ಗುರುವಾರ , ಮಾರ್ಚ್ 4, 2021
29 °C
ಉಮರ್‌ ಅಲ್ ಹಿಂದಿ ಪ್ರಕರಣದ ಪ್ರಮುಖ ಆರೋಪಿಗಳ ಜತೆ ಸಂಪರ್ಕ

ಮದುವೆಗೂ ಮುನ್ನ ಉಗ್ರ ಸಂಘಟನೆಯ ಜತೆ ಸಂಪರ್ಕದಲ್ಲಿದ್ದ ಹಾದಿಯಾ ಪತಿ: ಎನ್‌ಐಎ ವರದಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮದುವೆಗೂ ಮುನ್ನ ಉಗ್ರ ಸಂಘಟನೆಯ ಜತೆ ಸಂಪರ್ಕದಲ್ಲಿದ್ದ ಹಾದಿಯಾ ಪತಿ: ಎನ್‌ಐಎ ವರದಿ

ನವದೆಹಲಿ: ಒತ್ತಾಯ ಮತಾಂತರ ಪ್ರಕರಣದಲ್ಲಿ ಸಿಲುಕಿರುವ ಕೇರಳದ ಯುವತಿ ಹಾದಿಯಾ ಅವರ ಪತಿ ಮದುವೆಗೂ ಮುನ್ನ ಇಸ್ಲಾಮಿಕ್‌ ಸ್ಟೇಟ್‌(ಐಎಸ್‌) ಉಗ್ರ ಸಂಘಟನೆಯ ಇಬ್ಬರು ಉಗ್ರರ ಜತೆ ಸಂಪರ್ಕದಲ್ಲಿದ್ದ ಎಂಬ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಹಿರಂಗಪಡಿಸಿದೆ.

ಹಾದಿಯಾ ಪತಿ ಶಫಿನ್ ಜಹಾನ್ ಮದುವೆಗೂ ಮೊದಲು ಉಮರ್‌ ಅಲ್ ಹಿಂದಿ ಪ್ರಕರಣದ ಪ್ರಮುಖ ಆರೋಪಿಗಳಾದ ಮನ್ಸೀದ್ ಹಾಗೂ ಪಿ ಶಫ್ವಾನ್ ಅವರ ಜತೆ ಸಂಪರ್ಕ ಬೆಳೆಸಿಕೊಂಡಿದ್ದ ಎಂದು ಎನ್‌ಐಎ ಹೇಳಿದೆ ಎಂದು ದಿ ಟೈಮ್ಸ್ ಆಫ್‌ ಇಂಡಿಯಾ ವರದಿ ಮಾಡಿದೆ.

ಮನ್ಸೀದ್ ಹಾಗೂ ಪಿ ಶಫ್ವಾನ್ ಇವರಿಬ್ಬರು ಎಸ್‌ಡಿಪಿಐಯ ರಾಜಕೀಯ ಸಂಘಟನೆಯಾದ ಪಿಎಫ್‌ಐ(ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆ)ಯ ಕಾರ್ಯಕರ್ತರನ್ನೂ ಒಳಗೊಂಡ ಫೇಸ್‌ಬುಕ್ ಗುಂಪಿನಲ್ಲಿ ಸಕ್ರಿಯರಾಗಿದ್ದರು. ಇವರನ್ನು ಉಮರ್‌ ಅಲ್ ಹಿಂದಿ ಪ್ರಕರಣದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಬಂಧಿಸಿ, ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ಶಫಿನ್ ಅವರು ಎಸ್‌ಡಿಪಿಐ ಕಾರ್ಯಕರ್ತರ ‘ಥನಾಲ್’ ಎಂಬ ಫೇಸ್‌ಬುಕ್‌ ಖಾತೆಯ ಮೂಲಕ ಮನ್ಸೀದ್ ಹಾಗೂ ಪಿ ಶಫ್ವಾನ್ ಅವರನ್ನು ಸಂಪರ್ಕಿಸಿರಬಹುದು ಹಾಗೂ ಇವರಿಬ್ಬರೇ ಹಾದಿಯಾ ಹಾಗೂ ಶಫಿನ್ ಅವರ ವಿವಾಹವನ್ನು 2016 ಡಿಸೆಂಬರ್‌ನಲ್ಲಿ ನೆರವೇರಿಸಿರಬೇಕು ಎಂದು ಎನ್‌ಐಎ ಅನುಮಾನ ವ್ಯಕ್ತಪಡಿಸಿದೆ.

ಏನಿದು ಉಮರ್‌ ಅಲ್ ಹಿಂದಿ ಪ್ರಕರಣ?

ಉಮರ್‌ ಅಲ್ ಹಿಂದಿ ಇದು ಇಸ್ಲಾಮಿಕ್‌ ಸಂಘಟನೆಯಿಂದ ಪ್ರೇರೇಪಿತಗೊಂಡ ಗುಂಪು. ಈ ಗುಂಪಿನಲ್ಲಿನ ವ್ಯಕ್ತಿಗಳು ದೇಶದ ಗಣ್ಯರಾದ ಹೈಕೋರ್ಟ್ ನ್ಯಾಯಮೂರ್ತಿಗಳು, ರಾಜಕೀಯ ಮುಖಂಡರು, ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಬಗ್ಗೆ ಸಂಚು ರೂಪಿಸಿದ್ದರು. ಈ ಪ್ರಕರಣದಲ್ಲಿ ಮನ್ಸೀದ್ ಹಾಗೂ ಪಿ ಶಫ್ವಾನ್ ಭಾಗಿಯಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.