ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಫೈನಲ್‌: ಹನುಮಾನ ಚಾಲೀಸ ಪಠಣ ಮಾಡಲಾಗಿದೆ ಎನ್ನುವುದು ಸುಳ್ಳು ಸುದ್ದಿ

Published 22 ನವೆಂಬರ್ 2023, 0:30 IST
Last Updated 22 ನವೆಂಬರ್ 2023, 0:30 IST
ಅಕ್ಷರ ಗಾತ್ರ

‘ಆಸ್ಟ್ರೇಲಿಯಾ ಹಾಗೂ ಭಾರತದ ಮಧ್ಯ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದ ಹೊರಗಡೆ ಹನುಮಾನ ಚಾಲೀಸಾ ಪಠಣ’ ಎಂಬ ಬರಹ ಇರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಜೀ ಸುದ್ದಿ ವಾಹಿನಿ ಸೇರಿದಂತೆ ಹಲವರು ಸುದ್ದಿಯನ್ನೂ ಬಿತ್ತರಿಸಿದ್ದಾರೆ. ಹಲವು ವೆಬ್‌ಸೈಟ್‌ಗಳು ಸುದ್ದಿಯನ್ನೂ ಮಾಡಿವೆ. ಇದೇ ಕ್ರೀಡಾಂಗಣದಲ್ಲಿ ಅಕ್ಟೋಬರ್‌ 4ರಂದು ನಡೆದಿದ್ದ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ವೇಳೆಯೂ ಹನುಮಾನ ಚಾಲೀಸಾ ಪಠಣ ಮಾಡಲಾಗಿತ್ತು ಎಂದೂ ವಿಡಿಯೊವೊಂದು ಹರಿದಾಡಿತ್ತು. ಈ ಬೆಳವಣಿಗೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ–ವಿರೋಧ ಚರ್ಚೆಯೂ ನಡೆದಿತ್ತು. ಆದರೆ, ಇದು ಸುಳ್ಳು ಸುದ್ದಿ.

ಆಸ್ಟ್ರೇಲಿಯಾ ಮತ್ತು ಭಾರತದ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಹನುಮಾನ ಚಾಲೀಸ ಪಠಣ ನಡೆದಿದೆ ಎಂದು ಹರಿದಾಡುತ್ತಿರುವ ವಿಡಿಯೊದಲ್ಲಿನ ಕೆಲವು ತುಣುಕುಗಳು ಭಾರತ ಹಾಗೂ ಪಾಕಿಸ್ತಾನ ಮಧ್ಯೆ ನಡೆದ ಪಂದ್ಯದ ವೇಳೆ ಹನುಮಾನ ಚಾಲೀಸ ಪಠಣ ಮಾಡಿತ್ತು ಎನ್ನಲಾದ ವಿಡಿಯೊದ ತುಣಕುಗಳಿಗೂ ಸಾಮ್ಯತೆ ಇದೆ. ಇನ್ನೂ ಹೆಚ್ಚಿನ ಪರಿಶೀಲನೆ ನಡೆಸಿದಾಗ ವಿಡಿಯೊಗೆ ಬೇರೆ ಆಡಿಯೊವನ್ನು ಅಳವಿಡಿಸಿರುವುದು ಕಂಡುಬಂದಿತು. ಜೈಪುರದಲ್ಲಿ ಹನುಮಾನ ಚಾಲೀಸ ಮಹಾಸಮ್ಮೇಳನ ನಡೆದಿತ್ತು. ಇದರ ವಿಡಿಯೊವೊಂದು ನ.9ರಂದು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಇದೇ ವಿಡಿಯೊದ ಆಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾದ ವಿಡಿಯೊಗಳಿಗೆ ಅಳವಡಿಸಲಾಗಿದೆ ಎಂದು ‘ಬೂಮ್‌ಲೈವ್‌’ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT