ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಮುಸ್ಲಿಮರು ನಮಾಜ್‌ ಮಾಡಿದ್ದು ರಷ್ಯಾದಲ್ಲಿ, ಪ್ಯಾರಿಸ್‌ನಲ್ಲಿ ಅಲ್ಲ

Published 5 ಜುಲೈ 2023, 23:30 IST
Last Updated 5 ಜುಲೈ 2023, 23:30 IST
ಅಕ್ಷರ ಗಾತ್ರ

ನೂರಾರು ಮಂದಿ ಮುಸ್ಲಿಮರು ರಸ್ತೆಯಲ್ಲಿ ನಮಾಜ್‌ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರ ಜತೆಯಲ್ಲಿ, ‘ನೋಡಿ. ಇದು ಪ್ಯಾರಿಸ್‌ನ ದೃಶ್ಯ. ಪ್ರತಿ ಶುಕ್ರವಾರದಂದು ಪ್ಯಾರಿಸ್‌ ಈ ರೀತಿ ಬದಲಾಗುತ್ತದೆ. ಇಂದು ಪ್ಯಾರಿಸ್‌ಗೆ ಆಗಿರುವ ಸ್ಥಿತಿ, ನಾಳೆ ಭಾರತಕ್ಕೆ ಆಗುತ್ತದೆ. ಎಚ್ಚೆತ್ತುಕೊಳ್ಳಲು ಇದು ನಮಗೆ ಕೊನೆಯ ಅವಕಾಶ. ಇದರಿಂದ ನೀವು ಬಚಾವಾಗುತ್ತೀರಾ? ಬಚಾವಾಗದಿದ್ದರೆ, ಕಾಶ್ಮೀರದಿಂದ ಪಂಡಿತರು ಓಡಿಹೋದಂತೆ ಓಡಿಹೋಗಲು ನೀವು ಸಿದ್ಧತೆ ಮಾಡಿಕೊಳ್ಳಿ’ ಎಂಬ ಸಂದೇಶವನ್ನೂ ಹಂಚಿಕೊಳ್ಳಲಾಗಿದೆ. ಆದರೆ, ಇದು ತಿರುಚಲಾದ ಮಾಹಿತಿ.

ಇದು ಪ್ಯಾರಿಸ್‌ನ ಚಿತ್ರವಲ್ಲ. ಬದಲಿಗೆ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿನ ಚಿತ್ರ. 2015ರಲ್ಲಿ ಈದ್‌ ಉಲ್‌ ಫಿತರ್‌ ದಿನದಂದು ಮಾಸ್ಕೋದ ಕೆಥೆಡ್ರಲ್‌ ಮಸೀದಿ ಎದುರು ಸಾವಿರಾರು ಮುಸ್ಲಿಮರು ನಮಾಜ್‌ ಮಾಡಿದ್ದರು. ಆ ಪ್ರಾರ್ಥನೆಯ ವಿಡಿಯೊ ಇದು. ಆ ಕಾರ್ಯಕ್ರಮದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಸಹ ಭಾಗಿಯಾಗಿದ್ದರು. ಮುಸ್ಲಿಂ ಸಮುದಾಯದ ಜನರಿಗೆ ಶುಭಾಶಯ ಕೋರಿದ್ದರು. ಹಲವು ಮಾಧ್ಯಮಗಳು ಆ ಬಗ್ಗೆ ಸುದ್ದಿ ಪ್ರಕಟಿಸಿದ್ದವು. ಆದರೆ, ಆ ವಿಡಿಯೊವನ್ನು ಬಳಸಿಕೊಂಡು ಈಗ ಸುಳ್ಳು ಸುದ್ದಿ ಸೃಷ್ಟಿಸಲಾಗಿದೆ. ಇದು ಪ್ಯಾರಿಸ್‌ನ ಸ್ಥಿತಿ, ಇದೇ ಸ್ಥಿತಿ ಭಾರತಕ್ಕೂ ಬರಲಿದೆ ಎಂಬ ಆತಂಕವನ್ನು ಸೃಷ್ಟಿಸಲು ಈ ವಿಡಿಯೊ ಬಳಸಿಕೊಳ್ಳಲಾಗಿದೆ. ಈ ಸುಳ್ಳು ಸುದ್ದಿಯ ಬಗ್ಗೆ ಆಲ್ಟ್‌ ನ್ಯೂಸ್‌, ಇಂಡಿಯಾ ಟುಡೇ, ಸಿಎನ್‌ಎನ್‌ ಮತ್ತು ಬಿಬಿಸಿ ಫ್ಯಾಕ್ಟ್‌ಚೆಕ್‌ ಪ್ರಕಟಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT