ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುವ ‘ಎರಡು ಕನಸು’ ಧಾರಾವಾಹಿಯು ಇನ್ನು ಮುಂದೆ ಹೊಸ ಕಥೆಯೊಂದಿಗೆ ಹೊಸ ರೂಪದಲ್ಲಿ ಮೂಡಿ ಬರಲಿದೆ.

ಇದು ಅಡುಗೆ ಮನೆ ದಾಟಿದ ಹೆಣ್ಣುಮಕ್ಕಳ ಕಥೆ. ಕುಟುಂಬದ ಕಾಳಜಿ ಜೊತೆಗೆ ಯಾವುದೇ ಅಡೆತಡೆ ಇಲ್ಲದೆ ಉದ್ಯೋಗದ ಜವಾಬ್ದಾರಿಯನ್ನೂ ನಿಭಾಯಿಸುವ ಹೆಣ್ಣುಮಕ್ಕಳ ಕಥಾಹಂದರ. ಮಹತ್ವಾಕಾಂಕ್ಷಿ ಹೆಣ್ಣುಮಕ್ಕಳು ಮದುವೆಯಾದ ಬಳಿಕ ಗಂಡ, ಮನೆ, ಮಕ್ಕಳ ಜವಾಬ್ದಾರಿ ಹೊತ್ತು ಸುಮ್ಮನಿದ್ದು ಬಿಡುತ್ತಾರೆ. ‘ಎರಡು ಕನಸು’ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿರುವ ಇಬ್ಬರು ಸಹೋದರಿಯರು ಎಂ.ಬಿ.ಎ ಮತ್ತು ವೈದ್ಯಕೀಯ ಪದವಿ ಪಡೆದವರು. ಅವರು ತಮ್ಮ ಶಿಕ್ಷಣದ ನೆರವಿನೊಂದಿಗೆ ಕುಟುಂಬ ಮತ್ತು ಗಂಡಂದಿರ ಕಷ್ಟಗಳನ್ನು ಪರಿಹರಿಸುತ್ತಲೆ ಮನೆಯ ಹೊರಗೂ ಮತ್ತು ಒಳಗೂ ಸಾಧನೆ ಮಾಡುತ್ತಾರೆ.ಹೊಸ ವರ್ಷಕ್ಕೆ ಧಾರಾವಾಹಿಯ ಕಥೆ, ನಿರೂಪಣೆ, ಸಂಗೀತ, ಧಾರಾವಾಹಿಯಲ್ಲಿ ಮೊದಲಿದ್ದ ಲಕ್ಷ್ಮಿ ಪಾತ್ರಧಾರಿ ಅಶ್ವಿನಿ ಗೌಡ ಅವರು ಭಾರತಿ ಪಾತ್ರದ ಮೂಲಕ ಧಾರಾವಾಹಿಗೆ ವಾಪಸಾಗಲಿದ್ದಾರೆ. ಮತ್ತೊಂದೆಡೆ ಸಹಜ ಮತ್ತು ಅರ್ಜುನ್ ದಂಪತಿ ಮದುವೆಯ ನಂತರ ಡಿನ್ನರ್, ಲಾಂಗ್ ಡ್ರೈವ್ ಮಾಡುತ್ತಾ ಜೀವನದ ಚಿಕ್ಕ ಚಿಕ್ಕ ಸಂತೋಷ ಅನುಭವಿಸುತ್ತಾರೆ. ಈ ದಂಪತಿಯ ಬದುಕಿನ ಖುಷಿಯೊಂದಿಗೆ ಮತ್ತೊಂದು ಎಳೆ ತೆರೆದುಕೊಳ್ಳಲಿದೆ.

ವೈದ್ಯೆಯಾಗಿರುವ ಸಹನಾ ತನ್ನ ಮಾನಸಿಕ ಅಸ್ವಸ್ಥ ಗಂಡನನ್ನು ಹೇಗೆ ಗುಣಪಡಿಸುತ್ತಾಳೆ ಎನ್ನುವ ಕಥೆಯೂ ಬಿಚ್ಚಿಕೊಳ್ಳಲಿದೆ. ಈ ಎಲ್ಲಾ ಸನ್ನಿವೇಶಗಳು ವೀಕ್ಷಕರಿಗೆ ರಂಜನೆ ನೀಡಲಿವೆ ಎನ್ನುತ್ತಾರೆ ವಾಹಿನಿಯ ಮುಖ್ಯಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.