ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Fact Check | ಮಹಿಳೆಯ ನೃತ್ಯಕ್ಕೂ ಬಿಜೆಪಿ ಪ್ರತಿಭಟನೆಗೂ ಸಂಬಂಧ ಇಲ್ಲ

Published : 29 ಆಗಸ್ಟ್ 2024, 22:30 IST
Last Updated : 29 ಆಗಸ್ಟ್ 2024, 22:30 IST
ಫಾಲೋ ಮಾಡಿ
Comments

ಮಹಿಳೆಯೊಬ್ಬರು ವೇದಿಕೆಯ ಮೇಲೆ ನೃತ್ಯ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದೇ ವೇದಿಕೆಯ ಹಿಂಭಾಗದಲ್ಲಿ ‘ಜಸ್ಟೀಸ್ ಫಾರ್ ಆರ್.ಜಿ.ಕರ್’ ಎಂಬ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಆರ್.ಜಿ.ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದ ವೇದಿಕೆಯಲ್ಲೇ ಮಹಿಳೆ ನೃತ್ಯ ಮಾಡಿದ್ದಾರೆ; ಬಿಜೆಪಿಯ ಈ ನಡೆ ನಾಚಿಕೆಗೇಡಿನದ್ದು ಎನ್ನುವ ಪ್ರತಿಪಾದನೆಯೊಂದಿಗೆ ವಿಡಿಯೊ ಅನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು ಪ್ರತಿಪಾದನೆ. 

ವಿಡಿಯೊ ಅನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೇದಿಕೆಯ ಹಿಂಭಾಗದಲ್ಲಿ ಬಂಗಾಳಿಯಲ್ಲಿ ‘ಮೇಳ’ ಎಂದು ಬರೆದಿರುವುದು ಕಂಡುಬರುತ್ತದೆ. ವಿಡಿಯೊ ಅನ್ನು ಮತ್ತಷ್ಟು ಪರಿಶೀಲಿಸಿದಾಗ, ಮಹಿಳೆ ನೃತ್ಯ ಮಾಡುತ್ತಿರುವ ವೇದಿಕೆಯ ಆಸುಪಾಸಿನಲ್ಲೇ ಜಾತ್ರೆಯ ವಾತಾವರಣ ಕಂಡುಬರುತ್ತದೆ. ಇದು ಬಿಜೆಪಿ ಪ್ರತಿಭಟನೆಯ ವಿಡಿಯೊ ಅಲ್ಲ ಎಂದು ಕೆಲವರು ಕಮೆಂಟ್ ಕೂಡ ಮಾಡಿದ್ದಾರೆ. ಹಾಗೆ ಕಮೆಂಟ್ ಮಾಡಿದ್ದ ಭೌಮಿಕ್ ಎನ್ನುವವರನ್ನು ಸಂಪರ್ಕಿಸಿದಾಗ, ಇದು ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ನವದ್ವೀಪ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದ ಮಾ ಮಾನಸಾ ಅವರ ಪೂಜಾ ಮಹೋತ್ಸವದ ವಿಡಿಯೊ ಆಗಿದ್ದು, ತಾನು ಕೂಡ ಆ ಜಾತ್ರೆಯ ಆಯೋಜಕರಲ್ಲಿ ಒಬ್ಬರಾಗಿರುವುದಾಗಿ ಅವರು ತಿಳಿಸಿದರು. ಜಾತ್ರೆಯ ವೇಳೆ ವೇದಿಕೆಯಲ್ಲಿ ಅತ್ಯಾಚಾರದ ವಿರುದ್ಧ ಪ್ರತಿಭಟನಾರ್ಥವಾಗಿ ತಾವೇ ವೇದಿಕೆಯಲ್ಲಿ ಪೋಸ್ಟರ್ ಹಾಕಿದ್ದಾಗಿ ಅವರು ಹೇಳಿದರು. ಆಲ್ಟ್ ನ್ಯೂಸ್ ಈ ಬಗ್ಗೆ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT