ಪಿಯುಸಿ ನಂತರದ ಶೈಕ್ಷಣಿಕ ಆಯ್ಕೆ ಬದುಕು-ಭವಿಷ್ಯವನ್ನು ನಿರ್ಧರಿಸುವಂತಹದ್ದು. ಹಾಗಾಗಿ, ಪಿಯುಸಿ ಬಳಿಕ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಸಾಮಾನ್ಯವಾಗಿ ಮೂಡುವ ಜಿಜ್ಞಾಸೆ. ಈ ಹಂತದಲ್ಲಿ ಯಾರದೋ ಒತ್ತಾಸೆಗೆ ಕಿವಿಗೊಡದೆ ಆಸಕ್ತಿ ಇರುವ ಮತ್ತು ಉಪಯುಕ್ತವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದು ಒಂದು ರೀತಿಯಲ್ಲಿ ಸವಾಲು ಎಂದೇ ಹೇಳಬಹುದು.

ಪಿಯುಸಿಯಲ್ಲಿ ವಾಣಿಜ್ಯವನ್ನು ಒಂದು ವಿಷಯವಾಗಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಬಿ.ಕಾಂ. ಇಲ್ಲವೇ ಬಿ.ಬಿ.ಎಂ. ಪದವಿಗೆ ಸೇರುತ್ತಾರೆ. ಇದರಿಂದ ಬ್ಯಾಂಕ್, ಸಾಂಖ್ಯಿಕ (ಸ್ಟ್ಯಾಟಿಸ್ಟಿಕ್ಸ್), ಲೆಕ್ಕಪತ್ರ (ಅಕೌಂಟಿಂಗ್) ಮತ್ತು ಹಣಕಾಸು ಸೇವೆಗಳಿಗೆ ಸಂಬಂಧಿಸಿದಂತೆ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶ ಲಭ್ಯವಾಗಲಿದೆ. ಸಮೂಹ ಸಂವಹನ, ಫ್ಯಾಷನ್ ಮ್ಯಾನೇಜ್‌ಮೆಂಟ್, ಸರ್ಕಾರಿ ಸೇವೆಗಳು, ಕಾನೂನು ಒಳಗೊಂಡು ಇನ್ನೂ ಹಲವು ಕ್ಷೇತ್ರಗಳಲ್ಲೂ ಉದ್ಯೋಗಾವಕಾಶಗಳಿವೆ.

ಬಿ.ಕಾಂ. ಪದವಿಯ ನಂತರ ಕಂಪನಿಗಳಲ್ಲಿ ಉದ್ಯೋಗಕ್ಕೆ ನೇರ ನೇಮಕಾತಿಯ ಅವಕಾಶಗಳು ಇಂದು ಹೆಚ್ಚಿವೆ. ಪದವಿ ಮುಗಿಯುತ್ತಿದ್ದಂತೆ ನೇರವಾಗಿ ಉದ್ಯೋಗಕ್ಕೆ ಸೇರಬಹುದು. ಕೆಲವರು ಚಾರ್ಟರ್ಡ್ ಅಕೌಂಟೆಂಟ್ (ಸಿ.ಎ.) ಮಾಡುತ್ತಾರೆ. ಆದರೆ ಸ್ನಾತಕೋತ್ತರ ಪದವಿ (ಎಂ.ಬಿ.ಎ., ಎಂ.ಕಾಂ.) ಮಾಡುವುದರಿಂದ ಹೆಚ್ಚಿನ ವೇತನ, ಉನ್ನತ ಹುದ್ದೆಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬಹುದು.

ಬಿ.ಕಾಂ. ಪದವಿಯಲ್ಲಿಯೇ ಫೈನಾನ್ಸ್, ಮ್ಯಾನೇಜ್‌ಮೆಂಟ್, ಟ್ಯಾಕ್ಸೇಷನ್, ಬ್ಯಾಂಕಿಂಗ್, ಟೂರಿಸಂ ಮುಂತಾದ ಇಂದಿನ ಅವಶ್ಯಕತೆಯ ಕ್ಷೇತ್ರಗಳಲ್ಲಿ ವಿಶೇಷ ಜ್ಞಾನ ನೀಡುವ ಕೋರ್ಸ್‌ಗಳನ್ನು ಕೆಲವು ಸಂಸ್ಥೆಗಳು ನಡೆಸುತ್ತಿವೆ. ಅಂಥ ಉಪಯುಕ್ತ ಕೋರ್ಸ್‌ಗಳಿಗೆ ಸೇರಿ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಿಕೊಳ್ಳಬಹುದು.

ಬ್ಯಾಂಕಿಂಗ್ ವಲಯದಲ್ಲಿ ಕೆಲಸ ಮಾಡಲು ಬಯಸುವವರು ಬಿ.ಕಾಂ. ಅಥವಾ ಎಂ.ಕಾಂ. ಪದವಿಯ ಜತೆಗೆ ಕಂಪ್ಯೂಟರ್ ಶಿಕ್ಷಣದ ಪ್ರಮಾಣಪತ್ರ ಹೊಂದುವುದು ಜಾಣ ನಡೆ.

ವೃತ್ತಿಪರ ಕೋರ್ಸ್ ಆಯ್ಕೆ ಹೀಗಿರಲಿ
ಕೆಲವರು ಪಿಯುಸಿ ನಂತರ ವೃತ್ತಿಪರ ಕೋರ್ಸ್ (ಸಿ.ಎ., ಸಿ.ಎಸ್., ಐ.ಸಿ.ಡಬ್ಲ್ಯು.ಎ.) ಮಾಡುತ್ತಾರೆ. ಆದರೆ ಪದವಿ ಇಲ್ಲದೇ ಇದ್ದರೆ ಕೆಲಸದಲ್ಲಿ ಹೆಚ್ಚಿನ ವೇತನ, ಉನ್ನತ ಹುದ್ದೆಗೆ ಏರಲು ಕಷ್ಟಪಡಬೇಕಾಗುತ್ತದೆ. ಹಾಗಾಗಿ ಪಿಯುಸಿ ನಂತರ ಬಿ.ಕಾಂ. ಪದವಿ ಪಡೆದು ವೃತ್ತಿಪರ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು ಹೆಚ್ಚು ಸೂಕ್ತ.

ಸಿ.ಎಸ್. (ಕಂಪನಿ ಸೆಕ್ರೆಟರಿ) ಕೋರ್ಸ್ ಮಾಡಿದರೆ ಹೆಚ್ಚು ಅವಕಾಶ ಇರುವುದಿಲ್ಲ. ಸಿ.ಎ. (ಚಾರ್ಟರ್ಡ್ ಅಕೌಂಟೆನ್ಸಿ)ಗೆ ಬೇಡಿಕೆ ಹೆಚ್ಚಿದೆ. ಏಕೆಂದರೆ ಆಡಿಟ್, ಅಕೌಂಟಿಂಗ್, ಕನ್ಸಲ್ಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಬಹುದು. ಇನ್ನು ಐ.ಸಿ.ಡಬ್ಲ್ಯು.ಎ. (ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಂಡ್ ವರ್ಕ್ ಅಕೌಂಟೆಂಟ್ಸ್) ಕೋರ್ಸ್ ತಯಾರಿಕಾ ವಲಯಕ್ಕೆ ಸಂಬಂಧಿಸಿದ್ದಾಗಿದ್ದು ಇಲ್ಲೂ ಸಿ.ಎ.ಗೆ ಇರುವಷ್ಟು ಅವಕಾಶ ಇಲ್ಲ.

-ಶ್ರೀರಾಮ್, ಚಾರ್ಟರ್ಡ್ ಅಕೌಂಟೆಂಟ್

ಬೇಡಿಕೆಗೆ ತಕ್ಕಂತೆ ಹೊಸ ಕೋರ್ಸ್
ಬಿ.ಬಿ.ಎಂ.ಗೆ ಹೋಲಿಕೆ ಮಾಡಿದರೆ ಬಿ.ಕಾಂ.ಗೆ ಉತ್ತಮ ಬೇಡಿಕೆ ಇದೆ. ಉದ್ಯೋಗಾವಕಾಶವೂ ಹೆಚ್ಚಿದೆ. ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಈ ವರ್ಷದಿಂದ ಕೆಲವು ಹೊಸ ಕೋರ್ಸ್‌ಗಳನ್ನು ಪರಿಚಯಿಸುತ್ತಿದ್ದೇವೆ. ಬಿ.ಕಾಂ. ಇನ್ಶುರೆನ್ಸ್ ಅಂಡ್ ಅಕ್ಚ್ಯೂರಿಯಲ್ ಸ್ಟಡೀಸ್, ಬಿ.ಕಾಂ. ಸಪ್ಲೆ ಚೈನ್ ಮ್ಯಾನೇಜ್‌ಮೆಂಟ್, ಬಿ.ಕಾಂ. ಆನರ್ಸ್, ಬಿ.ಬಿ.ಎ. ಏವಿಯೇಷನ್ ಮ್ಯಾನೇಜ್‌ಮೆಂಟ್ ಆರಂಭಿಸಲಾಗಿದೆ.

-ಡಾ. ರಾಮಚಂದ್ರ ಗೌಡ, ಕುಲಸಚಿವ, ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯ

ಉದ್ಯೋಗಾವಕಾಶದ ಕೊರತೆ ಇಲ್ಲ

ಸಿ.ಎ., ಸಿ.ಎಸ್., ಕಾಸ್ಟ್ ಅಕೌಂಟಿಂಗ್ ಕೋರ್ಸ್ ಮಾಡಿದವರಿಗೆ ಉದ್ಯೋಗ ಅವಕಾಶ ಸಾಕಷ್ಟಿದೆ. 5 ಲಕ್ಷಕ್ಕೂ ಅಧಿಕ ನೋಂದಾಯಿತ ಕಂಪನಿಗಳಿವೆ. ಕಂಪನಿ ಸೆಕ್ರೆಟರಿ (ಸಿ.ಎ.) ಕೋರ್ಸ್ ಮಾಡಿರುವವರಿಗೆ ಆದ್ಯತೆ ಇರುವುದರಿಂದ ಈ ಕೋರ್ಸ್ ಆಯ್ಕೆ ಮಾಡಿಕೊಂಡರೆ ಸುಲಭವಾಗಿ ಕೆಲಸ ಗಿಟ್ಟಿಸಿಕೊಳ್ಳಬಹುದು.

-ಎಚ್.ಎಂ. ಶಿವಕುಮಾರ್ ಸಹಾಯಕ ಪ್ರಾಧ್ಯಾಪಕ, ಎಲ್.ಬಿ. ಅಂಡ್ ಎಸ್.ಬಿ.ಎಸ್ ಕಾಲೇಜ್, ಸಾಗರ

* ಸೇಂಟ್ ಜೋಸೆಫ್ ಕಾಲೇಜು, ಬೆಂಗಳೂರು (sjc.ac.in)

* ಕ್ರೈಸ್ಟ್ ಕಾಲೇಜು, ಬೆಂಗಳೂರು (christuni* ersity.in)

* ಕೆ.ಎಲ್.ಇ. ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯ, ಹುಬ್ಬಳ್ಳಿ (k* esjgcc.edu.in)

* ಗೋಗ್ಟೆ ಕಾಲೇಜು, ಬೆಳಗಾವಿ (gccbgm.org)

* ಎಸ್.ಡಿ.ಎಂ. ಕಾಲೇಜು, ಉಜಿರೆ (sdmcujire.in)

* ಮೌಂಟ್ ಕಾರ್ಮೆಲ್ ಕಾಲೇಜು, ಬೆಂಗಳೂರು (mountcarme* co* * egeb* r.co.in)

* ಎನ್.ಎಂ.ಕೆ.ಆರ್.ವಿ. ಕಾಲೇಜು, ಬೆಂಗಳೂರು (nmkr* co* * ege.net)

* ಎಂ.ಎಸ್. ರಾಮಯ್ಯ ಕಾಲೇಜು, ಬೆಂಗಳೂರು (msrcasc.edu.in)

* ಟಿ.ಎ. ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್, ಮಣಿಪಾಲ (tapmi.edu.in)

* ಮಣಿಪಾಲ್ ವಿಶ್ವವಿದ್ಯಾಲಯ (manipa* .edu)

* ನಿಟ್ಟೆ ವಿಶ್ವವಿದ್ಯಾಲಯ, ಮಂಗಳೂರು (nitte.edu.in)

* ಜೈನ್ ವಿಶ್ವವಿದ್ಯಾಲಯ, ಬೆಂಗಳೂರು (jainuni* eristy.ac.in)

* ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ (ku* empu.ac.in)

* ಶೇಷಾದ್ರಿಪುರಂ ಕಾಮರ್ಸ್ ಕಾಲೇಜು, ಬೆಂಗಳೂರು (scc.ac.in)

* ಜೆ.ಎಸ್.ಎಸ್. ಕಾಲೇಜು, ಮೈಸೂರು (jsscacs.edu.in)

* ಬಿ.ಕಾಂ. (ಬ್ಯಾಚುಲರ್ ಇ ನ್ ಕಾಮರ್ಸ್)

* ಬಿ.ಸಿ.ಎ. (ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್)

* ಬಿ.ಬಿ.ಎಂ. (ಬ್ಯಾಚುಲರ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್)

* ಬಿ.ಬಿ.ಎ. (ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್)

* ಬಿ.ಎಂ.ಎಸ್. (ಬ್ಯಾಚುಲರ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್)

* ಬಿ.ಟಿ.ಎ. (ಬ್ಯಾಚುಲರ್ ಆಫ್ ಟೂರಿಸಂ ಅಡ್ಮಿನಿಸ್ಟ್ರೇಷನ್)

* ಬಿ.ಎಚ್.ಎಂ. (ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್)

* ಬಿ.ಬಿ.ಎಫ್. (ಬ್ಯಾಚುಲರ್ ಆಫ್ ಬ್ಯಾಂಕಿಂಗ್ ಅಂಡ್ ಫೈನಾನ್ಸ್)

* ಬಿ.ಎ.ಎಫ್. (ಬ್ಯಾಚುಲರ್ ಆಫ್ ಕಾಮರ್ಸ್ ಇನ್ ಅಕೌಂಟಿಂಗ್ ಆಂಡ್ ಫೈನಾನ್ಸ್)

* ಬಿ.ಎಫ್.ಎಂ. (ಬ್ಯಾಚುಲರ್ ಆಫ್ ಫೈನಾನ್ಶಿಯಲ್ ಮ್ಯಾನೇಜ್‌ಮೆಂಟ್)

ಪದವಿ ನಂತರದ ಅವಕಾಶಗಳು

* ಎಂ.ಕಾಂ. * ಎಂ.ಬಿ.ಎ. * ಎಂ.ಸಿ.ಎ.

ಕೆಲವು ವೃತ್ತಿಪರ ಕೋರ್ಸ್‌ಗಳು

* ಚಾರ್ಟರ್ಡ್ ಅಕೌಂಟೆನ್ಸಿ (ಸಿ.ಎ)

* ಕಂಪನಿ ಸೆಕ್ರೆಟರಿ (ಸಿ.ಎಸ್.)

* ಕಾಸ್ಟ್ ಅಂಡ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್ (ಸಿ.ಎಂ.ಎ.)

* ಚಾರ್ಟರ್ಡ್ ಫೈನಾನ್ಶಿಯಲ್ ಅನಲಿಸ್ಟ್ (ಸಿ.ಎಫ್.ಎ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.