ಶನಿವಾರ, ಜೂನ್ 19, 2021
27 °C

ಮಾಸ ಭವಿಷ್ಯ: 2021ರ ಜೂನ್ 1 ರಿಂದ 30ರವರೆಗೆ

ಮೇಷ
ಬುದ್ಧಿಬಲದಿಂದ ಪದೋನ್ನತಿ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಚಿಂತನೆ. ವಿರೋಧಿಗಳ ಟೀಕೆಗಳಿಗೆ ಕಿವಿಗೊಡದಿರಿ. ಉದ್ಯಮಿಗಳಿಗೆ ಲಾಭ ತಕ್ಷಣವೇ ದೊರಕದಿದ್ದರೂ ಸ್ಥಿರವಾಗಿ ಬರುತ್ತದೆ. ಹಣ ಹೂಡಿಕೆಗೆ ಮುನ್ನ ಯೋಚಿಸಿ.
ವೃಷಭ
ಮಾತು ಬಲ್ಲವನಿಗೆ ಜಗಳವಿಲ್ಲ. ನೀವಾಡುವ ಮಾತುಗಳು ಮತ್ತೊಬ್ಬರಿಗೆ ನೋವನ್ನುಂಟು ಮಾಡಬಾರದು. ಅನ್ಯರ ಬಗ್ಗೆ ತಕ್ಷಣದ ತೀರ್ಮಾನ ಬೇಡ. ಆರೋಗ್ಯದ ಕಡೆ ಗಮನ ಇರಲಿ.
ಮಿಥುನ
ಸಂಗಾತಿಯ ಜೊತೆ ಬಾಂಧವ್ಯ ವೃದ್ಧಿಸುವುದು. ಜೊತೆಯಾಗಿ ಸಮಯ ಕಳೆಯಲು ಸಾಧ್ಯವಾಗುವುದು. ಇದರಿಂದ ಚೈತನ್ಯ ಇಮ್ಮಡಿಗೊಳ್ಳಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಬರಬೇಕಿರುವ ಬಾಕಿ ಹಣ ಕೈ ಸೇರಲಿದೆ.
ಕಟಕ
ಹಣಕಾಸಿನ ಹರಿವಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಿ ಹಣ ಬರುವ ಮಾರ್ಗ ನಿಚ್ಚಳವಾಗುವುದು. ವಾಕ್‌ ಚಾತುರ್ಯದಿಂದ ಇತರರನ್ನು ಗೆಲ್ಲುವಿರಿ. ಹೊಸ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವುದರಿಂದ ಲಾಭ.
ಸಿಂಹ
ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಸತ್ಯ ನಿಮಗೆ ಗೊತ್ತಾಗುವ ಹೊತ್ತಿಗೆ ಅಧಿಕ ಹಣವನ್ನು ಕಳೆದುಕೊಳ್ಳುವಿರಿ. ವ್ಯವಹಾರ ಮಾಡುವಾಗ ಎದುರಾಳಿಯ ಪೂರ್ವಾಪರ ತಿಳಿದುಕೊಳ್ಳಿ.
ಕನ್ಯಾ
ವೈಯಕ್ತಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಉದ್ಭವಿಸಬಹುದು. ಇದನ್ನು ತಡೆಯಲು ಸಂಗಾತಿಯೊಂದಿಗೆ ಚರ್ಚಿಸಿ. ನಿಮ್ಮ ನಾಯಕತ್ವದ ಗುಣಗಳನ್ನು ಮತ್ತು ಕೌಶಲ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಅಭಿವ್ಯಕ್ತಿಸಿ.
ತುಲಾ
ಸಾಲದ ತೀರುವಳಿ ಮಾಡಿದಲ್ಲಿ ಅನುಕೂಲ. ನಿಮ್ಮ ಸೇವೆ ಅಥವಾ ಕೆಲಸಕ್ಕೆ ಪುರಸ್ಕಾರ ಸಿಗಲಿದೆ. ಧನಾತ್ಮಕ ಚಿಂತನೆ ನಿಮಗೆ ತುಂಬಾ ಸಹಾಯ ಮಾಡುತ್ತದೆ. ಇತರ ವ್ಯಕ್ತಿಗಳು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ.
ವೃಶ್ಚಿಕ
ವ್ಯಾಪಾರ, ವ್ಯವಹಾರ ಎಂದರೆ ಲಾಭ ನಷ್ಟ ಇದ್ದದ್ದೇ. ಅದಕ್ಕಾಗಿ ಈಗ ಹಣ ಖರ್ಚಾದರೂ ಆತಂಕ ಬೇಡ. ಮುಂದೆ ಒಳಿತಾಗುವುದು. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮ ಯಶಸ್ಸಿನ ದಾರಿ ಗುಟ್ಟಾಗಿರಲಿ.
ಧನು
ದೊಡ್ಡ ಯೋಜನೆಯೊಂದು ನಿಮ್ಮ ಕೌಶಲ್ಯಕ್ಕೆ ಸವಾಲಾಗುವುದು. ಮೇಲಧಿಕಾರಿಗಳ ಸಹಾಯದಿಂದ ಅದನ್ನು ಯಶಸ್ವಿಯಾಗಿ ಪೂರೈಸುವಿರಿ. ಇದರಿಂದ ಪ್ರಶಂಸೆಗೆ ಒಳಗಾಗುವಿರಿ. ಉದ್ಯೋಗದಲ್ಲಿ ಬಡ್ತಿ.
ಮಕರ
ನಿಮ್ಮ ಸಮೀಪದ ಜನರು ಅಥವಾ ಬಂಧುಗಳು ನಿಮ್ಮ ಕಾರ್ಯವೈಖರಿಯನ್ನು ಟೀಕಿಸುವರು. ನೀವು ಸಮಾಜದಲ್ಲಿ ಗಳಿಸುತ್ತಿರುವ ಗೌರವ, ಆದರಗಳನ್ನು ಕಂಡು ಇತರರು ಹೊಟ್ಟೆಕಿಚ್ಚು ಪಡುವರು. ತಾಳ್ಮೆಯಿಂದಿರಿ.
ಕುಂಭ
ಆಲಸ್ಯದಿಂದ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಆಗುವ ಸಾಧ್ಯತೆ ಇದೆ. ಮೊದಲು ಅದರಿಂದ ಹೊರಗೆ ಬನ್ನಿ. ಸಂಬಂಧಗಳಲ್ಲಿ ಸಂತಸ ಇರುತ್ತದೆ. ಮಕ್ಕಳ ಆಸಕ್ತಿಯನ್ನು ಗುರುತಿಸಿ, ಅವರಿಗೆ ಅಗತ್ಯ ನೆರವು ನೀಡುತ್ತಿರಿ.
ಮೀನ
ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ. ಆ ಮೂಲಕ ಹಲವು ಕಾರ್ಯಗಳನ್ನು ಪೂರ್ಣಗೊಳಿಸಲು ಯತ್ನಿಸಿ. ಇದರಿಂದ ಯಶಸ್ಸು ನಿಮ್ಮದಾಗಲಿದೆ. ಸಂಬಂಧಿಕರ ಜತೆ ತಾಳ್ಮೆಯಿಂದ ವರ್ತಿಸಿ.