈದು ನಿಮಿಷ ನಿರ್ವಹಿಸಿದ ಶ್ರೀರಂಜಿನಿ ವರ್ಣದ ಮೂಲಕ ಪ್ರೀತಿಕಾ ಅವರ ನೃತ್ತ, ನೃತ್ಯ ಮತ್ತು ಅಭಿನಯ ಸಾಮರ್ಥ್ಯ ಕಲಾತ್ಮಕವಾಗಿ ರೂಪುಗೊಂಡಿತು. ಲಯ ಬಿಗುವು ಮತ್ತಷ್ಟು ಗಟ್ಟಿಗೊಳ್ಳಬೇಕೆನಿಸಿತು. ಶಿವನ ವರ್ಣನೆ ಮತ್ತು ಶಿವಲೀಲೆಗಳ ಹಿರಿಮೆಯ ವಸ್ತುವನ್ನು ಸುಪ್ರಸಿದ್ಧ `ಭೋ ಶಂಭೋ~ (ರೇವತಿ) ಕೃತಿಯ ಆಧಾರದ ಮೇಲೆ ಚಿತ್ರಿಸಿದ ರೀತಿ ನೃತ್ಯ ಪ್ರೇಮಿಗಳನ್ನು ಮೆಚ್ಚಿಸಿತು.

ಶ್ರೀಮಂತ ಗಾಯನ
ಇಪ್ಪತ್ತಮೂರು ದಿನಗಳ ಕಾಲ ವಕೀಲ ತಾರಕಾರಾಂ ಮತ್ತು ಕಲಾವಿದೆ ರೇವತೀ ತಾರಕಾರಾಂ ಅವರ ಉಸ್ತುವಾರಿಯಲ್ಲಿ ಯಶಸ್ವಿಯಾಗಿ ನಡೆದ ಶೇಷಾದ್ರಿಪುರಂ ರಾಮಸೇವಾ ಸಮಿತಿಯ 64ನೆಯ ರಾಮನವಮಿ ಸಂಗೀತೋತ್ಸವದ ಕೊನೆಯ ಹಂತದಲ್ಲಿ (ಬುಧವಾರ) ಹಾಡಿದ ಯುವ ಗಾಯಕ ವಿನಯ್ ಶರ್ವ ಅವರ ಹಾಡುಗಾರಿಕೆಯಲ್ಲಿ ಸಿದ್ಧಹಸ್ತತೆಯ ಛಾಯೆ ಎದ್ದುಕಂಡಿತು.

ನಾದಮಾಧುರ್ಯ ಮತ್ತು ಭಾವನೆಯ ಉಜ್ವಲತೆ ಅವರ ಕಲೆಯ ಪ್ರಧಾನ ಗುಣಗಳು. ಈಗಿನ ಪ್ರತಿಭಾನ್ವಿತ ಹಾಗೂ ಮಹತ್ವಾಕಾಂಕ್ಷಿ ಸಫಲತೆಯ ಮೈಲಿಗಲ್ಲುಗಳನ್ನು ದಾಟುತ್ತಿರುವ ಯುವ ಗಾಯಕರ ಮೊದಲ ಪಂಕ್ತಿಯಲ್ಲಿರುವವರು.

ಬಿ.ಕೆ.ರಘು (ಪಿಟೀಲು), ರೇಣುಕಾಪ್ರಸಾದ್ (ಮೃದಂಗ, ಒಂದೆರಡು ಬಾರಿ ನಾದದಲ್ಲಿ ಏರುಪೇರು ಕಂಡಿದ್ದು ಸೋಜಿಗವೆನಿಸಿತು) ಮತ್ತು ದಯಾನಂದ ಮೋಹಿತೆ (ಘಟ) ಅವರ ಪಕ್ಕವಾದ್ಯಗಳ ಸೂಕ್ತ ಹೊಂದಿಕೆ ಇದ್ದ ತಮ್ಮ ಕಛೇರಿಯನ್ನು ವಿನಯ್ ಅವರು ಜಾಗರೂಕವಾಗಿ ನಿರೂಪಿಸಬೇಕಾದ ಶಹನಾ ವರ್ಣದೊಂದಿಗೆ ಆರಂಭಿಸಿದರು.

ಸಂತಸವನ್ನುಂಟು ಮಾಡಿದ `ಷಣ್ಮುಖಪ್ರಿಯ~ ರಾಗಾಲಾಪನೆ ಮತ್ತು `ಸಿದ್ಧಿವಿನಾಯಕಂ~ ಕೃತಿಯ ಅನಾಗತದಲ್ಲಿ ಅಂದರೆ `ಪ್ರಸಿದ್ಧ ಗಣನಾಯಕಂ~ ಎಂಬ ಭಾಗದಲ್ಲಿ ಸ್ವರವಿನ್ಯಾಸವನ್ನು ಮಾಡಿದ್ದು ಅವರ ಜಾಣ್ಮೆಯನ್ನೂ ಕಛೇರಿಯ ಆಕರ್ಷಣೆಯನ್ನೂ ಹೆಚ್ಚಿಸಿತು. ಆಹ್ಲಾದಕರ ಗತಿಯಲ್ಲಿ ಅಸಾವೇರಿ ರಾಗದ `ರಾರಾ ಮಾಯಿಂಟಿದಾಕಾ~ ರಚನೆ ಭಾವತರಂಗಗಳನ್ನೆಬ್ಬಿಸಿದವು.

ಸಮಚಿತ್ತದ ನಿರಾಕುಲ ಸುರುಟಿ ರಾಗದ ಆಲಾಪನೆ ಕಛೇರಿಯ ಗಾಂಭೀರ್ಯ ಮತ್ತು ಪಕ್ವವಾದ ಕರ್ನಾಟಕ ಸಂಗೀತಾನುಭವವನ್ನು ಒದಗಿಸಿತು. ದೀಕ್ಷಿತರ ಅಪೂರ್ವವಾದ `ಶ್ರೀವೆಂಕಟಗಿರೀಶಮಾರೋಹಯೇ~, ಅದಕ್ಕೆ ಹೊಂದಿಕೊಂಡಿದ್ದ `ಅಲಮೇಲು ಮಂಗಾ~ ನೆರೆವಲ್ ಮತ್ತು ಸ್ವರಪ್ರಸ್ತಾರ ಆಕರ್ಷಿಸಿತು.

ವಿಳಂಬ ಹಾಗೂ ಅರ್ಥಪೂರ್ಣ ಪದ ವಿಶದತೆಯಲ್ಲಿದ್ದ `ನನ್ನುವಿಡ ಚಿಕದಲಕುರ~ (ರೀತಿಗೌಳ), ತ್ಯಾಗರಾಜರ `ಪದವಿನಿ~ (ಸಾಲಗಭೈರವಿ), `ಮುದ್ದುಗರೆ~ (ಕುರಂಜಿ), `ವೆಂಕಟಾಚಲನಿಲಯಂ~ (ಸಿಂಧುಭೈರವಿ) ಮುಂತಾದ ರಚನೆಗಳು ವಿಧವಿಧದ ಭಾವರಂಜನೆಯನ್ನು ಮೂಡಿಸಿದವು.

ತೋಡಿರಾಗದ ವಿಶದತೆ, ಖಚಿತತೆ, ಅಸಂಧಿಗ್ಧತೆ ಮತ್ತು ಸಾಂಗತ್ಯ, ಗ್ರಹಭೇದದ ತುಣುಕು ಹಾಗೂ `ಕದ್ದನವಾರಿಕಿ~ ಕೀರ್ತನೆಯ ಸಾಹಿತ್ಯ ಮತ್ತು ಸ್ವರವಿನ್ಯಾಸ ಗಾಯಕ ವಿನಯ್ ಶರ್ವ ಅವರ ಕಲಾಶ್ರೀಮಂತಿಕೆಯನ್ನು ಸಾರಿ ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.