ಮಂಗಳವಾರ, ಮೇ 26, 2020
27 °C

ದೋಷಪೂರಿತ ಫಲಕ ಆಯುಕ್ತರ ಕಾರಿಗೆ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೋಷಪೂರಿತ ಫಲಕ ಆಯುಕ್ತರ ಕಾರಿಗೆ ದಂಡ

ಬೆಂಗಳೂರು: ನೋಂದಣಿ ಸಂಖ್ಯೆಯ ದೋಷಪೂರಿತ ಫಲಕವಿದ್ದ ಕಾರಣಕ್ಕೆ ಹಾಸನ ನಗರಸಭೆ ಆಯುಕ್ತರ ಕಾರಿಗೆ ನಗರದ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.

ಉತ್ತರ ಸಂಚಾರ ವಿಭಾಗದ ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ, ಜಾಲಹಳ್ಳಿ, ಪೀಣ್ಯ ಹಾಗೂ ಆರ್‌.ಟಿ.ನಗರ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಶುಕ್ರವಾರ ವಿಶೇಷ ಕಾರ್ಯಾಚರಣೆ ನಡೆಸಿದರು.

ಅದೇ ವೇಳೆ ಆಯುಕ್ತರ ಕಾರು ತಡೆದು ತಪಾಸಣೆ ಮಾಡಿದರು. ನೋಂದಣಿ ಫಲಕದಲ್ಲಿ ಸಂಖ್ಯೆ ಜತೆಗೆ ‘ನಗರಸಭೆ ಹಾಸನ, ಪೌರಾಯುಕ್ತರು’ ಎಂದು ದೊಡ್ಡದಾಗಿ ಬರೆಸಲಾಗಿತ್ತು.

ಆ ಫಲಕದ ಛಾಯಾಚಿತ್ರ ತೆಗೆದುಕೊಂಡ ಪೊಲೀಸರು, ಕಾರಿನ ಚಾಲಕನ ಹೆಸರಿಗೆ ₹100 ದಂಡ ವಿಧಿಸಿದರು. ಜತೆಗೆ ಫಲಕ ತೆರವುಗೊಳಿಸಿ ಜಪ್ತಿ ಮಾಡಿದರು. ಹೊಸ ಫಲಕ ಹಾಕಿಕೊಳ್ಳುವಂತೆ ಎಚ್ಚರಿಕೆ ನೀಡಿ ಕಳುಹಿಸಿದರು.

336 ಫಲಕ ತೆರವು: ಕಾರ್ಯಾಚರಣೆ ವೇಳೆಯಲ್ಲಿ 336 ಕಾರುಗಳ ಫಲಕಗಳನ್ನು ಪೊಲೀಸರು ತೆರವು ಮಾಡಿದರು.

ಬೆಂಗಳೂರು ಗ್ರಾಮಾಂತರ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ, ತುಮಕೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ, ಮೈಸೂರು ಸೇಲ್ಸ್‌ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌

(ಎಂಎಸ್‌ಐಎಲ್‌) ನಿರ್ದೇಶಕ, ಶಿವಮೊಗ್ಗ–ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರ ಕಾರುಗಳಿಗೆ ಅಳವಡಿಸಿದ್ದ ದೋಷಪೂರಿತ ಫಲಕಗಳನ್ನೂ ತೆರವು ಮಾಡಿ ಪೊಲೀಸರು ದಂಡ ಸಂಗ್ರಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.