ಪೊಲೀಸ್ ಅಧಿಕಾರಿ ಮತ್ತು ಮುಸ್ಲಿಂ ವ್ಯಕ್ತಿ ಮಧ್ಯೆ ವಾಗ್ವಾದ ನಡೆಯುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ದೆಹಲಿಯ ಜಹಾಂಗೀರ್ಪುರಿಯಲ್ಲಿ ನಡೆದ ಕೋಮು ಗಲಭೆ ಜೊತೆ ಈ ವಿಡಿಯೊವನ್ನು ತಳಕು ಹಾಕಲಾಗಿದೆ. ‘ಮುಸ್ಲಿಂ ವ್ಯಕ್ತಿಯೊಬ್ಬರು ಪೊಲೀಸ್ ಅಧಿಕಾರಿಗೇ ಬೆದರಿಕೆ ಒಡ್ಡುತ್ತಿದ್ದಾರೆ. ಅವರಿಬ್ಬರ ನಡುವೆ ನಡೆದ ಸಂಭಾಷಣೆ ಸಂಪೂರ್ಣವಾಗಿ ಕೇಳಿಸುವುದಿಲ್ಲ. ಆದರೆ ಸಮವಸ್ತ್ರ ತೆಗೆದು ನನ್ನನ್ನು ಭೇಟಿ ಆಗು ಎಂದು ವ್ಯಕ್ತಿಯು ಪೊಲೀಸ್ ಅಧಿಕಾರಿಗೆ ಬೆದರಿಕೆ ಒಡ್ಡಿದ್ದಾರೆ. ದೆಹಲಿಯಲ್ಲಿ ಪರಿಸ್ಥಿತಿ ಕೈಮೀರಿದೆ’ ಎಂದು ವಿಡಿಯೊ ಜೊತೆ ಮಾಹಿತಿ ಹಂಚಲಾಗಿದೆ.

ವಿಡಿಯೊ ಜೊತೆ ಹಂಚಲಾಗಿರುವ ಮಾಹಿತಿ ಸುಳ್ಳು ಎಂದು‘ದಿ ಲಾಜಿಕಲ್ ಇಂಡಿಯನ್’ ವೇದಿಕೆ ವರದಿ ಮಾಡಿದೆ. ಈ ವಿಡಿಯೊ ಸೆರೆ ಆಗಿರುವುದು ಜಹಾಂಗೀರ್ಪುರಿಯಲ್ಲಿ ಅಲ್ಲ ಬದಲಾಗಿ ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯಲ್ಲಿ. ವಿಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಪೊಲೀಸ್ ಮತ್ತು ವ್ಯಕ್ತಿ ಮಾರಾಠಿಯಲ್ಲಿ ಸಂಭಾಷಣೆ ನಡೆಸುತ್ತಿರುವುದು ತಿಳಿದುಬಂದಿದೆ. ‘ಬಂಧಿಸುತ್ತೇನೆ ಎಂದು ನನ್ನನ್ನು ಹೆದರಿಸಬೇಡಿ’ ಎಂದು ವ್ಯಕ್ತಿ ಏರುಸ್ವರದಲ್ಲಿ ಮಾತನಾಡುತ್ತಿರುವುದು ಕೇಳುತ್ತಿದೆ. 2021ರ ಮಾರ್ಚ್ 21ರಲ್ಲೇ ಈ ವಿಡಿಯೊವನ್ನು ಟ್ವೀಟ್ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.