ಮ್ಯಾನ್‌ಹೋಲ್‌ ದುರಂತ: ಇಬ್ಬರು ಕಾರ್ಮಿಕರ ಸಾವು

7

ಮ್ಯಾನ್‌ಹೋಲ್‌ ದುರಂತ: ಇಬ್ಬರು ಕಾರ್ಮಿಕರ ಸಾವು

Published:
Updated:
ಮ್ಯಾನ್‌ಹೋಲ್‌ ದುರಂತ: ಇಬ್ಬರು ಕಾರ್ಮಿಕರ ಸಾವು

ಬೆಂಗಳೂರು: ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸ್ವಚ್ಛ ಮಾಡಲು ಮ್ಯಾನ್ ಹೋಲ್‌ಗೆ ಇಳಿದಿದ್ದ ಮೂವರು ಕಾರ್ಮಿಕರ ಪೈಕಿ ಒಬ್ಬರು ಮೃತಪಟ್ಟಿದ್ದಾರೆ.

ಎಚ್‌ಎಸ್‌ಅರ್ ಲೇಔಟ್‌ 2ನೇ ಸೆಕ್ಟರ್‌ನ ಸೋಮಸುಂದರಪಾಳ್ಯದಲ್ಲಿ ಭಾನುವಾರ ಈ ಘಟನೆ ನಡೆದಿದೆ.

ಗುತ್ತಿಗೆ ಅಧಾರದ ಮೇಲೆ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಅಪಾರ್ಟ್‌ಮೆಂಟ್‌ವೊಂದರ ಮ್ಯಾನ್ ಹೋಲ್‌ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. 15–20 ಅಡಿ ಆಳದ ಮ್ಯಾನ್ ಹೋಲ್‌ನಲ್ಲಿ ಉಸಿರುಗಟ್ಟಿ ಕಾರ್ಮಿಕರು ಅಸ್ವಸ್ಥರಾಗಿದ್ದು, ಒಬ್ಬ ಕಾರ್ಮಿಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry