ಶನಿವಾರ, ಜೂಲೈ 4, 2020
21 °C

‘ಅನುಚಿತ’ ಕರೆ ಅವಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಸ್‌ಎನ್‌ಎಲ್‌ನ ಸ್ಥಿರ ದೂರವಾಣಿಗಳಿಗೆ ರಾತ್ರಿ 9ರಿಂದ ಬೆಳಿಗ್ಗೆ 7ರವರೆಗೆ ಜಾರಿಯಲ್ಲಿದ್ದ ಉಚಿತ ಕರೆ ಅವಧಿಯನ್ನು ಹೊಸ ವರ್ಷದಿಂದ ಬದಲಿಸಿ, ರಾತ್ರಿ 10.30 ರಿಂದ ಬೆಳಿಗ್ಗೆ 6ರವರೆಗೆ ನಿಗದಿ ಮಾಡಿದ್ದಾರೆ. ಇದರಿಂದಾಗಿ ಗ್ರಾಹಕರಿಗೆ ಏನೂ ಲಾಭವಿಲ್ಲದಂತಾಗಿದೆ.

ಜನರು ನಿದ್ದೆ ಮಾಡುವ ಹೊತ್ತಿನಲ್ಲಿ ಉಚಿತ ಕರೆಗಳ ಆಮಿಷ ನೀಡಿರುವುದು ಗ್ರಾಹಕರಿಗೆ ಮಾಡಿದ ವಂಚನೆಯಂತೆ ಕಾಣಿಸುತ್ತದೆ.

ವಿವಿಧ ಮೊಬೈಲ್‌ ಸೇವಾ ಕಂಪನಿಯವರು ಹೊಸಹೊಸ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವಾಗ, ಬಿಎಸ್‌ಎನ್‌ಎಲ್‌ನವರು ಸ್ಥಿರ ದೂರವಾಣಿ ಗ್ರಾಹಕರಿಗೆ ಕೊಟ್ಟಿರುವ ಸೌಲಭ್ಯವನ್ನು ಕಡಿಮೆ ಮಾಡುವುದು ಸರಿಯಲ್ಲ.

–ತೂಬಿನಕೆರೆ ಲಿಂಗರಾಜ, ಮಂಡ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.