ಭಾನುವಾರ, ಮೇ 29, 2022
31 °C

ಭೂಮಿಯನ್ನು ಹೋಲುವ ಏಳು ಗ್ರಹಗಳನ್ನು ಪತ್ತೆ ಮಾಡಿದ ನಾಸಾ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಭೂಮಿಯನ್ನು ಹೋಲುವ ಏಳು ಗ್ರಹಗಳನ್ನು ಪತ್ತೆ ಮಾಡಿದ ನಾಸಾ

ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಸೌರಮಂಡಲದಾಚೆ ಇನ್ನೊಂದು ಸೌರಮಂಡಲವನ್ನು ಪತ್ತೆ ಹಚ್ಚಿದೆ.

ಈ ಸೌರಮಂಡಲದಲ್ಲಿ ಭೂಮಿಯಂತೆ ಇರುವ 7 ಗ್ರಹಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದು, ವಾಸಯೋಗ್ಯ ಗ್ರಹಗಳು ಎಷ್ಟಿವೆ ಎಂಬುದರ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ.

ನಮ್ಮ ಸೌರಮಂಡಲದಂತೆಯೇ ಇರುವ ಈ ಹೊಸ ಸೌರಮಂಡಲದಲ್ಲಿ ಕುಬ್ಜ ನಕ್ಷತ್ರದ ಸುತ್ತುವ ಏಳು ಗ್ರಹಗಳನ್ನು ಪತ್ತೆ ಹಚ್ಚಿದ್ದು, ಇವುಗಳಲ್ಲಿ ಕೆಲವು ಗ್ರಹಗಳು ವಾಸಯೋಗ್ಯ ವಾತಾವರಣವನ್ನು ಹೊಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ  ಏಳು ಗ್ರಹಗಳ ಪೈಕಿ ಮೂರು ಗ್ರಹಗಳಲ್ಲಿ ಜೀವಿಗಳು ವಾಸಿಸಲು ಯೋಗ್ಯವಾದ  ವಾತಾವರಣವಿದ್ದು, ಇಲ್ಲಿ ನೀರಿನ ಸೆಲೆ ಕಂಡು ಬಂದಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ಸೂರ್ಯನಿಗಿಂತ 200 ಪಟ್ಟು ಕಾಂತಿಹೀನವಾಗಿರುವ ನಕ್ಷತ್ರವೊಂದರ ಸುತ್ತಲೂ ಈ ಗ್ರಹಗಳು ತಿರುಗುತ್ತಿವೆ. ಭೂಮಿಯಿಂದ ಸುಮಾರು 40 ಜೋತಿರ್‍‍ ವರ್ಷಗಳಷ್ಟು ದೂರವಿರುವ ಸೌರಮಂಡಲವನ್ನು ಹೋಲುವ ಈ  ಸೌರಮಂಡಲದ ಕೇಂದ್ರ ಬಿಂದುವಾದ  ಕುಬ್ಜ ನಕ್ಷತ್ರಕ್ಕೆ  Trappist-1 ಎಂದು ಹೆಸರಿಡಲಾಗಿದೆ.

Trappist-1 ನಕ್ಷತ್ರದ ಸುತ್ತಲೂ ಭೂಮಿಯಂತೆ ಇರುವ ಏಳು ಗ್ರಹಗಳು ಸುತ್ತುತ್ತಿವೆ.  Trappist-1  ನಮ್ಮ ಸೂರ್ಯನಂತೆ ಕೇಂದ್ರ ಸ್ಥಾನದಲ್ಲಿದ್ದರೆ, ಸೌರಮಂಡಲದಲ್ಲಿ ಬುಧಗ್ರಹದ ಕಕ್ಷೆಯಷ್ಟು ಪರಿಧಿಯಲ್ಲಿ ಈ ಗ್ರಹಗಳು ಸ್ಥಿತಿಗೊಂಡಿವೆ.

ಈ ಗ್ರಹಗಳನ್ನು ಸದ್ಯಕ್ಕೆ b,c,d,e,f,g,h ಎಂದು ಹೆಸರಿಸಲಾಗಿದ್ದು ಕೇಂದ್ರ ಬಿಂದುವಾದ ನಕ್ಷತ್ರಕ್ಕೆ A ಎಂದು ಹೆಸರಿಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.