ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ನಲ್ಲಿ ಚಿತ್ರ ಬಿಡುಗಡೆಯ ದೀಪಾವಳಿ...

Last Updated 26 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
ಹಬ್ಬಗಳ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಭಾರತದ ಎಲ್ಲ ಭಾಷಾ ಚಿತ್ರರಂಗದಲ್ಲೂ ಸಾಮಾನ್ಯ ಸಂಗತಿ. ಅದರಲ್ಲಿಯೂ ದೊಡ್ಡ ಬಜೆಟ್‌ನ ಚಿತ್ರಗಳನ್ನು ದೀಪಾವಳಿಗೆ ಬಿಡುಗಡೆ ಮಾಡುವ  ಸಂಪ್ರದಾಯ ಬಾಲಿವುಡ್‌ನಲ್ಲಿ ಬಹುಕಾಲದಿಂದಲೂ ನಡೆದು ಬಂದಿದೆ. 
 
ಈ ಬಾರಿಯೂ ದೀಪಾವಳಿಗೆ ಎರಡು ದೊಡ್ಡ ಬಜೆಟ್‌ನ ಚಿತ್ರಗಳು ಬಿಡುಗಡೆಯಾಗುತ್ತಿವೆ.  ಅಜಯ್ ದೇವಗನ್‌ ನಟಿಸಿ, ನಿರ್ದೇಶಿಸಿರುವ ಸಾಹಸ ಪ್ರಧಾನ ಚಿತ್ರ ‘ಶಿವಾಯ್’ ಹಾಗೂ ರಣಬೀರ್ ಕಪೂರ್‌, ಐಶ್ವರ್ಯಾ ರೈ ಅಭಿನಯದ ಹಸಿಬಿಸಿ ದೃಶ್ಯಗಳ ಚಿತ್ರ ‘ಎ ದಿಲ್ ಹೈ ಮುಷ್ಕಿಲ್‌’ ಈ ಬಾರಿ ಮುಖಾಮುಖಿಯಾಗಲಿವೆ.
 
ಈ ಹಿನ್ನೆಲೆಯಲ್ಲಿ ದೀಪಾವಳಿಯಂದೇ ತೆರೆಗೆ ಬಂದ, ಗಲ್ಲಾಪೆಟ್ಟಿಗೆಯಲ್ಲಿ ಹಣಾಹಣಿ ನಡೆಸಿದ ಕೆಲ ಪ್ರಮುಖ ಬಾಲಿವುಡ್‌ ಚಿತ್ರಗಳ ಪಟ್ಟಿ ಇಲ್ಲಿದೆ.
 
*
1995
ದಿಲ್‌ ವಾಲೇ ದುಲ್‌ಹನಿಯಾ ಲೇ ಜಾಯೆಂಗೆ ಮತ್ತು ಯಾರಾನಾ : ದೇಶದ ಸಿನಿಮಾ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿದ ‘ದಿಲ್‌ ವಾಲೆ ದುಲ್‌ ಹನಿಯಾ ಲೇ ಜಾಯೆಂಗೇ’ ದೀಪಾವಳಿಯಂದೇ ತೆರೆಗೆ ಬಂದಿತ್ತು, ಅದೇ ದಿನ ಮಾಧುರಿ ದೀಕ್ಷಿತ್ ಮತ್ತು ರಿಷಿ ಕಪೂರ್ ನಟಿಸಿದ್ದ ‘ಯಾರಾನ’ ಚಿತ್ರ ಕೂಡ ತೆರೆಗೆ ಬಂದಿತ್ತು. ಡಿಡಿಎಲ್‌ಜೆ ₹53 ಕೋಟಿ ಲಾಭ ಗಳಿಸಿದರೆ, ಯಾರಾನ ಚಿತ್ರ ಗಳಿಸಿದ್ದು ₹5 ಕೋಟಿ.
 
**
2000
ಮೊಹಾಬತೇ ಮತ್ತು ಮಿಷನ್ ಕಾಶ್ಮೀರ್:  ಆದಿತ್ಯ ಚೋಪ್ರಾ, ನಿರ್ದೇಶನದಲ್ಲಿ, ಅಮಿತಾಭ್‌ ಬಚ್ಚನ್‌, ಶಾರುಖ್‌ ಖಾನ್, ಐಶ್ವರ್ಯಾ ರೈ ಸೇರಿದಂತೆ ದೊಡ್ಡ ತಾರಾ ದಂಡೆ ಇದ್ದ ‘ಮೊಹಬತ್ತೇನ್’ ದೀಪಾವಳಿಯಂದೇ ಬಿಡುಗಡೆಯಾಗಿತ್ತು.
 
ಅದೇ ದಿನ ಹೃತಿಕ್‌ ರೋಷನ್, ಸಂಜಯ್ ದತ್‌, ಪ್ರೀತಿ ಜಿಂಟಾ ಅಭಿನಯದ ‘ಮಿಷನ್ ಕಾಶ್ಮೀರ್’ ಚಿತ್ರವೂ ಬಿಡುಗಡೆಯಾಗಿತ್ತು. ‘ಮೊಹಬತೇ’ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ₹41 ಕೋಟಿಯಾದರೆ ‘ಮಿಷನ್ ಕಾಶ್ಮೀರ್’ ಚಿತ್ರದ ಗಳಿಕೆ ₹22 ಕೋಟಿ.
 
**
2004
ವೀರ್‌–ಜಾರಾ ಮತ್ತು ಐತರಾಜ್–ನಾಚ್‌: ಯಶ್‌ ಚೋಪ್ರಾ ನಿರ್ದೇಶನದಲ್ಲಿ ಮೂಡಿದ್ದ ಶಾರೂಖ್‌, ರಾಣಿ ಮುಖರ್ಜಿ, ಪ್ರೀತಿ ಜಿಂಟಾ ಅಭಿನಯದ ‘ವೀರ್‌–ಜಾರಾ’ ಚಿತ್ರ ದೀಪಾವಳಿಯಂದು ಬಿಡುಗಡೆ ಕಂಡು ₹41 ಕೋಟಿ ಗಳಿಸಿತ್ತು. 
 
ಅದೇ ದಿನ ಬಿಡುಗಡೆಯಾದ ಅಬ್ಬಾಸ್ ಮಸ್ತಾನ್ ನಿರ್ದೇಶನದ ‘ಐತರಾಜ್’  ₹15 ಕೋಟಿ ಗಳಿಸಿದರೆ, ರಾಮ್‌ಗೋಪಾಲ್ ವರ್ಮಾ ನಿರ್ದೇಶನದ ‘ನಾಚ್’ ₹3 ಕೋಟಿ ಗಳಿಸಿತ್ತು.
 
 
**
2005
ಗರಮ್‌ ಮಸಾಲಾ ಮತ್ತು ಕ್ಯೂಂಕಿ: ನಿರ್ದೇಶಕ ಪ್ರಿಯದರ್ಶನ್ ನಿರ್ದೇಶನದ ಎರಡು ಚಿತ್ರಗಳು  ದೀಪಾವಳಿಯಂದು  ಬಿಡುಗಡೆಯಾಗಿತ್ತು. ಸಲ್ಮಾನ್ ಖಾನ್ ಅಭಿನಯದ ‘ಕ್ಯೂಂಕಿ’ ಮತ್ತು ಅಕ್ಷಯ್‌ ಕುಮಾರ್ ಮತ್ತು ಜಾನ್ ಅಬ್ರಹಾಂ ಅಭಿನಯದ ಕಾಮಿಡಿ ಚಿತ್ರ ‘ಗರಮ್ ಮಸಾಲಾ’ ತೆರೆಗೆ ಬಂದಿದ್ದವು. ‘ಕ್ಯೂಂಕಿ’ ಚಿತ್ರ ₹29 ಕೋಟಿ ಹಾಗೂ ‘ಗರಮ್ ಮಸಾಲಾ’ ಚಿತ್ರ ₹12 ಕೋಟಿ ಗಳಿಸಿತ್ತು.
 
**
2006
ಡಾನ್‌ ಮತ್ತು ಜಾನ್‌ ಎ ಮಾನ್‌: ಭಾರಿ ಬಜೆಟ್‌ ಸಿನಿಮಾ ಶಾರುಖ್‌ ರ ‘ಡಾನ್‌’ ಮತ್ತು ಸಲ್ಮಾನ್‌, ಅಕ್ಷಯ್‌ ಕುಮಾರ್‌, ಪ್ರೀತಿ ಜಿಂಟಾ ಅಭಿನಯದ ‘ಜಾನ್‌ ಎ ಮನ್’ ಚಿತ್ರಗಳು ದೀಪಾವಳಿಯಂದು ಬಿಡುಗಡೆ ಹೊಂದಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಒದಗಿಸಿದ್ದವು. ‘ಜಾನ್‌ ಎ ಮನ್’ ಚಿತ್ರ ₹25 ಕೋಟಿ ಗಳಿಸಿದರೆ, ‘ಡಾನ್‌’ ಚಿತ್ರವು ₹50 ಕೋಟಿ ಬಾಚಿತು.
.
 
**
2007
ಓಂ ಶಾಂತಿ ಓಂ ಮತ್ತು  ಸಾವರಿಯಾ: ಈ ವರ್ಷದ ದೀಪಾವಳಿಯಂದು ಬಿಡುಗಡೆಯಾದ ಸಿನಿಮಾದಿಂದ ಪ್ರತಿಭಾನ್ವಿತ ಯುವ ನಾಯಕ ಮತ್ತು ನಾಯಕಿಯರು ಬಾಲಿವುಡ್‌ ಪ್ರವೇಶ ಪಡೆದು ಗಟ್ಟಿಯಾಗಿ ನೆಲೆಯೂರಿದರು.
 
ಶಾರುಖ್‌ ಖಾನ್ ನಾಯಕರಾಗಿದ್ದ ‘ಓಂ ಶಾಂತಿ ಓಂ’ ನಿಂದ  ದೀಪಿಕಾ ಪಡುಕೋಣೆ ಬಾಲಿವುಡ್‌ ಪ್ರವೇಶಿಸಿದರೆ, ಅಂದೇ ಬಿಡುಗಡೆಯಾದ ‘ಸಾವರಿಯಾ’ ಚಿತ್ರದಿಂದ ರಣಬೀರ್‌ ಕಪೂರ್ ಮತ್ತು ಸೋನಂ ಕಪೂರ್‌ ಬಾಲಿವುಡ್‌ಗೆ ಪ್ರವೇಶ ಪಡೆದರು.
 
‘ಓಂ ಶಾಂತಿ ಓಂ’ ₹78 ಕೋಟಿ ಗಳಿಸಿದರೆ, ಉತ್ತಮ ಚಿತ್ರವೆಂದು ವಿಮರ್ಶೆ ಪಡೆದ ‘ಸಾವರಿಯಾ’ ಗಳಿಸಿದ್ದು ₹20 ಕೋಟಿ.
 
**
2008
ಗೋಲ್‌ ಮಾಲ್ ರಿಟರ್ನ್ಸ್‌– ಫ್ಯಾಷನ್‌: ರೋಹಿತ್‌ ಶೆಟ್ಟಿ ನಿರ್ದೇಶನದ ಬಹುತಾರಾಗಣದ ಕಾಮಿಡಿ ಚಿತ್ರ ‘ಗೋಲ್ ರಿಟರ್ನ್ಸ್‌’ ಮತ್ತು ಬಹು ಚರ್ಚಿತ ಚಿತ್ರ ಪ್ರಿಯಾಂಕ ಅಭಿನಯದ ‘ಫ್ಯಾಷನ್‌’ ಚಿತ್ರಗಳು ಬಿಡುಗಡೆಯಾಗಿದ್ದವು.
 
ರಕ್ಷಿತ್ ಶೆಟ್ಟಿಯ ಚಿತ್ರ ಗಳಿಸಿದ್ದು ₹51 ಕೋಟಿ. ಪ್ರಿಯಾಂಕಾ ಛೋಪ್ರಾ ಹಾಗೂ ಕಂಗನಾ ರನಾವತ್ ಇಬ್ಬರಿಗೂ ಉತ್ತಮ ಅಭಿನಯಕ್ಕಾಗಿ ನ್ಯಾಷನಲ್ ಅವಾರ್ಡ್‌ ದೊರಕಿಸಿಕೊಟ್ಟ ‘ಫ್ಯಾಷನ್‌’ ಚಿತ್ರ ಗಳಿಸಿದ್ದು ₹20 ಕೋಟಿ. 
 
**
2009
ಆಲ್‌ ದಿ ಬೆಸ್ಟ್‌, ಬ್ಲೂ ಮತ್ತು ಮೇ ಔರ್ ಮಿಸೆಸ್ ಖನ್ನಾ: ಅಜಯ್‌ ದೇನಗನ್ ಅಭಿನಯದ ಕಾಮಿಡಿ ಚಿತ್ರ ‘ಆಲ್‌ ದಿ ಬೆಸ್ಟ್‌’, ಅಕ್ಷಯ್‌ ಕುಮಾರ್ ಅಭಿನಯದ ಬ್ಲೂ, ಸನ್ಮಾನ್ ಅಭಿನಯದ ‘ಮೇ ಔರ್ ಮಿಸೆಸ್‌ ಖನ್ನಾ’ ಚಿತ್ರಗಳು ಬಿಡುಗಡೆಯಾಗಿದ್ದವು.
 
ಕಾಮಿಡಿ ಚಿತ್ರ ‘ಆಲ್‌ ದಿ ಬೆಸ್ಟ್‌’ ಚಿತ್ರ ₹38 ಕೋಟಿ ಗಳಿಸಿತ್ತು  ಹಾಗೂ ಸಲ್ಮಾನ್ ಚಿತ್ರಗಳಿಸಿದ್ದು ₹7 ಕೋಟಿ.
 
**
2010
ಗೋಲ್‌ ಮಾಲ್‌3– ಆ್ಯಕ್ಷನ್ ರೀಪ್ಲೇ: ಈ ವರ್ಷದಲ್ಲಿ ಬಹುತಾರಾಗಣದ ಗೋಲ್‌ಮಾಲ್‌ ಸೀರೀಸ್‌ನ 3ನೇ ಚಿತ್ರ ‘ಗೋಲ್‌ಮಾಲ್‌ 3’ ಮತ್ತು ಅಕ್ಷಯ್‌ ಕುಮಾರ್, ಐಶ್ವರ್ಯಾ ರೈ ಅಭಿನಯದ ‘ಆ್ಯಕ್ಷನ್ ರೀಪ್ಲೆ’ ಚಿತ್ರ ಬಿಡುಗಡೆ ಕಂಡಿತ್ತು.
 
ಕಾಮಿಡಿ ಚಿತ್ರ ‘ಗೋಲ್‌ ಮಾಲ್‌ 3’ ₹108 ಕೋಟಿ ಚಿತ್ರ ಹಾಗೂ  ‘ಆ್ಯಕ್ಷನ್ ರೀ ಪ್ಲೆ’ ಗಳಿಸಿದ್ದು ₹28 ಕೋಟಿ.
 
**
2012  
ಜಬ್‌ ತಕ್‌ ಹೈ ಜಾನ್‌ ಮತ್ತು  ಸನ್‌ ಆಫ್‌ ಸರ್ದಾರ್‌: ಶಾರೂಖ್ ಖಾನ್‌ ಅಭಿನಯದ ‘ಜಬ್‌ ತಕ್‌ ಹೇ ಜಾನ್‌’,  ಅಜಯ್‌ ದೇವಗನ್‌ರ  ‘ಸನ್‌ ಆಫ್‌ ಸರ್ದಾರ್’ ದೀಪಾವಳಿಯಂದೇ ಬಿಡುಗಡೆಗೊಂಡಿದ್ದವು. ‘ಜಬ್‌ ತಕ್‌ ಹೇ ಜಾನ್‌’ ಚಿತ್ರ ₹101 ಕೋಟಿ, ‘ಸನ್ ಆಫ್‌ ಸರ್ದಾರ್’ ₹88 ಕೋಟಿ ಗಳಿಸಿದ್ದವು. 
 
**
2016
‘ಶಿವಾಯ್’ ಹಾಗೂ ‘ಎ ದಿಲ್ ಹೈ ಮುಷ್ಕಿಲ್‌:
ಈ ಬಾರಿಯೂ ದೀಪಾವಳಿಗೆ ಎರಡು ದೊಡ್ಡ ಬಜೆಟ್‌ನ ಚಿತ್ರಗಳು ಬಿಡುಗಡೆಯಾಗುತ್ತಿವೆ. ಅಜಯ್ ದೇವಗನ್‌ ನಟಿಸಿ, ನಿರ್ದೇಶಿಸಿರುವ ಸಾಹಸ ಪ್ರಧಾನ ಚಿತ್ರ ‘ಶಿವಾಯ್’ ಹಾಗೂ ರಣಬೀರ್ ಕಪೂರ್‌, ಐಶ್ವರ್ಯಾ ರೈ ಅಭಿನಯದ ಹಸಿಬಿಸಿ ದೃಶ್ಯಗಳ ಚಿತ್ರ ‘ಎ ದಿಲ್ ಹೈ ಮುಷ್ಕಿಲ್‌’ ಈ ಬಾರಿ ಮುಖಾಮುಖಿಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT