ಪುರುಷನೊಬ್ಬ ಮಹಿಳೆಯನ್ನು ಮನಬಂದಂತೆ ಥಳಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆ ನೋವಿನಿಂದ ಆಕ್ರಂದನ ಮಾಡುತ್ತಿದ್ದರೂ ಆಕೆಯನ್ನು ಥಳಿಸುವುದನ್ನು ವ್ಯಕ್ತಿಯು ನಿಲ್ಲಿಸುವುದಿಲ್ಲ. ಇದು ಅಮೆರಿಕದಲ್ಲಿ ನಡೆದಿರುವ ಘಟನೆ. ಮುಸ್ಲಿಂ ಮಹಿಳೆಯು ತಾನು ಅನ್ಯಧರ್ಮೀಯನನ್ನು ಮದುವೆಯಾಗುವುದಾಗಿ ಹೇಳಿದ ಕಾರಣ ಆಕೆಯ ಅಣ್ಣ ಆಕೆಯನ್ನು ಮನಬಂದಂತೆ ಥಳಿಸಿದ್ದಾನೆ ಎಂಬ ವಿವರಣೆ ವಿಡಿಯೊ ಜತೆ ಇದೆ. ‘ಇದೇ ವಾಸ್ತವ. ಈಗಲಾದರೂ ಕಣ್ಣು ತೆರೆಯಿರಿ ಜಾತ್ಯತೀತ ಹಿಂದೂಗಳೇ’ ಎಂಬ ಅಡಿಬರಹವನ್ನೂ ಈ ವಿಡಿಯೊಗೆ ನೀಡಲಾಗಿದೆ.

ಈ ವಿಡಿಯೊ ಜೊತೆ ಹಂಚಲಾಗಿರುವ ಮಾಹಿತಿಯು ಸುಳ್ಳು ಎಂದು ‘ದಿ ಲಾಜಿಕಲ್ ಇಂಡಿಯನ್’ ವೇದಿಕೆ ವರದಿ ಮಾಡಿದೆ. ಈ ವಿಡಿಯೊದಲ್ಲಿ ಇರುವ ಮಹಿಳೆ ರಷ್ಯಾದವರು. ಆ ಮಹಿಳೆ ಉಕ್ರೇನ್ನ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು ಆತನನ್ನು ಮದುವೆಯಾಗಲು ಮನೆಯಿಂದ ಓಡಿ ಹೋಗಲು ಪ್ರಯತ್ನಿಸಿದ್ದರು. ಈ ಕಾರಣಕ್ಕೆ ಕುಪಿತರಾದ ಕುಟುಂಬದ ಸದಸ್ಯರು ಆಕೆಯ ಮೇಲೆ ಹಲ್ಲೆ ನಡೆಸಿದ್ದರು. ಈ ಕುರಿತು ‘ಲೈಫ್’ ಎಂಬ ಪತ್ರಿಕೆಯು 2021ರ ಜುಲೈ 5ರಂದೇ ವರದಿ ಮಾಡಿತ್ತು. ಇದು ಧರ್ಮದ ಕಾರಣಕ್ಕೆ ನಡೆದ ಹಲ್ಲೆಯಲ್ಲ ಎಂದು ಲಾಜಿಕಲ್ ಇಂಡಿಯನ್ ವರದಿಯಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.