ಕಲಬುರಗಿ: ಚಿರತೆಯಂತೆ ಮುನ್ನುಗ್ಗಿದ ಮೈಸೂರಿನ ಚಿರಂತ್ ಪಿ. ಅವರು ಪಿಯು ಕಾಲೇಜುಗಳ ರಾಜ್ಯಮಟ್ಟದ ಬಾಲಕರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮಿಂಚು ಹರಿಸಿದರು. ಮೊದಲ ದಿನ ಬೆಂಗಳೂರು ಜಿಲ್ಲೆಗಳ ಅಥ್ಲೀಟ್ಗಳು ಪಾರಮ್ಯ ಮೆರೆದರು.

ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟದ ಮೊದಲ ದಿನವಾದ ಬುಧವಾರ ಚಿರಂತ್ ಅವರು 100 ಮೀಟರ್ ಓಟದಲ್ಲಿ 10.32 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು. ಉಡುಪಿಯ ಚಿರಾಗ್ ಪೂಜಾರಿ ಎರಡನೇ ಸ್ಥಾನ ಗಳಿಸಿದರು.

ಹೈಜಂಪ್ನಲ್ಲಿ ಮೈಸೂರಿನ ಗೌತಮ್ ಪಿ. 1.94 ಮೀ. ಎತ್ತರ ಸಾಧನೆ ಮಾಡಿದರು. ತಮ್ಮದೇ ಜಿಲ್ಲೆಯ ಅಭಿಗ್ಯಾನ್ ಗೌಡ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಗಳಿಸಿದರು. 3,000 ಮೀ. ಓಟದಲ್ಲಿ ಬೆಳಗಾವಿಯ ದಕ್ಷ್ ಪಾಟೀಲ (9 ನಿಮಿಷ 8.67 ಸೆ.) ಮೊದಲಿಗರಾಗಿ ಹೊರಹೊಮ್ಮಿದರು.

ಮೊದಲ ದಿನದ ಫಲಿತಾಂಶಗಳು: 100 ಮೀಟರ್ ಓಟ: ಚಿರಂತ್ ಪಿ. (ಮೈಸೂರು, ಕಾಲ: 10.32 ಸೆ)–1, ಚಿರಾಗ್ ಸಿ. ಪೂಜಾರಿ (ಉಡುಪಿ)–2, ಎ. ಅಬೂಬಕರ್ (ಬೆಂಗಳೂರು ಉತ್ತರ)–3. 400 ಮೀ.: ನಿತಿನ್ ಗೌಡ ಎಂ. (ಬೆಂಗಳೂರು ಗ್ರಾಮಾಂತರ, ಕಾಲ:48.16 ಸೆ.)–1, ಆಯುಷ್ ಪ್ರಾಂಜಲ್ (ದಕ್ಷಿಣ ಕನ್ನಡ)–2, ವಿಕಾಸ್ ಎನ್. ಬಾಸೂರ್ (ಉಡುಪಿ)–3. 800 ಮೀ.: ಧನುಷ್ ಬಿ.ಎಸ್ (ಬೆಂ. ಉತ್ತರ, ಕಾಲ: 2 ನಿ. 35 ಸೆ.)–1, ಸಂದೇಶ್ ಕಣಬೂರಮಠ (ಬೆಂ. ದಕ್ಷಿಣ)–2, ಸಮರ್ಥ್ ದೀಪಕ್ ಖಾಟವಾಕರ್ (ಬೆಂ. ದಕ್ಷಿಣ)–3. 3,000 ಮೀ.: ದಕ್ಷ್ ಪಾಟೀಲ (ಬೆಳಗಾವಿ, ಕಾಲ: 9 ನಿ.8.67 ಸೆ.), ಪವನ್ ವಾಲಿಕಾರ (ಬೆಂ. ಉತ್ತರ)–2, ಪೂರ್ಣಾನಂದ ಕಮತೆ (ಬೆಳಗಾವಿ)–3. 110 ಮೀ. ಹರ್ಡಲ್ಸ್: ಪೋಹನ್ ರಾಠೋಡ (ವಿಜಯಪುರ, ಕಾಲ: 13.95 ಸೆ.)–1, ಚಂದನ್ ಎಸ್. (ಬೆಂ. ಉತ್ತರ)–2, ಆಕಾಶ್ ಲಗಮಣ್ಣ ಹುಕ್ಕೇರಿ (ದಕ್ಷಿಣ ಕನ್ನಡ)–3.

ಹೈಜಂಪ್: ಗೌತಮ್ ಪಿ. (ಮೈಸೂರು, ಎತ್ತರ: 1.94 ಮೀ.)–1, ಅಭಿಗ್ಯಾನ್ ಅನಿಲ್ ಗೌಡ (ಮೈಸೂರು)–2, ಅಬ್ದುಲ್ ತವಾಬ್ (ಉತ್ತರ ಕನ್ನಡ)–3. ಡಿಸ್ಕಸ್ ಥ್ರೊ: ಅವಿನಾಶ್ ತಳಕೇರಿ (ವಿಜಯಪುರ, ದೂರ: 49.45 ಮೀ.)–1, ಅಭಿಜೀತ್ ನಾಯಕ (ಚಾಮರಾಜನಗರ)–2, ಲೋಹಿತ್ ಕುಮಾರ್ (ಬೆಂ. ದಕ್ಷಿಣ)–3. ಲಾಂಗ್ಜಂಪ್: ಅಂಥೋನಿ ಲೋಪೇಜ್ (ಉತ್ತರ ಕನ್ನಡ, ದೂರ: 6.67 ಮೀ.)–1, ಆ್ಯರನ್ ಎಸ್. (ಬೆಂ. ಉತ್ತರ)–2, ಪ್ರೇಮ್ ಮಂಜುನಾಥ ದೇವ್ಜಿ (ಬೆ. ದಕ್ಷಿಣ)–3

‘ನೀರು ವಿದ್ಯುತ್ ವ್ಯವಸ್ಥೆ ಸರಿಯಿಲ್ಲ’

ಶ್ರೀಗುರು ವಿದ್ಯಾಪೀಠದಲ್ಲಿ ಅಥ್ಲೀಟ್ಗಳಿಗೆ ವಸತಿ ವ್ಯವಸ್ಥೆ ಮಾಡಿದ್ದು ನೀರು ವಿದ್ಯುತ್ ವ್ಯವಸ್ಥೆ ಸರಿಯಾಗಿಲ್ಲ ಎಂದು ತಂಡವೊಂದರ ನೆರವು ಸಿಬ್ಬಂದಿಯೊಬ್ಬರು ದೂರಿದರು. ‘ಗಲೀಜಾದ ಬೆಂಚ್ಗಳು ವ್ಯವಸ್ಥೆ ಸರಿಯಿರದ ಕಾರಣ ನಾವು ಬೇರೆ ಕಡೆ ದುಡ್ಡುಕೊಟ್ಟು ವಸತಿಗೆ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ಶಿವಮೊಗ್ಗದ ವಿದ್ಯಾರ್ಥಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.