ಯೂಟ್ಯೂಬ್ ಪ್ರಧಾನ ಕಚೇರಿಯಲ್ಲಿ ಶೂಟೌಟ್: ನಾಲ್ವರಿಗೆ ಗಾಯ

ಗುರುವಾರ , ಮಾರ್ಚ್ 21, 2019
26 °C

ಯೂಟ್ಯೂಬ್ ಪ್ರಧಾನ ಕಚೇರಿಯಲ್ಲಿ ಶೂಟೌಟ್: ನಾಲ್ವರಿಗೆ ಗಾಯ

Published:
Updated:
ಯೂಟ್ಯೂಬ್ ಪ್ರಧಾನ ಕಚೇರಿಯಲ್ಲಿ ಶೂಟೌಟ್: ನಾಲ್ವರಿಗೆ ಗಾಯ

ಸ್ಯಾನ್‌ ಫ್ರಾನ್ಸಿಸ್ಕೊ: ಮಹಿಳೆಯೊಬ್ಬಳು ಗುಂಡಿನ ದಾಳಿ ನಡೆಸಿದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಕ್ಯಾಲಿಫೋರ್ನಿಯಾದ ಸ್ಯಾನ್‌ ಬರ್ನೊದಲ್ಲಿರುವ ಯೂಟ್ಯೂಬ್ ಪ್ರಧಾನ ಕಚೇರಿಯಲ್ಲಿ ನಡೆದಿದೆ.

ಕಚೇರಿ ಬಳಿ ಬಂದ ಮಹಿಳೆ ಒಳ ಪ್ರವೇಶಿಸುವುದಕ್ಕೂ ಮುನ್ನವೇ ಗುಂಡಿನ ದಾಳಿ ಆರಂಭಿಸಿದ್ದಾಳೆ. ಇದರಿಂದ ಭೀತರಾದ ಸಿಬ್ಬಂದಿ ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲಿ ಆಕೆ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಗಾಯಾಳುಗಳನ್ನು ಸ್ಯಾನ್‌ ಫ್ರಾನ್ಸಿಸ್ಕೊದ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಳಿ ಹಿಂದೆ ಭಯೋತ್ಪಾದಕರ ಕೈವಾಡ ಇರುವ ಸಾಧ್ಯತೆ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry