ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷಾಚರಣೆ: ಕೈ ತುತ್ತಿನ ಸಂಭ್ರಮ

Last Updated 2 ಜನವರಿ 2018, 6:15 IST
ಅಕ್ಷರ ಗಾತ್ರ

ಕುಣಿಗಲ್: ಪಟ್ಟಣದ ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕೇಕ್ ಕತ್ತರಿಸುವ ಮೂಲಕ ಹೊಸವರ್ಷ ಆಚರಣೆ ಮಾಡಿದರೆ ಜ್ಞಾನಭಾರತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಾತ್ರ ತಾಯಿಯರನ್ನು ಕಾಲೇಜಿಗೆ ಕರೆದುಕೊಂಡು ಬಂದು ಅವರಿಗೆ ಪಾದಪೂಜೆ ಮೂಲಕ ಹೊಸ ವರ್ಷದ ಸಂಭ್ರಮಾಚರಣೆ ನೆರವೇರಿಸಿದರು. ಮಕ್ಕಳಿಗೆ ಕೈ ತುತ್ತು ನೀಡುವ ಮೂಲಕ ತಾಯಿಯರು ಸಂಭ್ರಮಿಸಿದರು.

ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ಧರಿಸಿದ್ದರು.  ಮನೆಗಳಿಂದಲೇ ಊಟದ ಬುತ್ತಿಗಳನ್ನು ತಂದಿದ್ದರು. ವಿದ್ಯಾರ್ಥಿಗಳು  ತಮ್ಮ, ತಮ್ಮ ತಾಯಿಯರ ಬಗ್ಗೆ ಹೇಳಿಕೊಂಡಾಗ ಅಲ್ಲಿದ್ದ ಗಣ್ಯರ ಕಣ್ಣಲ್ಲಿ ನೀರು ತುಂಬಿ ಬಂದವು.

ಹುಬ್ಬಳಿ ರಾಮದುರ್ಗದ ಗೋಕುಲ ಗ್ರಾಮದಿಂದ ಬಂದು ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಗೋಕುಲ ಗಂಗಪ್ಪ ಲಮಾಣಿ ಅವರ ತಾಯಿ ಮಾತೃ ಉತ್ಸವಕ್ಕೆ 600ಕಿ.ಮೀ ನಿಂದ ಬಂದು ಮಗನ ಶೈಕ್ಷಣಿಕ ಪ್ರಗತಿ ನೋಡಿ ಮೂಕ ಪ್ರೇಕ್ಷಕರಾದರು. ಅಲ್ಲದೆ ಮಗನಿಗೆ ಕೈ ತುತ್ತು ನೀಡಿ ಆನಂದಬಾಷ್ಪ ಸುರಿಸಿದರು. ಅತಿ ಹೆಚ್ಚು ಅಂಕ ಪಡೆದ ಮಕ್ಕಳ ತಾಯಂದಿರನ್ನು ಸನ್ಮಾನಿಸಲಾಯಿತು.

ಒಕ್ಕಲಿಗರ ಸಂಘದ ಖಜಾಂಚಿ ಗಂಗಶಾನಯ್ಯ, ನಿರ್ದೇಶಕರಾದ ಪುಟ್ಟಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ.ಚಂದ್ರಪ್ಪ, ಪ್ರಾಂಶುಪಾಲ ಗೋವಿಂದೇಗೌಡ, ಉಪಪ್ರಾಂಶುಪಾಲರಾದ ಕಪನಿಪಾಳ್ಯ ರಮೇಶ್, ಕೆ.ಜಿ.ಪ್ರಕಾಶ್ ಮೂರ್ತಿ, ಮುಖ್ಯ ಶಿಕ್ಷಕಿ ಗಂಗಮ್ಮ ಇದ್ದರು.

ಹೊಸ ಸಿರಿ; ಹೊಸ ಬೆಳಕು

ಗುಬ್ಬಿ: ಬಡಿದುಕೊಂಡು ತಿನ್ನುವ ಶಿಕ್ಷಣದ ಬದಲು, ಹಂಚಿಕೊಂಡು ತಿನ್ನುವ ಶಿಕ್ಷಣದ ವಾತಾವರಣ ನಿರ್ಮಾಣವಾಗಬೇಕು ಎಂದು ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು. ಪಟ್ಟಣದ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಅಕ್ಷಯ ಚಾರಿಟಬಲ್ ಟ್ರಸ್ಟ್ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ‘ಹೊಸ ಸಿರಿ 2018’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಟ್ರಸ್ಟ್ ಗೌರವಾಧ್ಯಕ್ಷ ಜಿ.ಎಸ್.ಪ್ರಸನ್ನಕುಮಾರ್ ಮಾತನಾಡಿ, ‘ಪ್ಲಾಸ್ಟಿಕ್, ರಾಸಾಯನಿಕ ಮುಕ್ತ ವಾತಾವರಣ ನಿರ್ಮಾಣ ಮಾಡಲು ನಾವೆಲ್ಲ ಪಣತೊಡಬೇಕು’ ಎಂದರು. ಬಿ.ಕೋಡಿಹಳ್ಳಿ ಮಠದ ಬಸವ ಮೃತ್ಯುಂಜಯ ಸ್ವಾಮೀಜಿ, ತೊರೆಮಠದ ರಾಜಶೇಖರ ಸ್ವಾಮೀಜಿ, ತೇವಡಿಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಸ್ವಾಮಿಜಿ, ಮುಖಂಡರಾದ ಹೊನ್ನಗಿರಿ ಗೌಡ, ಸುರುಗೇನಹಳ್ಳಿ ನರಸಿಂಹಯ್ಯ, ನಿಂಬೆಕಟ್ಟೆ ಜಯಣ್ಣ, ಟ್ರಸ್ಟ್ ಅಧ್ಯಕ್ಷ ಗುರುಪ್ರಸಾದ್, ಹೇಮಂತ್, ನಟರಾಜು, ಕಾಂತರಾಜು, ಕೆ.ಆರ್.ತಾತಯ್ಯ, ಶಶಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT