ಶನಿವಾರ, ಮಾರ್ಚ್ 6, 2021
24 °C

ಕಾಂಗ್ರೆಸ್‌ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಹಾರಾಡಿದ್ದು ಪಾಕ್‌ ಧ್ವಜ ಅಲ್ಲ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಹಾರಾಡಿದ್ದು ಪಾಕ್‌ ಧ್ವಜ ಅಲ್ಲ

ಬೆಂಗಳೂರು: ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಚುನಾವಣಾ ಪ್ರಚಾರ ರ‍್ಯಾಲಿ ವೇಳೆ ಪಾಕಿಸ್ತಾನ ಧ್ವಜ ಹಾರಿಸಲಾಗಿದೆ ಎಂದು ವರದಿಯಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಅಂದು ರ‍್ಯಾಲಿ ವೇಳೆ ಹಾರಾಡಿದ್ದು ಪಾಕಿಸ್ತಾನ ಧ್ವಜವಲ್ಲ. ಬದಲಿಗೆ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌(ಐಯುಎಂಎಲ್‌) ಧ್ವಜ ಎಂದು ‘ಅಲ್ಟ್‌ ನ್ಯೂಸ್‌’ ವರದಿ ಮಾಡಿದೆ.

ಧ್ವಜದ ಮೇಲೆ ಹಸಿರು ಬಣ್ಣ ಕಂಡು ಬಂದಿದ್ದಕ್ಕೆ ಅದು ಪಾಕಿಸ್ತಾನ ಧ್ವಜ ‌ಎಂದು ಹಲವರು ಶಂಕೆ ವ್ಯಕ್ತಪಡಿಸಿದ್ದರು.

    

(ಪಾಕಿಸ್ತಾನದ ಧ್ವಜ ಎಡಚಿತ್ರ. ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ನ ಧ್ವಜ ಬಲಚಿತ್ರ)

ವ್ಯತ್ಯಾಸವಿದೆ: ಪಾಕಿಸ್ತಾನ ಧ್ವಜ ಹಾಗೂ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ನ ಧ್ವಜದ ನಡುವೆ ವ್ಯತ್ಯಾಸ ಇದೆ.

(ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವಿಡಿಯೊ ಮತ್ತು ಸಂದೇಶಗಳ ಚಿತ್ರ)

(ವಾಟ್ಸ್‌ಆ್ಯಪ್‌ನಲ್ಲಿ ವ್ಯಕ್ತವಾಗಿದ್ದ ಆಕ್ರೋಶ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.