ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check| ಉಗುಳುವುದರ ಮೂಲಕವೇ ಹಲಾಲ್‌ ಪೂರ್ಣಗೊಳಿಸಲಾಗುತ್ತದೆಯೇ?

Published 28 ಜೂನ್ 2023, 23:33 IST
Last Updated 28 ಜೂನ್ 2023, 23:33 IST
ಅಕ್ಷರ ಗಾತ್ರ

‘ಮುಸ್ಲಿಂ ಹೋಟೆಲ್‌ಗಳಲ್ಲಿ ಆಹಾರವನ್ನು ಹಲಾಲ್ ಮಾಡಲು ಉಗುಳುವುದನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ತಮಿಳುನಾಡಿನ ನ್ಯಾಯಾಲಯದ ಪ್ರಕರಣದಲ್ಲಿ, ಅಡುಗೆಯವರು ಉಗುಳದ ಹೊರತು ಹಲಾಲ್ ಪೂರ್ಣವಾಗುವುದಿಲ್ಲ ಎಂದು ಮುಸ್ಲಿಮರು ವಾದಿಸಿದರು. ಆದ್ದರಿಂದಲೇ ಮುಸಲ್ಮಾನರು ತಯಾರಿಸಿದ ಆಹಾರ ಉಗುಳದೆ ಅಪೂರ್ಣ. ಕೋರ್ಟ್ ಕೇಸ್ ನಲ್ಲಿ ಉಗುಳುವುದನ್ನು ಒಪ್ಪಿಕೊಂಡರು.. ಕಾಫಿರರು ಮುಸಲ್ಮಾನರಾಗುತ್ತಾರೆ. ಜನರೇ, ನೀವು ಮುಸಲ್ಮಾನರ ಅಂಗಡಿಗೆ ಅವರ ಲಾಲಾರಸ ತಿನ್ನಲು ಹೋಗುತ್ತೀರಾ? (ಸ್ವೀಕರಿಸಿದಂತೆ ಫಾರ್ವರ್ಡ್ ಮಾಡಲಾಗಿದೆ. ಸುದೇಶ್‌ ಕ್ಯಾಲಿಕಟ್)’ ಎಂಬಂಥ ವಾಟ್ಸ್‌ಆ್ಯಪ್‌ ಸಂದೇಶಗಳು ಸಾವಿರಾರು ಸಂಖ್ಯೆಯಲ್ಲಿ ಹರಡುತ್ತಿವೆ. ಆದರೆ, ಇದು ಸುಳ್ಳು ಸುದ್ದಿ.

ದೇವರ ನೇವೇದ್ಯಕ್ಕಾಗಿ ಶಬರಿಮಲೆ ದೇವಸ್ಥಾನಕ್ಕೆ ಹಲಾಲ್‌ ಪ್ರಮಾಣಪತ್ರ ಇರುವ ಬೆಲ್ಲವನ್ನು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ನೀಡುತ್ತದೆ. ಆದರೆ, ಶಬರಿಮಲೆ ಕಾರ್ಯಸಮಿತಿಯು ದೇವಸ್ವಂ ಮಂಡಳಿಯ ವಿರುದ್ಧ ಕೇರಳ ಹೈಕೋರ್ಟ್‌ನಲ್ಲಿ 2021ರಲ್ಲಿ ಅರ್ಜಿ ಸಲ್ಲಿಸಿತ್ತು. ‘ಆಹಾರ ಪದಾರ್ಥಕ್ಕೆ ಉಗುಳಲಿಲ್ಲ ಎಂದಾದರೆ, ಹಲಾಲ್‌ ಕ್ರಿಯೆ ಪೂರ್ಣಗೊಂಡಂತಲ್ಲ ಎಂದು ಮುಸ್ಲಿಂ ಸಮುದಾಯದವರು ಹೇಳುತ್ತಾರೆ’ ಎಂದು ಮಂಡಳಿಯು ನೀಡುವ ಬೆಲ್ಲದ ಕುರಿತು ಆ ಅರ್ಜಿಯಲ್ಲಿ ದೂರಲಾಗಿತ್ತು. ಆದರೆ, ಕೇರಳ ನ್ಯಾಯಾಲಯವು ದೇವಸ್ಥಾನದ ಈ ವಾದವನ್ನು ಒಪ್ಪಿಕೊಂಡಿಲ್ಲ. ಜೊತೆಗೆ, ತಮಿಳುನಾಡಿನ ಯಾವುದೇ ನ್ಯಾಯಾಲದಲ್ಲೂ ಇಂಥ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ನ್ಯೂಸ್‌ಚೆಕರ್‌ ಫ್ಯಾಕ್ಟ್‌ಚೆಕ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT