ಗುರುವಾರ , ಮಾರ್ಚ್ 4, 2021
29 °C

ಸತೀಶ್ ರೆಡ್ಡಿ ಪರ ನಟ ಯಶ್ ಪ್ರಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸತೀಶ್ ರೆಡ್ಡಿ ಪರ ನಟ ಯಶ್ ಪ್ರಚಾರ

ಬೆಂಗಳೂರು: ಬೊಮ್ಮನಹಳ್ಳಿ ಬಿಜೆಪಿ ಅಭ್ಯರ್ಥಿ ಎಂ.ಸತೀಶ್‌ ರೆಡ್ಡಿ ಪರ ನಟ ಯಶ್‌ ಶುಕ್ರವಾರ ಮಾತ ಯಾಚಿಸಿದರು.

ತೆರೆದ ವಾಹನದಲ್ಲಿ ರೋಡ್‌ ಷೋ ನಡೆಸಿದ ಅವರನ್ನು ನೋಡಲು ಭಾರಿ ಸಂಖ್ಯೆಯ ಜನಸ್ತೋಮ ಸೇರಿತ್ತು. ಬೊಮ್ಮನಹಳ್ಳಿ ಹೆಬ್ಬಾಗಿಲಲ್ಲಿರುವ ವಿವೇಕಾನಂದ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಯಶ್ ಜನರತ್ತ ಕೈಬೀಸಿ ಧನ್ಯವಾದ ಅರ್ಪಿಸಿದರು.

‘ಪಕ್ಷದ ಪರವಾಗಿ ಮತಯಾಚಿಸಲು ನಾನು ಬಂದಿಲ್ಲ. ಸತೀಶ್ ರೆಡ್ಡಿ ನನ್ನ ಆತ್ಮೀಯರು, ಕ್ಷೇತ್ರದಲ್ಲಿ ಅವರು ಮಾಡಿರುವ ಜನಪರ ಕೆಲಸಗಳನ್ನು ಕಣ್ಣಾರೆ ಕಂಡಿದ್ದೇನೆ. ಈ ಕಾರಣದಿಂದ ಅವರ ಪರ ಪ್ರಚಾರಕ್ಕೆ ಬಂದಿದ್ದೇನೆ’ ಎಂದು ಯಶ್‌ ಸ್ಪಷ್ಟಪಡಿಸಿದರು.

‘ಈ ಭಾಗದಲ್ಲಿ ನೆರೆ ಬಂದ ವೇಳೆ ಸತೀಶ್ ರೆಡ್ಡಿ ಜನರೊಂದಿಗೆ ನಿಂತು ಅವರ ಕಷ್ಟಗಳಿಗೆ ಸ್ಪಂದಿಸಿದ ರೀತಿಯ ಬಗ್ಗೆ ಅಭಿಮಾನವಿದೆ. ರಾಜಕೀಯದಲ್ಲಿ ತೊಡಗಿಕೊಳ್ಳುತ್ತಿರುವ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ನನ್ನ ಈ ನಡೆಯ ಬಗ್ಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ಚುನಾವಣೆಗಾಗಿ ಸತೀಶ್ ಜೊತೆ ಇದ್ದೇನೆ. ಆದರೆ, ಜನರಿಗೆ ಅನ್ಯಾಯವಾದಾಗ ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ’ ಎಂದು ಭರವಸೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.