ಪ್ರತಿ ವರ್ಷದ ಚೈತ್ರ ಶುಕ್ಲ ಪಾಡ್ಯಮಿ ಉಗಾದಿ (ಈ ಬಾರಿ ಮಾ.23, ಶುಕ್ರವಾರ)ಯೊಂದಿಗೆ ಚೈತ್ರ ನವರಾತ್ರಿ ಅಥವಾ ವಸಂತ ನವರಾತ್ರಿಯನ್ನು ಆಚರಿಸಲಾಗುತ್ತದೆ. ಶ್ರೀರಾಮ ನವಮಿಯಂದು (1ನೇ ಏಪ್ರಿಲ್, ಭಾನುವಾರ) ಆ ನವರಾತ್ರಿಯು ಮುಗಿಯಿತು. ಅಂದೇ ಶ್ರೀರಾಮನ ಹುಟ್ಟುಹಬ್ಬ. ಹಾಗಾಗಿ ಅದು ಶ್ರೀರಾಮನಮಮಿ ಅಂತಲೇ ಆಚರಣೆಗೊಳ್ಳುತ್ತದೆ.

ಆ ಹಬ್ಬವನ್ನು ಉಗಾದಿಯಿಂದಲೇ ಆಚರಿಸುವ ವಾಡಿಕೆಯೂ ಉಂಟು. ಬೆಂಗಳೂರು ನಗರದ ಕೆಲವು ಮಠ-ಮಂದಿರಗಳಲ್ಲಿ ಈ ರೀತಿಯ ಆಚರಣೆ ನಡೆಯುತ್ತಿದ್ದು, ಸಂಗೀತ ಮತ್ತಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಆರಂಭವಾಗಿ ಇದೀಗ ಕಲಾಮಯ ವಾತಾವರಣ.

ಮಲ್ಲೇಶ್ವರದ ಈಸ್ಟ್ಪಾರ್ಕ್ ರಸ್ತೆಯಲ್ಲಿರುವ ಶ್ರೀರಾಮಮಂದಿರದಲ್ಲಿ ವಸಂತ ನವರಾತ್ರಿ ಶ್ರೀರಾಮೋತ್ಸವವು ಮಾ.23ರಿಂದಲೇ ಆರಂಭವಾಗಿ ಕಳೆದ ಮಂಗಳವಾರ ನುರಿತ ಕೊಳಲು ವಾದಕಿ ಗೀತಾ ಗೋಪಾಲ್ ಅವರ ಅಚ್ಚುಕಟ್ಟಾದ ವಾದ್ಯ ಕಛೇರಿ ನಡೆಯಿತು.

ಸಿ.ಎಸ್.ಉಷಾ (ಪಿಟೀಲು), ಟಿ.ಎನ್.ರಮೇಶ್ (ಮೃದಂಗ) ಮತ್ತು ಷಡಗೋಪಾಲನ್ (ಖಂಜರಿ) ಅವರ ಸಮುಚಿತ ಸಹಕಾರದೊಂದಿಗೆ ರಘುನಾಯಕ (ಹಂಸಧ್ವನಿ) ಕೃತಿಗೆ ಚುರುಕಿನ ಸ್ವರಗಳನ್ನು ಜೋಡಿಸಿ ರಂಜಿಸಿದರು.

ಸುನಾದದೊಂದಿಗೆ ಮನವ್ಯಾಲ (ನಳಿನಕಾಂತಿ)ದ ನಂತರ ಮಲಯ ಮಾರುತ ರಾಗದ ಚಿಕ್ಕ ಆದರೆ ಚೊಕ್ಕವಾಗಿದ್ದ ಆಲಾಪನೆಯನ್ನು ಕೈಗೊಂಡರು. `ಮನಸಾಎಟುಲೊ~ ಕೃತಿಯನ್ನು ಮಂಡಿಸಿ `ಕಲಿಲೋರಾಜಸ~ ಎಂಬಲ್ಲಿ ವಿದ್ವತ್ಪೂರ್ಣ ಸ್ವರಪ್ರಸ್ತಾರವನ್ನು ಮಾಡಿದರು.

ರಾಮಭಕ್ತಿ (ಬಂಗಾಳ), ಬಂಟುರೀತಿ (ಹಂಸನಾದ) ಮಧ್ಯಮವೇಗದಲ್ಲಿ ರೂಪುಗೊಂಡು ರೀತಿಗೌಳ ರಾಗದ ವಿಸ್ತೃತ ವಿನಿಕೆಯಾಯಿತು. ಈ ರಾಗವನ್ನು ನಿರ್ವಹಿಸಬೇಕಾದರೆ ಅವಶ್ಯಕವಾದ ಜಾಣ್ಮೆ ಮತ್ತು ಕೌಶಲವನ್ನು ಅವರು ತೋರಿದರು. ಕಾಂಭೋಜಿ (ಶ್ರೀರಘುವರ) ರಾಗದ ವಿಶಾಲ ನಿರೂಪಣೆಯಲ್ಲಿ ಅವರ ರಾಗ ಮತ್ತು ತಾಳಗಳ ಮೇಲಿನ ಹಿಡಿತ ಸುವ್ಯಕ್ತವಾಯಿತು.

ಆಹ್ಲಾದಕರ ಕಂಠ
ರಾಮಮಂದಿರದ ಪಕ್ಕದಲ್ಲೇ ಇರುವ ಶ್ರೀರಾಘವೇಂದ್ರ ಮತ್ತು ಆಂಜನೇಯಸ್ವಾಮಿಗಳ ದೇವಸ್ಥಾನದಲ್ಲಿ ಶ್ರೀಕಾಂತಂ ಸಂಗೀತಸಭಾ ಮತ್ತು ಸಪ್ತಗಿರಿ ಭಜನಾ ಮಂಡಳಿಯವರ ಜಂಟಿ ಆಶ್ರಯದಲ್ಲಿ ಯುಗಾದಿಯಂದು ಉದ್ಘಾಟಿತವಾದ ಸಂಗೀತೋತ್ಸವದ ಆರನೆಯ ದಿನ (ಮಾ.28) ಯುವ ಗಾಯಕ ಪವನದೀಪ್ ತಮ್ಮ ಪ್ರತಿಭೆ ಮತ್ತು ಪರಿಣತಿಗಳಿಂದ ರಸಿಕರನ್ನು ತಣಿಸಿದರು.

ಗೋವಿಂದಸ್ವಾಮಿ (ಪಿಟೀಲು) ಮತ್ತು ಆನಂದ (ಮೃದಂಗ) ಅವರ ಸಹಕಾರದೊಂದಿಗೆ ಹಾಡಿದ ಪವನ್ ತೋಡಿ ( ಏನುಧನ್ಯಳೋ ), ಹರಿಕಾಂಭೋಜಿ (ದಿನಮಣಿ ), ಸುನಾದವಿನೋದಿನಿ (ದೇವಾದಿದೇವ) ರಾಗಗಳ ಮೂಲಕ ತಮ್ಮ ಕಛೇರಿ ಕಳೆಗಟ್ಟಿಸಿ ಶುದ್ಧಧನ್ಯಾಸಿ (ನಾರಾಯಣ) ಮತ್ತು ಕಲ್ಯಾಣಿ (ನಿಜದಾಸ) ರಾಗಗಳ ವಿಶ್ಲೇಷಣೆಯಲ್ಲಿ ತಮ್ಮ ಪ್ರೌಢತೆ ತೋರಿದರು. ಆಹ್ಲಾದಕರ ಕಂಠದಲ್ಲಿ ಅವರು ಹಾಡಿದ ರೋಗಹರ (ಬಾಗೇಶ್ರೀ), ಹನುಮನಮತ (ಸುಮನಸರಂಜನಿ) ಮತ್ತು ರೇವತಿಯಲ್ಲಿ ಮರಾಠಿ ಅಭಂಗ ಮನ ಗೆದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.