ಎಷ್ಟೋ ಮಂದಿಗೆ ಸರಿರಾತ್ರಿವರೆಗೂ ಓದುವ ಅಭ್ಯಾಸವಿರುತ್ತದೆ. ಆದರೆ ಅವರ ಓದುವ ಅಭ್ಯಾಸ ಮತ್ತೊಬ್ಬರಿಗೆ ಕಿರಿಕಿರಿ ಉಂಟು ಮಾಡುವುದೂ ಸುಳ್ಳಲ್ಲ. ರಾತ್ರಿಯ ಹೊತ್ತು ಲೈಟ್ ಹಾಕಿಕೊಂಡು ಓದುತ್ತಾ, ಮತ್ತೊಬ್ಬರ ನಿದ್ದೆ ಕಸಿಯುವುದು ಕೆಲವೊಮ್ಮೆ ಅನಿವಾರ್ಯವೂ ಆಗಿರುತ್ತದೆ. ಮಕ್ಕಳಿಗಂತೂ ಪರೀಕ್ಷೆ ಸಮಯದಲ್ಲಿ ಇದನ್ನು ತಪ್ಪಿಸಲು ಸಾಧ್ಯವಿಲ್ಲ.

ಆದರೆ ಈ ಕಿರಿಕಿರಿಯಿಂದ ದೂರವುಳಿಯಲು ಲೈಟ್ ಒಂದು ವಿನ್ಯಾಸಗೊಂಡಿದೆ. ಅದೇ ಏಂಜಲ್ ಫಿಶ್ ಲೈಟ್. ತಲೆ ಮೇಲೆ ಕೊಂಡಿಯಂಥ ಒಂದು ಅಂಗವಿದ್ದು, ಅದರಲ್ಲಿನ ಬೆಳಕಿನ ಸಹಾಯದಿಂದ ಓಡಾಡುವ ಏಂಜಲ್ ಫಿಶ್, ಈ ಲೈಟ್‌ನ ವಿನ್ಯಾಸಕ್ಕೂ ಪ್ರೇರಣೆಯಾಗಿದೆ. ಓದಲು ಅವಶ್ಯತೆಯಿದ್ದಷ್ಟು ಬೆಳಕನ್ನು ಇದು ನೀಡುತ್ತದೆ. ವಿಶೇಷ ಎಂದರೆ, ಇದನ್ನು ಪುಸ್ತಕಕ್ಕೆ ಸಿಕ್ಕಿಸಿಕೊಳ್ಳಬಹುದಾಗಿರುವುದು. ಹೇಗೆ ಬೇಕಾದರೂ ಪುಸ್ತಕಕ್ಕೆ ಸಿಕ್ಕಿಸಿಕೊಳ್ಳಬಹುದು. ಇದಕ್ಕೆಂದೇ ಕುಶನ್ ಕ್ಲಾಂಪ್ ಇದೆ. ಲೈಟ್ ಕಾರ್ಡ್ ಅನ್ನು ನೀಡಲಾಗಿದೆ. 3" ಅಗಲ x 3" ಉದ್ದವಿದ್ದು, ಕಣ್ಣಿಗೆ ಹಿತವಾಗಿ, ಜೊತೆಗೆ ಅಕ್ಷರಗಳು ಸ್ಫುಟವಾಗಿ ಕಾಣಿಸುತ್ತದೆ. ಇದನ್ನು ‘ಥಿಂಕ್ ಗ್ರೀಕ್’ ವಿನ್ಯಾಸಗೊಳಿಸಿದೆ.

ಎಬಿಎಸ್ ಪ್ಲಾಸ್ಟಿಕ್‌ನಿಂದ ಇದನ್ನು ತಯಾರಿಸಲಾಗಿದ್ದು, ಎಲ್‌ಇಡಿ ಲೈಟ್ ಇದಾಗಿದೆ. 3ಎಎಎ ಬ್ಯಾಟರಿಯಿಂದ ಶಕ್ತಿ ಪಡೆದು ಬೆಳಕು ನೀಡುತ್ತದೆ. ಕಸೂತಿ ಮಾಡುವಾಗಲೂ ಇದು ಅನುಕೂಲಕ್ಕೆ ಬರುತ್ತದೆಯಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.