ಚೌತಿ ಬಂದ್ರೆ, ಗಣೇಶನೇ ಸೂಪರ್ ಮಾಡೆಲ್. ವಿಗ್ರಹ ತಯಾರಿಕರೇ ಫ್ಯಾಷನ್ ಡಿಸೈನರ್ಗಳು, ಮಿಸ್ಟರ್ ಗೌರಿಪುತ್ರ ಈ ಬಾರಿಯೂ ಡಿಫರೆಂಟ್ ಲುಕ್, ಕಾಸ್ಟ್ಯೂಮ್ನಲ್ಲಿ ಭಕ್ತರ ಮನೆಗೆ ಬರಲು ರೆಡಿಯಾಗಿದ್ದಾನೆ. ಆದ್ರೆ ಸಂಭಾವನೆ ಮಾತ್ರ ಜಾಸ್ತಿ ಕೊಡಬೇಕೆಂತೆ! ಯಾಕೆಂದರೆ, ಗಣೇಶ ಈಗ ಬಲು ದುಬಾರಿ.

ಮಣ್ಣಿನ ಮೂರ್ತ ರೂಪ ಗಣಪ
ಇತರ ದೇವತೆಗಳಿಗಿಲ್ಲದ ಆತನ ವಿಶಿಷ್ಟ ಆಕಾರವೇ ಗಣಪತಿಗೆ ಜನಪ್ರಿಯತೆಯನ್ನು ತಂದುಕೊಟ್ಟಿರಬಹುದು. ಈತನ ಅದ್ಭುತ ರೂಪವು ಕೇವಲ ಭಕ್ತರಿಗಷ್ಟೇ ಅಲ್ಲದೇ ಕಲಾವಿದರ ಚಿತ್ತವನ್ನೂ ನಾಜೂಕಾಗಿ ಅಪಹರಿಸಿಬಿಡುತ್ತದೆ. ಅವನು ಕಲಾವಿದರಿಗೆ ಪ್ರಿಯನಾದುದರಿಂದಾಗಿಯೇ ಗಣಪತಿಯ ಸಹಸ್ರಾರು ಆಕಾರಗಳ ಕಲ್ಪನೆಗಳು ಮೂರ್ತರೂಪದಲ್ಲಿ ಸಾಕ್ಷಾತ್ಕಾರಗೊಂಡಿವೆ. ಇಂದಿಗೂ ಕಲೆಯನ್ನು ನಂಬಿ ಮೂರ್ತಿ ತಯಾರಿಸುವಂತಹ ಕಲಾವಿದರು ಸಾಕಷ್ಟಿದ್ದಾರೆ. ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಕಲಾವಿದರು ಕಳೆದ ಒಂದು ತಿಂಗಳಿಂದ ಗಣೇಶನ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಆಕರ್ಷಕವಾದ ಮೂರ್ತಿಗಳನ್ನು ತಯಾರಿಸುವುದು ಅಷ್ಟು ಸುಲಭವಲ್ಲ. ಮೌಲ್ಡ್ನಲ್ಲಿ ಒಂದು ಆಕಾರ ಮಾತ್ರ ನೀಡಲಾಗುತ್ತದೆ. ನಂತರ ಮೂರ್ತ ರೂಪ ನೀಡಬೇಕಾದರೆ ಅದು ಕಲಾವಿದರಿಂದ ಮಾತ್ರ ಸಾಧ್ಯ.

ನಗರದ ಬನಶಂಕರಿ ೧ನೇ ಹಂತದ ಶ್ರೀನಿವಾಸ ನಗರ ಸಮೀಪ ಬ್ರಹ್ಮಚೈತನ್ಯ ಮಂದಿರದ ಎದುರಿಗೆ ಮೂರ್ತಿ ರೂಪುಗೊಳ್ಳುವ ಬಗೆ ಕಾಣುತ್ತದೆ.
ದೊಡ್ಡ ಗಣೇಶ, ಸಣ್ಣ ಗಣೇಶ, ಮರಿ ಗಣೇಶ, ಕಿರು ಗಣೇಶ, ಹಸುವಿನ ಮೇಲೆ ಕುಳಿತ ಗಣೇಶ, ನವಿಲಿನ ಮೇಲೆ ಕುಣಿವ ಗಣೇಶ, ರಥದ ಮೇಲಿರುವ ಗಣೇಶ, ಕಮಲದ ಮೇಲಿರುವ ಗಣೇಶ. ಪಂಚಮುಖಿ ಗಣೇಶ. ಅಬ್ಬಬ್ಬಾ! ಎಷ್ಟೊಂದು ಗಣಪತಿಗಳು. ನೋಡಲು ಕಣ್ಣೆರಡು ಸಾಲದು.

ಕಲಾಪ್ರಿಯ ನಾಗರಾಜಪ್ಪ
ಮೂಲತಃ ಕುಂಬಳಗೋಡಿನ ಕಲಾವಿದ ನಾಗರಾಜಪ್ಪ ಮತ್ತು ಕುಟುಂಬದವರು ಭಕ್ತರ ಆಶಯಕ್ಕೆ ಪೂರಕವಾಗಿ ಸ್ಪಂದಿಸಿ ವೈವಿಧ್ಯಮಯ ಗಣೇಶಮೂರ್ತಿ ತಯಾರಿಸುತ್ತಿದ್ದಾರೆ.

‘ನಮ್ಮ ತಂದೆ ಗಣೇಶನ ಮೂರ್ತಿಗಳನ್ನು ಮಾಡಿ ಮಾರುತ್ತಿದ್ದರು ನಾನು ಈ ವೃತ್ತಿಗೆ ಇಳಿಯಲು ಅದೇ ಪ್ರೇರಣೆ. ಸ್ವಾನುಭವವೇ ಗುರು. ಗಣೇಶನನ್ನು ರೂಪಿಸುವುದು ಪೂಜನೀಯ ಕೆಲಸ’ ಎನ್ನುವ ನಾಗರಾಜಪ್ಪ, ದೇವರ ಹೆಸರಲ್ಲಿ ಅಕ್ಕರೆಯಿಂದ ಮಾಡುತ್ತಿರುವ ಈ ಕಾಯಕದಲ್ಲಿ ತೃಪ್ತಿಯನ್ನು ಕಾಣುತ್ತಿದ್ದಾರೆ.
‘ಮಳೆಗಾಲಕ್ಕೆ ಮೊದಲೇ ನಮ್ಮ ಕೆಲಸ ಶುರು. ಮರಳು ಕಡಿಮೆ ಇರುವ ಜೇಡಿಮಣ್ಣು ಹಾಗೂ ಕಪ್ಪು ಮಣ್ಣನ್ನು ಸಂಗ್ರಹಿಸಿಟ್ಟುಕೊಳ್ಳುತ್ತೇವೆ. ಆರೇಳು ತಿಂಗಳ ಪರಿಶ್ರಮಕ್ಕೆ ಬೆಲೆ ಬರುವುದು ಗಣೇಶನ ಹಬ್ಬದಲ್ಲಿ ಒಳ್ಳೆಯ ವ್ಯಾಪಾರವಾದಾಗ ಮಾತ್ರ. ಇದೇ ನಮಗೆ ಜೀವನಾಧಾರ’ ಎನ್ನುತ್ತಾರೆ ಅವರು.

ನಗರದಲ್ಲಿ ಕೆರೆಗಳು ನಿವೇಶನಗಳಾಗಿ ಪರಿವರ್ತಿತವಾಗುತ್ತಿವೆ. ಉತ್ತಮ ಗುಣಮಟ್ಟದ ಜೇಡಿಮಣ್ಣು ಕುಂಬಾರಿಕೆಗೆ ಸಿಗದೆ ಇದ್ದರೂ ಈ ಮೂರ್ತಿಗಳಿಗೆ ಬೇಡಿಕೆ ಇದೆ. ಹಾಗಾಗಿ ದೂರದ ಊರುಗಳಿಂದಾದರೂ ಮಣ್ಣನ್ನು ತಂದು ಈ ಮೂರ್ತಿಗಳನ್ನು ಮೂಡಿಸುವ ಹೊಣೆಗಾರಿಕೆ ಕುಂಬಾರರಿಗಿದೆ ಎನ್ನುತ್ತಾರೆ ಸಹೋದರ ಬಸವರಾಜಪ್ಪ.

ಮೂರ್ತಿ ರಚಿಸಿ ಅದರ ಮೇಲೆ ಬಣ್ಣ ಬಳಿದು ಬದುಕುವವರೂ ನೈಜ ಕಲಾವಿದರೇ. ಅರ್ಧ ಅಡಿಯಿಂದ ಆಳೆತ್ತರದ ತರಹೇವಾರಿ ದೇಶಾವರಿ ಗಣೇಶನ ಮೂರ್ತಿಗಳನ್ನು ತಯಾರಿಸುತ್ತಾರೆ. ಮೂರ್ತಿ ತಯಾರಿಕೆ ಅವರ ಕುಲಕಸುಬು ಹೀಗಾಗಿ ಬಾಲ್ಯದಿಂದಲೇ ಈ ನಂಟನ್ನು ಬೆಳೆಸಿಕೊಂಡ ಈ ಕಲಾವಿದನ ಕುಟುಂಬದವರೆಲ್ಲರೂ ಕಲಾಸೇವೆಯಲ್ಲಿ ತೊಡಗಿದ್ದಾರೆ. ಪ್ರತಿ ವರ್ಷ ೫,೦೦೦ ಗಣಪತಿ ವಿಗ್ರಹಗಳನ್ನು ತಯಾರಿಸುವ ಜೊತೆಗೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಭಂಗಿಯ ಅಲಂಕಾರಿಕ ಗಣೇಶನನ್ನು ಸಿದ್ಧಪಡಿಸುತ್ತಾರೆ. ಚೌತಿ ಸಂದರ್ಭದಲ್ಲಿ ಗಣೇಶನ ವಿಗ್ರಹಗಳನ್ನು ಮಾಡುವ ಇವರು ಉಳಿದ ಸಮಯದಲ್ಲಿ ಕುಂಬಾರಿಕೆಯನ್ನು ವೃತ್ತಿಯನ್ನಾಗಿಸಿಕೊಂಡಿದ್ದಾರೆ.

ಗಣಪನ ಆಗಮನ, ವ್ಯಾಪಾರಿಗಳಲ್ಲಿ ಸಂಚಲನ
ನಾನಾ ನಮೂನೆಯ ಮನಮೋಹಕ ಗಣೇಶ ವಿಗ್ರಹ ತಯಾರಿಕೆಯಲ್ಲಿ ಇವರು ನಿಸ್ಸೀಮರು. ಸಾಂಪ್ರದಾಯಿಕ ಮೂರ್ತಿಗಳು ಸೇರಿದಂತೆ ಇದೀಗ ಹೊಸ ಟ್ರೆಂಡ್ಸ್ಗೆ ಬೇಕಾಗುವಂತಹ ಮೊಬೈಲ್- ಲ್ಯಾಪ್ಟಾಪ್ ಹಿಡಿದಿರುವ ವೈವಿಧ್ಯಮಯ ರೂಪದ ಗಣೇಶನ ಮೂರ್ತಿ ಮಾಡುವ ಇವರ ಕಲಾ ಕೈಚಳಕಕ್ಕೆ ಭೇಷ್ ಅನ್ನಲೇಬೇಕು. ನಾಗರಾಜ್ ಅವರ ವಿಶಿಷ್ಟ ಕಲೆಗೆ ಮಾರುಹೋಗಿ ಹಬ್ಬಕ್ಕೆ ಇನ್ನು ಮೂರು ತಿಂಗಳು ಇರುವಾಗಲೇ ಫೋಟೊ ಹಿಡಿದು ಇಂತಹ ಮೂರ್ತಿಯೇ ಬೇಕೆಂದು ಬೇಡಿಕೆ ಮುಂದಿಡುವ ಗಣೇಶ ಭಕ್ತರ ಸಂಖ್ಯೆ ದೊಡ್ಡದು.

ಸಂಪ್ರದಾಯ ಪಾಲನೆಯಾಗಬೇಕು, ಪರಿಸರಕ್ಕೂ ಹಾನಿಯಾಗಬಾರದು ಎಂಬ ಮನೋಭಾವ ಎಲ್ಲರಲ್ಲೂ ಬೆಳೆಯುತ್ತಿದೆ. ಈ ಕಾರಣಕ್ಕಾಗಿಯೇ ರಾಸಾಯನಿಕ ಬಣ್ಣಗಳ ಗಣಪನ ಬದಲು ಬಣ್ಣವಿಲ್ಲದ ಹಸಿ ಮಣ್ಣಿನ ಗಣಪ, ಸಸ್ಯಮೂಲ ಬಣ್ಣಗಳ ಗಣೇಶನ ಬಗ್ಗೆ ಜನರಲ್ಲಿ ಒಲವು ಹೆಚ್ಚುತ್ತದೆ.

ಕಲಾವಿದರಿಗೆ ಪ್ರೋತ್ಸಾಹ ಬೇಕು
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ಎರಡು ಮೂರು ದಿನವಷ್ಟೇ ಪೂಜಿಸಿಕೊಳ್ಳುವ ಗಣಪ ನೀರು ಸೇರಿ ಮಣ್ಣಾಗುತ್ತಾನೆ. ಅವನ ಹುಟ್ಟು ಮಾತ್ರ ಗಜಪ್ರಸವವೇ ಸರಿ! ಕಲಾವಿದರ ಸೃಜನಶೀಲತೆಗೆ ಗಣೇಶ ಹಬ್ಬ ಒಂದು ನೆಪವಷ್ಟೆ. ಗಣೇಶನ ಆಕಾರ ಆಯಾ ಸಂದರ್ಭದ ರಾಜಕೀಯ, ಸಾಮಾಜಿಕ ಬೆಳವಣಿಗೆಗಳನ್ನೂ ಆಧರಿಸುತ್ತದೆ. ವಿಗ್ರಹ ತಯಾರಿಕೆಯನ್ನೇ ಕಸುಬಾಗಿಸಿಕೊಂಡ ಕುಶಲಕರ್ಮಿ ಗುಡಿಗಾರರ ಬದುಕಿಗಿಂತ ಅವರ ಸೃಜನಶೀಲತೆ ನಶಿಸಿಹೋಗುವ ಆತಂಕವಿದೆ.

ನಾಗರಾಜಪ್ಪ ಅವರನ್ನು ಸಂಪರ್ಕಿಸಲು: ೯೮೮೬೭ ೪೮೩೭೧.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.