ಈ ವಾರ ತೆರೆಗೆ

7

ಈ ವಾರ ತೆರೆಗೆ

Published:
Updated:
ಈ ವಾರ ತೆರೆಗೆ

ಬೃಹಸ್ಪತಿ

ರಾಕ್‍ಲೈನ್ ವೆಂಕಟೇಶ್ ನಿರ್ಮಿಸಿರುವ ‘ಬೃಹಸ್ಪತಿ’ ಚಿತ್ರದ ನಾಯಕ ನಟ ಮನೋರಂಜನ್ ರವಿಚಂದ್ರನ್. ನಂದಕಿಶೋರ್ ನಿರ್ದೇಶನದ ಈ ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಕವಿರಾಜ್, ನಾಗೇಂದ್ರ ಪ್ರಸಾದ್, ಯೋಗಾನಂದ್ ಅವರು ಹಾಡುಗಳನ್ನು ಬರೆದಿದ್ದಾರೆ. ಕನ್ನಿಕಾ, ಸಿತಾರಾ, ಸಾಯಿಕುಮಾರ್, ಅವಿನಾಶ್, ಸಾಧುಕೋಕಿಲ, ವೀಣಾಸುಂದರ್ ತಾರಾಗಣದಲ್ಲಿ ಇದ್ದಾರೆ.

ನಮ್ಮವರು

ಉಷಾ ಪುರುಷೋತ್ತಮ್ ಹಾಗೂ ಆಶಾ ಮುನಿಯಪ್ಪ ನಿರ್ಮಿಸಿರುವ ಈ ಚಿತ್ರದ ನಿರ್ದೇಶಕ ಪುರುಷೋತ್ತಮ್ ಓಂಕಾರ್ ಅವರದ್ದು. ಮುತ್ತುರಾಜ್ ಛಾಯಾಗ್ರಹಣ, ರಾಜ್ ಭಾಸ್ಕರ್ ಸಂಗೀತ ಚಿತ್ರಕ್ಕಿದೆ. ಗಣೇಶ್‍ ರಾವ್, ಶ್ರೀನಿವಾಸ ಮೂರ್ತಿ, ಜ್ಯೋತಿ, ಆಶಾ ಮುನಿಯಪ್ಪ, ರಮೇಶ್ ಭಟ್, ಸುರಕ್ಷಾ, ಜಯಲಕ್ಷ್ಮಿ, ಚಿನ್ಮಯಿ ಸೇರಿದಂತೆ ಹಲವರು ತಾರಾಬಳಗದಲ್ಲಿ ಇದ್ದಾರೆ.

ಪುನಾರಂಭ

ಡಾ. ರೂಪಕುಮಾರ್ ನಿರ್ಮಿಸಿರುವ ಈ ಚಿತ್ರದ ನಿರ್ದೇಶನ ಡಾ. ವಿಜಯ್‍ ಕುಮಾರ್ ಅವರದ್ದು. ಡಾ.ವಿ. ನಾಗೇಂದ್ರ ಪ್ರಸಾದ್ ಸಂಗೀತ, ಎಂ.ಮುತ್ತುರಾಜ್ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಚಿತ್ರಕ್ಕಿದೆ. ವಿಜಯ್‌ ಕುಮಾರ್, ಐಶ್ವರ್ಯ ದಿನೇಶ್, ಶೋಭರಾಜ್, ಶಂಕರ್ ಅಶ್ವತ್ಥ್, ಗಣೇಶ್ ರಾವ್, ರಿಚರ್ಡ್ ಲೂಯಿಸ್ ತಾರಾಬಳಗದಲ್ಲಿ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry