ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿ, ಜಿಎಸ್‍ಟಿ ಯಶಸ್ವಿಯಾಗಿದೆ ಎಂದಾದರೆ, 'ಮರ್ಸಲ್' ದೃಶ್ಯಕ್ಕೆ ಕತ್ತರಿ ಹಾಕಲು ಹೇಳುತ್ತಿರುವುದೇಕೆ?

Last Updated 21 ಅಕ್ಟೋಬರ್ 2017, 16:26 IST
ಅಕ್ಷರ ಗಾತ್ರ

ಬೆಂಗಳೂರು: ಇಳಯ ದಳಪತಿ ವಿಜಯ್ ನಟನೆಯ ತಮಿಳು ಚಿತ್ರ ‘ಮರ್ಸಲ್’ನಲ್ಲಿ ಕೇಂದ್ರ ಸರ್ಕಾರದ ಜಿಎಸ್‌ಟಿ ಹಾಗೂ ನೋಟು ರದ್ದತಿಗೆ ಸಂಬಂಧಿಸಿದ ದೃಶ್ಯಗಳನ್ನು ಚಿತ್ರದಿಂದ ತೆಗೆಯಬೇಕು ಎಂದು ಪಟ್ಟು ಹಿಡಿದಿರುವ ಬಿಜೆಪಿ ವಿರುದ್ಧ ತಮಿಳರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಿದು ಮರ್ಸಲ್ ವಿವಾದ?
ಮರ್ಸಲ್ ಸಿನಿಮಾದಲ್ಲಿ ನಾಯಕ ನಟ ವಿಜಯ್ ಅವರು, ಔಷಧಿಗೆ ಶೇ. 12ರಷ್ಟು ಜಿಎಸ್‍ಟಿ ವಿಧಿಸಲಾಗಿದೆ ಆದರೆ ಹಲವಾರು ಜನರ ಸಾವಿಗೆ ಕಾರಣವಾಗುವ ಮದ್ಯದ ಮೇಲೆ ಜಿಎಸ್‍ಟಿ ಇಲ್ಲ. ಶೇ. 7 ರಷ್ಟು ಜಿಎಸ್‍ಟಿ ಇರುವ ಸಿಂಗಪುರದಲ್ಲಿ ಔಷಧಿ ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳುವ ದೃಶ್ಯವಿದೆ. ಅಷ್ಟೇ ಅಲ್ಲದೆ ಗೋರಖಪುರದಲ್ಲಿ ಆಮ್ಲಜನಕದ ಕೊರತೆಯಿಂದ ಮಕ್ಕಳು ಸಾವನ್ನಪ್ಪಿದ ಘಟನೆಗೂ ಈ ದೃಶ್ಯದಲ್ಲಿ ಸಂಬಂಧ ಕಲ್ಪಿಸಲಾಗಿದೆ. ಈ ಎಲ್ಲ ದೃಶ್ಯಗಳಿಗೆ ಕತ್ತರಿ ಹಾಕಬೇಕು ಇಲ್ಲವೇ ಮ್ಯೂಟ್ ಮಾಡಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ.

ಬಿಜೆಪಿಯ ಈ ಆಕ್ಷೇಪದ ವಿರುದ್ಧ ಸಾಮಾಜಿಕ ತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಮರ್ಸಲ್ ಬೆಂಬಲಿಗರು, ವಿಜಯ್ ಅಭಿಮಾನಿಗಳು #MersalVsModi ಎಂಬ ಹ್ಯಾಶ್‌ಟ್ಯಾಗ್‍ನೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

[related]


#TamiliansVsModi ಟ್ರೆಂಡಿಂಗ್
ಮರ್ಸಲ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದ್ದಂತೆ ಶನಿವಾರ ಟ್ವಿಟರ್‍‍ನಲ್ಲಿ #TamiliansVsModi ಹ್ಯಾಶ್‍ಟ್ಯಾಗ್ ಟ್ರೆಂಡ್ ಆಗಿದೆ. ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿರುವ ಸಿನಿಮಾದ ಆ ಒಂದು ದೃಶ್ಯವೂ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಸಿನಿಮಾಕ್ಕೆ ಹೆಚ್ಚಿನ ಪ್ರಚಾರವೂ ಸಿಕ್ಕಿದೆ.

ಮರ್ಸಲ್ ವಿವಾದಕ್ಕೆ ಸಂಬಂಧಪಟ್ಟಂತೆ ಟ್ವಿಟರ್‍‍ನಲ್ಲಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಯುತ್ತಿದ್ದು, ಕೆಲವೊಂದು ಟ್ವೀಟ್‍‌ಗಳು ಇಂತಿವೆ.

ನೋಟು ರದ್ದತಿ, ಜಿಎಸ್‍ಟಿ ಅದ್ಭುತ ಯಶಸ್ಸು ಎಂದು ಮೋದಿ ಮತ್ತು ಬಿಜೆಪಿ ಹೇಳುತ್ತಿದೆ. ಹಾಗಾದರೆ ಸಿನಿಮಾದಿಂದ ಆ ದೃಶ್ಯವನ್ನು ತೆಗೆದುಹಾಕಿ ಎಂದು ಒತ್ತಾಯಿಸುತ್ತಿರುವುದೇಕೆ?  ಮರ್ಸಲ್ ಸೆನ್ಸಾರ್‍‍ಗೊಳಪಡಿಸುವುದೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT