ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 24–4–1968

Last Updated 23 ಏಪ್ರಿಲ್ 2018, 19:47 IST
ಅಕ್ಷರ ಗಾತ್ರ

ನದಿ ಜಲವಿವಾದ ಇತ್ಯರ್ಥ: ಪ್ರಧಾನಿಯ ಅಂತಿಮ ಯತ್ನ 
ಬೆಂಗಳೂರು, ಏ. 23– ಅಂತರರಾಜ್ಯ ನದಿ ನೀರು ವಿವಾದದ ಇತ್ಯರ್ಥಕ್ಕೆ ಪ್ರಧಾನಿ ಶ್ರೀಮತಿ ಇಂದಿರಾ ಮತ್ತೊಮ್ಮೆ ಪ್ರಯತ್ನ ಮಾಡಿರುವ ಕಾರಣ, ಕೃಷ್ಣಾ– ಗೋದಾವರಿ ನೀರು ವಿವಾದವನ್ನು ಪಂಚಾಯಿತಿಗೆ ಒಪ್ಪಿಸಬೇಕೆಂದು ಕೇಂದ್ರಕ್ಕೆ ನೋಟೀಸು ಕೊಡುವುದನ್ನು ರಾಜ್ಯ ಸರಕಾರ ಒಂದು ಅಥವಾ ಎರಡು ವಾರ ಮುಂದಕ್ಕೆ ಹಾಕಲು ನಿರ್ಧರಿಸಿದೆ.

ಅಂತರರಾಜ್ಯ ನದಿ ನೀರು ವಿವಾದಗಳಿಗೆ ಸಂಬಂಧಪಟ್ಟ ಶಾಸನದ ರೀತ್ಯ ವಿವಾದವನ್ನು ಪಂಚಾಯಿತಿಗೆ ಹಾಕಬೇಕೆಂದು ಕೇಂದ್ರವನ್ನು ಒತ್ತಾಯ ಮಾಡುವ ನೋಟೀಸನ್ನು ಅಡ್ವೊಕೇಟ್ ಜನರಲ್ ಅವರು ಸಿದ್ಧಗೊಳಿಸಿದ್ದಾರೆ.

ಉಸ್ತಾದ್ ಬಡೇಗುಲಾಂ ನಿಧನ 
ಹೈದರಾಬಾದ್, ಏ. 23– ಖ್ಯಾತ ಹಿಂದೂಸ್ಥಾನಿ ಸಂಗೀತಗಾರ ಶ್ರೀ ಬಡೇ ಗುಲಾಂ ಆಲಿಖಾನ್ ಅವರು ಈ ರಾತ್ರಿ 10.55 ರಲ್ಲಿ ಇಲ್ಲಿ ನಿಧನರಾದರು.

ಮಂಗಳೂರಿನ ಒಳ್ಳೆಯ ಹೆಸರನ್ನು ಉಳಿಸಿಕೊಳ್ಳಿ: ಗೃಹ ಸಚಿವ ಮನವಿ
ಮಂಗಳೂರು, ಏ. 23– ‘ಕೋಮುವಾರು ವಿಷಯವನ್ನು ನಿವಾರಿಸಿ, ಮಂಗಳೂರಿನ ಒಳ್ಳೆಯ ಹೆಸರನ್ನು ಉಳಿಸಿಕೊಳ್ಳಿ’ ಎಂದು ಗೃಹಸಚಿವ ಶ್ರೀ ಆರ್.ಎಂ. ಪಾಟೀಲರು ಇಂದು ಇಲ್ಲಿ ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡುತ್ತಾ ಕರೆಯಿತ್ತರು.

ಮಂಗಳೂರಿನಲ್ಲಿ ಅರಾಜಕತೆಯನ್ನು ಹತ್ತಿಕ್ಕಲು ಶಾಂತಿ ಸಮಿತಿ ನೀಡಿದ ಸಹಕಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಸಚಿವರು, ಶಾಂತಿಸ್ಥಾಪನೆ ಕಾರ್ಯದಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸರು, ಗೃಹರಕ್ಷಕ ದಳದವರು ನಿರ್ವಹಿಸಿದ ‍ಪಾತ್ರ ಶ್ಲಾಘನೀಯವೆಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT