ಸಭೆಗೆ ಅಜರ್‌ಗೆ ಪ್ರವೇಶ ನಿರಾಕರಣೆ

7

ಸಭೆಗೆ ಅಜರ್‌ಗೆ ಪ್ರವೇಶ ನಿರಾಕರಣೆ

Published:
Updated:

ಹೈದರಾಬಾದ್ (ಪಿಟಿಐ): ಹಿರಿಯ ಕ್ರಿಕೆಟಿಗ ಮಹಮ್ಮದ್‌ ಅಜರುದ್ದೀನ್ ಅವರಿಗೆ ವಿಶೇಷ ಸಾಮಾನ್ಯ ಸಭೆಗೆ ಪ್ರವೇಶ ನಿರಾಕರಿಸಿದ ಹೈದರಾಬಾದ್‌ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ) ಅಜರುದ್ದೀನ್ ಅವರ ಕೋಪಕ್ಕೆ ತುತ್ತಾಗಿದೆ.

ಅನಧಿಕೃತ ಕ್ರಿಕೆಟ್ ಸಂಸ್ಥೆಯೊಂದರ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಅಜರುದ್ದೀನ್ ಅವರಿಗೆ ‌ಸಭೆಗೆ ಪ್ರವೇಶ ನಿರಾಕರಿಸಲಾಗಿತ್ತು.

‘ಒಂದು ತಾಸಿಗೂ ಹೆಚ್ಚು ಕಾಲ ಹೊರಗೆ ಕಾಯುವಂತೆ ಮಾಡಿದರು. ಇದು ಅತ್ಯಂತ ಬೇಸರದ ವಿಷಯ. ಹೈದರಾಬಾದ್‌ಗಾಗಿ ಆಡಿದ್ದ ನಾನು ವರ್ಷಗಳ ಕಾಲ ಭಾರತ ತಂಡದ ನಾಯಕನೂ ಆಗಿದ್ದೆ. ಇಲ್ಲಿ ಸಂಸ್ಥೆಯ ನೇತೃತ್ವ ವಹಿಸುವವರಿಗೆ ಕ್ರಿಕೆಟ್ ಬಗ್ಗೆ ಏನೇನೂ ತಿಳಿದಿಲ್ಲ’ ಎಂದು ಅಜರುದ್ದೀನ್‌ ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry