ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಕೈಮುಗಿದು ಪುಷ್ಪನಮನ ಸಲ್ಲಿಸುತ್ತಿರುವ ಚಿತ್ರವೊಂದು ಇತ್ತೀಚೆಗೆ ವೈರಲ್ ಆಗಿದೆ. ಇಂದಿರಾ ಗಾಂಧಿ ಅವರ ಚಿತ್ರದ ಹಿಂದೆ ಮರದ ಚೌಕಟ್ಟು ಇದೆ. ಇದರ ಹಿಂದೆ ಛತ್ರಪತಿ ಶಿವಾಜಿ ಅವರ ಚಿತ್ರವಿದೆ. ಶಿವಾಜಿ ಭಾವಚಿತ್ರದ ಮೇಲೆ ಮರದ ಚೌಕಟ್ಟನ್ನು ಇರಿಸುವ ಮೂಲಕ ಮರಾಠ ಚಕ್ರವರ್ತಿಯನ್ನು ಠಾಕ್ರೆ ಅವಮಾನಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಲಾಗಿದೆ.

ವೈರಲ್ ಆಗಿರುವ ಚಿತ್ರದ ಆ್ಯಂಗಲ್ ಸಾಕಷ್ಟು ಜನರಲ್ಲಿ ಗೊಂದಲ ಹುಟ್ಟುಹಾಕಿದೆ ಎಂದು ಇಂಡಿಯಾಟುಡೇ ವೆಬ್‌ಸೈಟ್ ವರದಿ ಮಾಡಿದೆ. ಅಕ್ಟೋಬರ್ 31ರಂದು ಇಂದಿರಾಗಾಂಧಿ ಅವರ ಪುಣ್ಯತಿಥಿಯ ವೇಳೆ ಅವರ ಭಾವಚಿತ್ರಕ್ಕೆ ಠಾಕ್ರೆ ನಮಿಸಿದ್ದರು. ಆದರೆ ಇಂದಿರಾ ಫೋಟೊವನ್ನು ಇರಿಸಲಾಗಿದ್ದ ಮರದ ಚೌಕಟ್ಟನ್ನು, ಗೋಡೆಯ ಮೇಲಿರುವ ಶಿವಾಜಿ ಚಿತ್ರದ ಮೇಲೆ ಒರಗಿಸಿದಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆ. ಆದರೆ ವಿಡಿಯೊವನ್ನು ಪರಿಶೀಲಿಸಿದಾಗ, ಎರಡೂ ಚಿತ್ರಗಳ ನಡುವೆ ಸಾಕಷ್ಟು ಅಂತರವಿರುವುದು ಕಾಣಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.