ಜಯದ ಮುನ್ನುಡಿ ಬರೆದ ವೋಜ್ನಿಯಾಕಿ

7

ಜಯದ ಮುನ್ನುಡಿ ಬರೆದ ವೋಜ್ನಿಯಾಕಿ

Published:
Updated:
ಜಯದ ಮುನ್ನುಡಿ ಬರೆದ ವೋಜ್ನಿಯಾಕಿ

ಆಕ್ಲಂಡ್‌: ಡೆನ್ಮಾರ್ಕ್‌ನ ಕ್ಯಾರೋಲಿನಾ ವೋಜ್ನಿಯಾಕಿ, ಡಬ್ಲ್ಯುಟಿಎ ಆಕ್ಲಂಡ್‌ ಕ್ಲಾಸಿಕ್‌ ಟೆನಿಸ್‌ ಟೂರ್ನಿಯಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ್ದಾರೆ.

ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಕ್ಯಾರೋಲಿನಾ 6–3, 6–0ರ ನೇರ ಸೆಟ್‌ಗಳಿಂದ ಅಮೆರಿಕದ ಮ್ಯಾಡಿಸನ್‌ ಬ್ರೆಂಗಲ್‌ ವಿರುದ್ಧ ಗೆದ್ದರು.

ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಕ್ಯಾರೋಲಿನಾ ಮೊದಲ ಸೆಟ್‌ನಲ್ಲಿ ಎದುರಾಳಿಯಿಂದ ಅಲ್ಪ ಪ್ರತಿರೋಧ ಎದುರಿಸಿದರು. ಇದರ ನಡುವೆಯೂ ದಿಟ್ಟ ಆಟವಾಡಿ ಗೆದ್ದರು.

ಎರಡನೇ ಸೆಟ್‌ನಲ್ಲಿ ಬ್ರೆಂಗಲ್‌ ಮಂಕಾದರು. ಚುರುಕಿನ ಸರ್ವ್‌ಗಳ ಮೂಲಕ ಗೇಮ್‌ ಗೆದ್ದ ಕ್ಯಾರೋಲಿನಾ, ಎದುರಾಳಿಯ ಮೂರೂ ಸರ್ವ್‌ಗಳನ್ನು ಮುರಿದು ಜಯಿಸಿದರು.

ಇನ್ನೊಂದು ಪಂದ್ಯದಲ್ಲಿ ಜೆಕ್‌ ಗಣರಾಜ್ಯದ ಮೂರನೇ ಶ್ರೇಯಾಂಕದ ಆಟಗಾರ್ತಿ ಬಾರ್ಬೊರಾ ಸ್ಟ್ರೈಕೋವಾ 6–4, 6–7, 6–4ರಲ್ಲಿ ಇಟಲಿಯ ಸಾರಾ ಎರಾನಿ ವಿರುದ್ಧ ಗೆದ್ದರು.

ದಿನದ ಇತರ ಪಂದ್ಯಗಳಲ್ಲಿ ಸಚಿಯಾ ವಿಕೆರಿ 6–1, 6–2ರಲ್ಲಿ ಲೌರೆನ್‌ ಡೇವಿಸ್‌ ಎದುರೂ, ಅಗ್ನಿಸ್ಕಾ ರಾಡ್ವಾಂಸ್ಕಾ 6–2, 4–6, 6–2ರಲ್ಲಿ ಬಿಯೆಟ್ರಿಜ್‌ ಮಯಿಯಾ ಮೇಲೂ, ವರ್ವರಾ ಲೆಪಚೆಂಕೊ 6–2, 6–2ರಲ್ಲಿ ಮೋನಾ ಬಾರ್ಥೆಲ್‌ ವಿರುದ್ಧವೂ, ಸಲಿನೆ ಬೊನಾವೆಂಚುರ್‌ 6–3, 6–3ರಲ್ಲಿ ಯೂಲಿಯಾ ಪುಟಿನ್‌ತ್ಸೆವಾ ಮೇಲೂ, ಪೊಲೊನಾ ಹರ್ಕಗ್‌ 6–4, 7–5ರಲ್ಲಿ ಅಲಿಸನ್‌ ವ್ಯಾನ್‌ ಉಯಿತ್‌ವಾಂಕ್‌ ಎದುರೂ, ಸೋಫಿಯಾ ಕೆನಿನ್‌ 6–4, 6–4ರಲ್ಲಿ ಜನಾ ಫೆಟ್‌ ವಿರುದ್ಧವೂ, ವೆರೋನಿಕಾ ಸೆಪೆಡ್‌ ರೊಯ್ಗ್‌ 6–3, 6–3ರಲ್ಲಿ ಲಾರಾ ಅರುಬರೆನಾ ಎದುರೂ, ಜೊಹನ್ನಾ ಲಾರ್ಸನ್‌ 7–6, 6–3ರಲ್ಲಿ ಕುರುಮಿ ನಾರಾ ವಿರುದ್ಧವೂ, ಟೇಲರ್‌ ಟೌನ್‌ಸೆಂಡ್‌ 1–6, 6–4, 6–4ರಲ್ಲಿ ಕ್ರಿಸ್ಟಿನಾ ಮೆಕಲೆ ಮೇಲೂ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry