ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆಯೊಂದರ ವಿಡಿಯೊ ಹರಿದಾಡುತ್ತಿದೆ. 16 ಸೆಕೆಂಡ್‌ನ ವಿಡಿಯೊ ಬೃಹತ್ ರ್‍ಯಾಲಿಯೊಂದರ ಐದು ತುಣುಕುಗಳನ್ನು ಒಳಗೊಂಡಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿರುವ ಜನ ಬಾವುಟ, ಬ್ಯಾನರ್‌ಗಳನ್ನು ಹಿಡಿದಿರುವಂತೆ ದೃಶ್ಯಗಳಲ್ಲಿ ಕಾಣುತ್ತದೆ. ‘ಮಣಿಪುರಕ್ಕೆ ಶಾಂತಿ ಬೇಕು’, ‘ಶಾಂತಿಗಾಗಿ ರ್‍ಯಾಲಿ’ ಎಂದು ಬ್ಯಾನರ್‌ಗಳಲ್ಲಿ ಬರೆದಿರುವಂತೆ ತೋರಿಸಲಾಗಿದೆ. ಜತೆಗೆ ಪ್ರತಿಭಟನಕಾರರು ಘೋಷಣೆಗಳನ್ನು ಕೂಗುವ ಧ್ವನಿಯೂ ವಿಡಿಯೊದಲ್ಲಿದೆ. ಈ ವಿಡಿಯೊ ಅನ್ನು ಹಂಚಿಕೊಳ್ಳುತ್ತಿರುವ ಹಲವರು, ‘ಮಣಿಪುರದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ; ಆದರೆ, ಭಾರತದ ಮಾಧ್ಯಮಗಳು ಇದನ್ನು ವರದಿ ಮಾಡುತ್ತಿಲ್ಲ’ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಈ ವಿಡಿಯೊ ಅಸಲಿ ಅಲ್ಲ.